ನಾನು ಡಿಕೆಶಿ ಅಣ್ಣ ತಮ್ಮಂದಿರಂತೆ ಇದ್ದೆವು- ಗ್ರಾಮೀಣ ಶಾಸಕಿ ಸಂಬಂಧ ಹಾಳು ಮಾಡಿದಳು: ರಮೇಶ್‌ ಜಾರಕಿಹೊಳಿ

By Sathish Kumar KH  |  First Published Jan 30, 2023, 12:38 PM IST

ನಾನು ಮತ್ತು ಡಿಕೆ.ಶಿವಕುಮಾರ್‌ ಅಣ್ಣ ತಮ್ಮಂದಿರಂತೆ ಇದ್ದೆವು. ನಮ್ಮಿಬ್ಬರ ಸಂಬಂಧ ಹಾಳಾಗಲು ಆ ಗ್ರಾಮೀಣ ಶಾಸಕಿಯೇ ಕಾರಣ ಆಗಿದ್ದಾಳೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ.


ಬೆಳಗಾವಿ (ಜ.30): ನಾನು ಮತ್ತು ಡಿಕೆ.ಶಿವಕುಮಾರ್‌ ಅಣ್ಣ ತಮ್ಮಂದಿರಂತೆ ಇದ್ದೆವು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಟಿಕೆಟ್‌ ಕೊಡುವುದು ಬೇಡ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. ನಾನು ಒತ್ತಾಯ ಮಾಡಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ ಕೊಡಿಸಿದ್ದೆನು. ಆದರೆ, ನಮ್ಮಿಬ್ಬರ ಸಂಬಂಧ ಹಾಳಾಗಲು ಆ ಗ್ರಾಮೀಣ ಶಾಸಕಿಯೇ ಕಾರಣ ಆಗಿದ್ದಾಳೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ.

 ಕುರಿತು ಬೆಳಗಾವಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಅವರ ಪತ್ನಿ ಅಣ್ಣ ನೀವು ಪಕ್ಷವನ್ನು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದ್ದರು. ಈ ವೇಳೆ ಡಿಕೆಶಿ ಕೂಡ ನೀನು ಪಕ್ಷವನ್ನು ಬಿಟ್ಟು ಹೋಗಬೇಡ ಎಂದು ಹೇಳಿದ್ದರು. ಶಿವಕುಮಾರ್‌ ಅವರು ಆಸ್ಪತ್ರೆಯಲ್ಲಿ ಇದ್ದಾಗ ನಾನು ನೋಡುವುದಕ್ಕೆ ಹೋಗಿದ್ದೆನು. ಅಷ್ಟೊಂದು ಆತ್ಮೀಯತೆ ಇಂದ ಇದ್ದೆವು. ಆದರೆ, ಗ್ರಾಮೀಣ ಶಾಸಕಿಯಿಂದ ನಮ್ಮಿಬ್ಬರ ಉತ್ತಮ ಬಾಂಧವ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಹಾಳಾಗಿದೆ ಎಂದು ಆರೋಪಿಸಿದರು.

Tap to resize

Latest Videos

10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಆರೋಪ

ಹಗರಣ ಮಾಡಿ ಶ್ರೀಮಂತನಾದ ಡಿ.ಕೆ.ಶಿವಕುಮಾರ್: ರಾಜ್ಯದಲ್ಲಿ 1985ರಲ್ಲಿ ಹರಕು ಚಪ್ಪಲಿಯಲ್ಲಿ ರಾಜಕಾರಣಕ್ಕೆ ಬಂದಿದ್ದನು. ಕೈಯಲ್ಲಿ ಒಂದು ಎಚ್‌ಎಂಟಿ ವಾಚ್‌ ಮಾತ್ರ ಇತ್ತು. ಆಗ ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಇಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದೆವು. ಆದರೆ ಸಾಕಷ್ಟು ಹಗರಣ ಹಾಗೂ ಬ್ಲಾಕ್‌ಮೇಲ್‌ಗಳನ್ನು ಮಾಡುತ್ತಾ ಡಿ.ಕೆ.ಶಿವಕುಮಾರ್‌ ಶ್ರೀಮಂತನಾಗಿದ್ದಾನೆ. ನಾನು ಉದ್ಯಮ ಮಾಡಿಕೊಂಡು ಬಂದಿದ್ದು, ನೂರಾರು ಕೋಟಿ ರೂ. ಮಾತ್ರ ಹಣ ಸಂಪಾದನೆ ಮಾಡಿದ್ದೇನೆ. ಆದರೆ, ರಾಜಯದಲ್ಲಿ ಲೂಟಿ ಮಾಡಿ, ಹಗರಣ ಮಾಡಿ ಸಾವಿರಾರು ಕೋಟಿ ರೂ. ಒಡೆಯನಾಗಿದ್ದಾನೆ. ಲಂಡನ್‌ನಲ್ಲಿ ಒಂದು ಮನೆಯೂ ಇದೆ ಎಂದು ಮಾಹಿತಿ ನೀಡಿದರು.

ಆ ಹುಡುಗಿ ಸೇರಿ ಎಲ್ಲರನ್ನೂ ಬಂಧಿಸಬೇಕು:  ರಾಜ್ಯದಲ್ಲಿ ನನ್ನ ವಿರುದ್ಧ ಪಿತೂರಿ ಮಾಡಲು ಆ ಹುಡುಗಿ, ನರೇಶ್‌, ಶ್ರವಣ್‌, ಡ್ರೈವರ್‌ ಕೃಷ್ಣಮೂರ್ತಿ ಹಾಗೂ ಕನಕಪುರದ ಉದ್ಯಮಿಯು ಸೇರಿಕೊಂಡು ಈ ಸಿಡಿಯನ್ನು ಮಾಡಿದ್ದಾರೆ. ಆ ಹುಡುಗಿಯನ್ನು ಸೇರಿಸಿ ಎಲ್ಲರನ್ನು ಬಂಧಿಸಬೇಕು. ಅವರು ನನ್ನ ವಿರುದ್ಧ ಸಿಡಿ ಷಡ್ಯಂತ್ರ ಮಾಡಲು ಬರೋಬ್ಬರಿ 40 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಸಿಡಿ ಷಡ್ಯಂತ್ರದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಕೈವಾಡ ಇರುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ನಾನು ತಪ್ಪು ಮಾಡದಿದ್ದರೂ ಅದನ್ನು ಒಪ್ಪಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದೊಡ್ಡಿದರು ಎಂದರು.

ಇದೇ ನನ್ನ ಕೊನೇ ಚುನಾವಣೆ, ಮುಂದೆ ಕ್ಷೇತ್ರ ಬಿಡುವೆ: ರಮೇಶ್‌ ಜಾರಕಿಹೊಳಿ

ನಾನು ರಾಜಕೀಯ ನಿವೃತ್ತಿ ಆಗುವುದರೊಳಗೆ ಡಿಕೆಶಿ ರಾಜಕಾರಣ ಅಂತ್ಯ: ಕಾಂಗ್ರೆಸ್‌ ಪಕ್ಷ ಹಾಳಾಗಲು ಡಿಕೆಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ ಕಾರಣವಾಗಿದ್ದಾರೆ. ರಾಜ್ಯದಲ್ಲಿ ಜಾತಿ ಸಂಘರ್ಷವಾದರೆ ಅದಕ್ಕೆ ನೇರವಾಗಿ ಡಿಕೆಶಿ ಅವರೇ ಹೊಣೆಯಾಗಿದ್ದಾರೆ. ಯಾರನ್ನೂ ವೈಕ್ತಿಕವಾಗಿ ಟೀಕೆ ಮಾಡಬಾರದು. ಗ್ರಾಮೀಣ ಶಾಸಕಿ ನಮ್ಮ ನಡುವೆ ಎಲ್ಲವನ್ನೂ ಹಾಳು ಮಾಡಿದ್ದಾಳೆ. ಜೊತೆಗೆ, ರಾಜ್ಯದ ಕಾಂಗ್ರೆಸ್‌ ಪಕ್ಷವನ್ನೇ ಹಾಳು ಮಾಡಿದ್ದಾಳೆ. ಈಗ ಡಿಕೆಶಿ ಮತ್ತು ನನ್ನ ನಡುವೆ ವೈಯಕ್ತಿಕ ಯುದ್ಧ ಆರಂಭವಾಗಿದೆ. ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಿದೆ. ನಾನು ರಾಜಕೀಯ ನಿವೃತ್ತಿ ಆಗುವುದರೊಳಗೆ ಡಿಕೆಶಿ ರಾಜಕಾರಣ ಅಂತ್ಯವನ್ನೂ ಮಾಡುತ್ತೇನೆ. ನನ್ನ ಬಳಿ ಇರುವ ಸಿಡಿ ಕುರಿತ ಷಡ್ಯಂತ್ರದ ದಾಖಲೆಗಳನ್ನು ಸಿಬಿಐಗೆ ಕೊಟ್ಟರೆ ಅವರ ರಾಜಕಾರಣ ಅಂತ್ಯವಾಗುತ್ತದೆ ಎಂದು ಕಿಡಿಕಾರಿದರು.

2000ನೇ ಇಸವಿಯಿಂದಲೂ ಸಿಡಿ ಫ್ಯಾಕ್ಟರಿ ಆರಂಭ: ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಶುಗರ್‌ ಫ್ಯಾಕ್ಟರಿ ಆರಂಭವಾದ 2000ನೇ ಇಸವಿಯಿಂದಲೂ ಸಿಡಿ ದಂಧೆಯೂ ನಡೆಯುತ್ತಿದೆ. ನನ್ನ ಬಗ್ಗೆ ಒಟ್ಟು 20 ಸಿಡಿಗಳನ್ನು ಮಾಡಿದ್ದಾರೆ. ಈಗ ಕೇವಲ 1 ಸಿಡಿ ಬಿಡುಗಡೆ ಮಾಡಿದ್ದಾರೆ. ಇನ್ನೂ ಅವರ ಬಳಿ 11 ಸಿಡಿಗಳು ಬಾಕಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕರ ಸಿಡಿಗಳೂ ನನ್ನ ಬಳಿ ಇವೆ ಎಂದು ರಮೇಶ್‌ ಜಾರಕಿಹೊಳಿ ತಿಳಿಸಿದರು. 

click me!