ವಿಧಾನಸಭೆಯಲ್ಲಿ ನಾನು ಕಿಮ್ಮನೆ ರತ್ನಾಕರ್ ಜೊತೆಯಲ್ಲಿ ಕೂರಬೇಕಾಗಿತ್ತು. ಕಾರ್ಯಕರ್ತರ ಶ್ರಮದ ಹೊರತಾಗಿಯೂ ಈ ಕ್ಷೇತ್ರಕ್ಕೆ ಅಗಿರುವ ಸೋಲನ್ನು ನಾನು ತುಂಬಿಸಿಕೊಡುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿರುವ ಕಾರಣ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತೀರ್ಥಹಳ್ಳಿ (ಜೂ.29): ವಿಧಾನಸಭೆಯಲ್ಲಿ ನಾನು ಕಿಮ್ಮನೆ ರತ್ನಾಕರ್ ಜೊತೆಯಲ್ಲಿ ಕೂರಬೇಕಾಗಿತ್ತು. ಕಾರ್ಯಕರ್ತರ ಶ್ರಮದ ಹೊರತಾಗಿಯೂ ಈ ಕ್ಷೇತ್ರಕ್ಕೆ ಅಗಿರುವ ಸೋಲನ್ನು ನಾನು ತುಂಬಿಸಿಕೊಡುತ್ತೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿರುವ ಕಾರಣ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸಚಿವರಾದ ನಂತರ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಸಚಿವರಿಗೆ ಪಕ್ಷದ ಕಚೇರಿಯಲ್ಲಿ ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿ, ಜಿಪಂ ಹಾಗೂ ತಾಪಂ ಚುನಾವಣೆಗಳು ಸಮೀಪಿಸುತ್ತಿವೆ. ಆ ಬಗ್ಗೆ ಕಾರ್ಯಕರ್ತರು ಸಿದ್ಧರಾಗಬೇಕು.
ಶಿವಮೊಗ್ಗದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನೀಗಿಸುವ ಸಲುವಾಗಿ ಕಚೇರಿಯನ್ನೂ ತೆರೆಯಲಾಗಿದ್ದು, ಕಾರ್ಯಕರ್ತರು ತಮ್ಮ ನ್ಯಾಯೋಚಿತ ಕೆಲಸಗಳಿಗೆ ನನ್ನ ಬಳಿ ಬರಬಹುದಾಗಿದೆ ಎಂದರು. ಕಾಂಗ್ರೆಸ್ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಅವಧಿಯ ಆಡಳಿತದ ಕುರಿತು ಶ್ವೇತಪತ್ರವನ್ನು ಹೊರಡಿಸಬೇಕು. ನರೇಂದ್ರ ಮೋದಿ ಅವರು ನೀಡಿದ ಆಶ್ವಾಸನೆಯನ್ನು ಈಡೇರಿಸುವಂತೆ ಆಗ್ರಹಿಸಿ, ಜುಲೈ 3ನೇ ತಾರೀಖಿನಂದು ಶಿವಮೊಗ್ಗದಲ್ಲಿರುವ ಗಾಂಧಿ ಪುತ್ಥಳಿಯ ಎದುರು ಒಂದು ದಿನದ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದರು.
ಐಆರ್‌ಬಿಯಿಂದ ಅವೈಜ್ಞಾನಿಕ ರಸ್ತೆ ಕಾಮಗಾರಿ: ಮಳೆಗಾಲದಲ್ಲಿ ಕಾಣ್ತಿದೆ ಅಲ್ಲಲ್ಲಿ ಗುಡ್ಡ ಕುಸಿತ!
ಕೆಂಪೇಗೌಡರ ಚಿಂತನೆ ರಾಜಕಾರಣಿಗಳಿಗೆ ಮಾದರಿ: ಕೆಂಪೇಗೌಡ ಅವರ ಜನಪರ ಕಾಳಜಿ ಮತ್ತು ಚಿಂತನೆಗಳನ್ನು ಇಂದಿನ ಜನಪ್ರತಿನಿಧಿಗಳು ಅಳವಡಿಸಿಕೊಂಡಲ್ಲಿ ಉತ್ತಮ ನಾಡನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಿರ್ಮಾತೃ ಆಗಿರುವ ಕೆಂಪೇಗೌಡ ಅವರು ಕೆರೆ-ಕಟ್ಟೆಗಳ ಬಗ್ಗೆ, ಅರಣ್ಯ ಸಂರಕ್ಷಣೆ ಬಗ್ಗೆ, ಸುಂದರ ನಗರದ ನಿರ್ಮಾಣದ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಪರಿಸರ ಸಂರಕ್ಷಿಸಿಕೊಂಡೆ ನಗರ ನಿರ್ಮಾಣದ ಚಿಂತನೆಗಳು ಅವರಲ್ಲಿ ಮನೆ ಮಾಡಿದ್ದವು. ಅವರ ಕಾರ್ಯತತ್ಪರತೆ ಜಾತಿ, ಸಮುದಾಯಕ್ಕೆ ಮೀಸಲಾಗಿರದೇ ಇಡೀ ನಾಡಿಗೆ ಮೀಸಲಾಗಿದ್ದರಿಂದ ನಾಡಪ್ರಭು ಎಂದು ಕರೆಸಿಕೊಂಡರು ಎಂದರು. ಕೆಂಪೇಗೌಡ ಹಾಗೂ ಕೆಳದಿ ಶಿವಪ್ಪ ನಾಯಕನ ಮಧ್ಯೆ ಅವಿನಾಭಾವ ಸಂಬಂಧವಿತ್ತು. ಇಬ್ಬರ ಚಿಂತನೆಗಳು ನಾಡಿನ ಏಕೀಕರಣಕ್ಕೆ ದಾರಿದೀಪಗಳಾಗಿದ್ದವು. ಬೆಂಗಳೂರು ನಿರ್ಮಿಸಲು ಕೆಂಪೇಗೌಡ ಅವರಿಗೆ ಬಿದನೂರು ಸ್ಫೂರ್ತಿಯಾಗಿತ್ತು ಎಂದರು.
Chitradurga: ಬೊಮ್ಮದೇವರಹಟ್ಟಿ ಬಳಿ ದೇವರ ಎತ್ತುಗಳಿಗೆ ಕಾಡ್ತಿದೆ ಮೇವಿನ ಅಭಾವ
ನಾಡಪ್ರಭು ಕೆಂಪೇಗೌಡ ಅವರ ಜೀವನ ಮತ್ತು ಸಾಧನೆಗಳ ಕುರಿತು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎಂ. ಭರತ್‌ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮಾಕಾಂತಗೌಡ, ಸಾಗರ ಉಪ ವಿಭಾಗಾಧಿಕಾರಿ ಡಾ. ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಹುಸೇನ್ ಸರಕಾವಸ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ಅಣ್ವೀಕರ್, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಮುಖಂಡರಾದ ಸತ್ಯನಾರಾಯಣ, ಉಪನ್ಯಾಸಕ ಉಮೇಶ್ ಭದ್ರಾಪುರ, ಕೃಷ್ಣಪ್ಪ ಕಾರೆಹೊಂಡ, ಭೈರಪ್ಪ ನಿಸರಾಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.