ಗ್ಯಾರಂಟಿ, ವಾರಂಟಿ ಇಲ್ಲದ ಕಾಂಗ್ರೆಸ್‌ ಸರ್ಕಾರ ವರ್ಷದೊಳಗೆ ಪತನ: ಗುತ್ತೇದಾರ್‌

By Kannadaprabha News  |  First Published Jun 24, 2023, 10:14 PM IST

ಇನ್ನು ಸ್ವಲ್ಪ ದಿನದಲ್ಲಿ ಕಾಂಗ್ರೆಸ್‌ನವರಿಗೆ ತಮ್ಮ ಮೇಲೆ ತಮಗೆ ನಂಬಿಕೆ ಇಲ್ಲದಂತಾಗುತ್ತದೆ. ಕಾಂಗ್ರೆಸ್‌ ಎಂಎಲ್‌ಎಗಳಿಗೆ ಬೇಜಾರ್‌ ಆಗಿ ಸಾಕಪ್ಪ ಈ ಸರ್ಕಾರ ಬೇಡ ಎನ್ನುವಂತಾಗಿದೆ. ಯಾರಾದರೂ ಸರ್ಕಾರ ಮಾಡ್ರಿ ನಿಮ್ಮ ಜೊತೆ ಬರುತ್ತೇವೆ ಎನ್ನುವ ವಾತಾವರಣ ನಿರ್ಮಾಣವಾದರೂ ಅಚ್ಚರಿ ಪಡುವಂತಿಲ್ಲ: ಮಾಲೀಕಯ್ಯ ಗುತ್ತೇದಾರ್‌ 


ಶಹಾಪುರ(ಜೂ.24):  ಗ್ಯಾರಂಟಿ, ವಾರಂಟಿ ಇಲ್ಲದ ಕಾಂಗ್ರೆಸ್‌ ಸರ್ಕಾರ ಒಂದು ವರ್ಷದೊಳಗೆ ಪತನವಾಗಲಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಭವಿಷ್ಯ ನುಡಿದರು.

ನಗರದ ಮೋಟಗಿ ಸಭಾಂಗಣದಲ್ಲಿ ನಡೆದ ಬಿಜೆಪಿ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿ ಯೋಜನೆ ನೀಡುವಲ್ಲಿ ವಿಫಲವಾಗುತ್ತದೆ. ಇನ್ನು ಸ್ವಲ್ಪ ದಿನದಲ್ಲಿ ಕಾಂಗ್ರೆಸ್‌ನವರಿಗೆ ತಮ್ಮ ಮೇಲೆ ತಮಗೆ ನಂಬಿಕೆ ಇಲ್ಲದಂತಾಗುತ್ತದೆ. ಕಾಂಗ್ರೆಸ್‌ ಎಂಎಲ್‌ಎಗಳಿಗೆ ಬೇಜಾರ್‌ ಆಗಿ ಸಾಕಪ್ಪ ಈ ಸರ್ಕಾರ ಬೇಡ ಎನ್ನುವಂತಾಗಿದೆ. ಯಾರಾದರೂ ಸರ್ಕಾರ ಮಾಡ್ರಿ ನಿಮ್ಮ ಜೊತೆ ಬರುತ್ತೇವೆ ಎನ್ನುವ ವಾತಾವರಣ ನಿರ್ಮಾಣವಾದರೂ ಅಚ್ಚರಿ ಪಡುವಂತಿಲ್ಲ ಎಂದರು.

Tap to resize

Latest Videos

undefined

ಆಧಾರ್‌ - ಗೃಹ​ಜ್ಯೋ​ತಿ ಸಮ​ಸ್ಯೆಗೆ ಜನ ಹೈರಾಣ..!

ಒಂದು ವರ್ಷದಲ್ಲಿದೊಳಗೆ ಪಾರ್ಲಿಮೆಂಟ್‌ ಚುನಾವಣೆ ನಡೆಯುವುದಕ್ಕಿಂತ ಮುಂಚೆ ರಾಜ್ಯ​ದಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗೋದು ಗ್ಯಾರಂಟಿ. ಸದ್ಯ ಚುನಾವಣೆ ನಡೆದರೂ ಈಗ ಬಂದ 130 ಸೀಟ್‌ ಬದಲಾಗಿ 60 ಸೀಟ್‌ ಬರಲು ಕಠಿಣವಾಗಿದೆ ಎಂದ ಅವರು, ಚುನಾವಣೆ ತಂತ್ರಗಾರಿಕೆಯಿಂದ ಗೆದ್ದು ಬಂದಿಲ್ಲ. ಕುತಂತ್ರದಿಂದ ಗೆದ್ದು ಬಂದಿದ್ದಾರೆ. ಕುತಂತ್ರದಿಂದ ಬಂದ ಸರ್ಕಾರಕ್ಕೆ ಎಲ್ಲಿಯಾದರೂ ಭವಿಷ್ಯ ಉಂಟೆ ಎಂದು ಅವರು ಹೇಳಿದರು.

click me!