ನನಗೂ ಮಂತ್ರಿಯಾಗೋ ಆಸೆ ಇದೆ: ಡಾ.ಅಜಯ್‌ ಸಿಂಗ್‌

Published : Jun 24, 2023, 11:30 PM IST
ನನಗೂ ಮಂತ್ರಿಯಾಗೋ ಆಸೆ ಇದೆ: ಡಾ.ಅಜಯ್‌ ಸಿಂಗ್‌

ಸಾರಾಂಶ

ಸತತ ಮೂರನೇ ಬಾರಿ ಶಾಸಕನಾಗಿ ಆಯ್ಕೆಗೊಂಡಿದ್ದು ಈ ಬಾರಿ ಖಚಿತವಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಂಬಿಕೆ ಇತ್ತು. ಆದರೂ ಕಾರಣಾಂತರಗಳಿಂದ ಸಿಕ್ಕಿಲ್ಲ. ಹಾಗಂತ ನನಗೆ ಬೇಸರವೂ ಇಲ್ಲ. ನನಗೆ ಹುದ್ದೆ ಮುಖ್ಯ ಅಲ್ಲ, ಪಕ್ಷದ ವರಿಷ್ಠರು ಹೇಳಿದ ಪಕ್ಷ ಕಟುವ ಕೆಲಸ ತಾವು ಮಾಡೋದಾಗಿ ಹೇಳಿದ ಶಾಸಕ ಅಜಯ್‌ ಸಿಂಗ್. 

ಕಲಬುರಗಿ(ಜೂ.24):  ಸತತ 3ನೇ ಬಾರಿ ಜೇವರ್ಗಿ ಜನತೆ ತಮ್ಮನ್ನು ಪ್ರೀತಿಯಿಂದ, ವಿಶ್ವಾಸದೊಂದಿಗೆ ಆಯ್ಕೆ ಮಾಡಿ ಸದನಕ್ಕೆ ಕಳುಹಿಸಿದ್ದಾರೆ. ನನಗೂ ಮಂತ್ರಿಯಾಗೋ ಆಸೆ ತುಂಬಾನೇ ಇದೆ. ಈ ಸಾರಿ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಕೊನೆ ಕ್ಷಣದವರೆಗೂ ಇತ್ತು. ಏಕಾಏಕಿ ಮಾರನೆ ದಿನ ಮಾಯವಾಯ್ತು. ನಾನು ಮಂತ್ರಿಗಿರಿಗಾಗಿ ಆತುರ ಪಡೋನಲ್ಲ. ನಾನು ಅದೇನಿದ್ದರೂ ಟೆಸ್ಟ್‌ ಮ್ಯಾಚ್‌ ಪ್ಲೇಯರ್‌ ಎಂದು ಜೇವರ್ಗಿ ಶಾಸಕ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ತಮ್ಮ ಮನೆಯಲ್ಲಿ ಸುದದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಮೂರನೇ ಬಾರಿ ಶಾಸಕನಾಗಿ ಆಯ್ಕೆಗೊಂಡಿದ್ದು ಈ ಬಾರಿ ಖಚಿತವಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಂಬಿಕೆ ಇತ್ತು. ಆದರೂ ಕಾರಣಾಂತರಗಳಿಂದ ಸಿಕ್ಕಿಲ್ಲ. ಹಾಗಂತ ನನಗೆ ಬೇಸರವೂ ಇಲ್ಲ. ನನಗೆ ಹುದ್ದೆ ಮುಖ್ಯ ಅಲ್ಲ , ಪಕ್ಷದ ವರಿಷ್ಠರು ಹೇಳಿದ ಪಕ್ಷ ಕಟುವ ಕೆಲಸ ತಾವು ಮಾಡೋದಾಗಿ ಶಾಸಕ ಅಜಯ್‌ ಸಿಂಗ್ ಹೇಳಿದರು.

ಅಕ್ಕಿಯನ್ನು ಮೋದಿಯವರಿಗೆ ಕೇಳಿ ಕೊಡುತ್ತೇನೆ ಎಂದು ಸಿದ್ದು ಹೇಳಿದ್ದರಾ?: ನಳಿನ್‌ ಕುಮಾರ್‌ ಕಟೀಲ್‌

ಮಂತ್ರಿ ಸ್ಥಾನ ಪಕ್ಷ ಕೊಡುತ್ತದೆಂಬ ಭರವಸೆ:

ಬರುವ ದಿನಗಳಲ್ಲಿ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ವರಿ​ಷ್ಠರು ಇವತ್ತಲ್ಲ ನಾಳೆ ನನಗೆ ಅವಕಾಶ ಮಾಡಿ ಕೊಡ್ತಾರೆ ಎನ್ನುವ ಸಂಪೂರ್ಣ ಭರವಸೆ ಇದೆ. ಕೆಲವು ಬಾರಿ ಅವಕಾಶ ಸಿಗಲು ವಿಳಂಬ ಆಗುತ್ತದೆ. ಆದರೆ ನನಗೆ ವಿಶ್ವಾಸ ಇದೆ ಅವಕಾಶ ಸಿಕ್ಕೆ ಸಿಗುತ್ತೆ ಮತ್ತು ನಾನು ಸಮರ್ಪಕವಾಗಿ ನಿಭಾಯಿಸ್ತೇನೆ. ನನ್ನ ತಂದೆಯವರೂ ಸಹ ಪಕ್ಷ ನಿಷ್ಠೆ ಮೆರೆದವರು. ನಾನೂ ಸಹ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವೆ. ಮುಂದೆ ಆ ಯೋಗಾಯೋಗ ಕೂಡಿ ಬರುವ ವಿಶ್ವಾಸ ತಮಗಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದರು.

ಗೃಹ​ಜ್ಯೋ​ತಿ ಸಮ​ಸ್ಯೆಗೆ ಜನ ಹೈರಾಣು; ಹೆಚ್ಚುವರಿ ಆಧಾರ್‌ ಸೇವಾ ಕೇಂದ್ರಕ್ಕೆ ಆಗ್ರಹ

ಹಾಗೆ ಹೇಳಿದ ಸಚಿವರನ್ನೇ ಪ್ರಶ್ನಿಸಿ:

ಸಚಿವ ಸ್ಥಾನ ಸಿಗದೆ ಅಮಾಧಾನಿಯಾಗಿರುವ ತಮ್ಮನ್ನು ಕೆಕೆಆರ್‌ಡಿಬಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿವೆಯಲ್ಲ ಎಂಬ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಈ ಕುರಿತು ಪ್ರತಿಕ್ರಯಿಸಿದ ಅಜಯ ಸಿಂಗ…, ನಾನೊಬ್ಬ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧ ಎಂದರು.

ಕೆಕೆಆರ್‌​ಡಿಬಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಸರ್ಕಾರ ಶಾಸಕರಿಗೆ ನೀಡುವ ಮೂಲಕ ಕೆಳಗಿಳಿಸಿತ್ತು. ಅದನ್ನೀಗ ಮತ್ತೆ ಸಚಿವರಿಗೇ ಜವಾಬಾರಿ ವಹಿಸುವ ಮೂಲಕ ನೇಲ್ದರ್ಜೆಗೇರಿಸುವ ಬಗ್ಗೆ ಹಾಗೂ ಮಂಡಳಿ ಅಧ್ಯಕ್ಷಗಿರಿ ಕ್ಯಾಬಿನೆಟ್‌ ದರ್ಜೆ ಸಚಿವರಿಗೆ ನೀಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯಿಸುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ತಕ್ಷಣ ಪ್ರತಿಕ್ರಿಯಿಸಿದ ಡಾ. ಅಜಯ್‌ಸಿಂಗ್‌, ಈ ಪ್ರಶ್ನೆ ಸಚಿವರಿಗೇ ಕೇಳಿ ಎಂದು ಮುಗುಳ್ನಕ್ಕರು. ತಮ್ಮ ಹಾಗೂ ಪ್ರಿಯಾಂಕ್‌ ಖರ್ಗೆ ಸ್ನೇಹದಲ್ಲಿ ಯಾವುದೇ ರೀತಿ ಬಿರುಕಿಲ್ಲ, ಜಿಲ್ಲೆಯ ಎಲ್ಲಾ ಏಳು ಜನ ನಮ್ಮ ಪಕ್ಷದ ಶಾಸಕರು ಒಂದಾಗಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಶಾಸಕ ಡಾ. ಅಜಯ್‌ ಸಿಂಗ್‌ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!