Latest Videos

ಬಿಜೆಪಿ 605 ಭರ​ವ​ಸೆ​ಗ​ಳಲ್ಲಿ ಎಷ್ಟು ಈಡೇ​ರಿ​ಸಿ​ದೆ?: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಪ್ರಶ್ನೆ

By Kannadaprabha NewsFirst Published Jul 4, 2023, 12:30 AM IST
Highlights

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಆಗಿಲ್ಲ. ಆಗಲೇ ಗ್ಯಾರಂಟಿ ಜಾರಿ ಮಾಡಿ ಎಂದು ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಅವರು ನೀಡಿದ್ದ 605 ಭರವಸೆಯಲ್ಲಿ ಎಷ್ಟನ್ನು ಈಡೇರಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಒತ್ತಾಯಿಸಿದರು. 

ಶಿವಮೊಗ್ಗ (ಜು.04): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಆಗಿಲ್ಲ. ಆಗಲೇ ಗ್ಯಾರಂಟಿ ಜಾರಿ ಮಾಡಿ ಎಂದು ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಅವರು ನೀಡಿದ್ದ 605 ಭರವಸೆಯಲ್ಲಿ ಎಷ್ಟನ್ನು ಈಡೇರಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಒತ್ತಾಯಿಸಿದರು. ಇಲ್ಲಿನ ಗಾಂಧಿ ಪಾರ್ಕ್ನಲ್ಲಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮಹಾತ್ಮ ಗಾಂಧಿ ಪಾರ್ಕ್ನ ಗಾಂಧಿ ಪ್ರತಿಮೆ ಎದುರು ಹಮ್ಮಿ​ಕೊಂಡಿ​ರುವ ಉಪವಾಸ ಸತ್ಯಾಗ್ರಹ ವೇಳೆ ಮಾತ​ನಾ​ಡಿ​ದರು.

ಬಿಜೆಪಿಯವರು ಕಳೆದ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ 605 ಭರವಸೆ ನೀಡಿದ್ದರು. 4 ವರ್ಷ ಅವರ ಪಕ್ಷವೇ ಅಧಿಕಾರದಲ್ಲಿತ್ತು. ಅವರು ನೀಡಿದ್ದ ಭರವಸೆಯಲ್ಲಿ ಎಷ್ಟುಬೇಡಿಕೆಗಳು ಈಡೇರಿವೆ. ನಾವು ಅಧಿಕಾರಕ್ಕೆ ಬಂದರೆ, ಮೊದಲ ಕ್ಯಾಬಿನೆಟ್‌ನಲ್ಲೇ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಬಿಪಿಎಲ್‌ ಕಾರ್ಡ್‌ದಾರರ ತನ್ನ ಹೆಣ್ಣುಮಗಳ ಮದುವೆಗೆ 3 ಗ್ರಾಂ ಚಿನ್ನ, .25000 ನಗದು ಕೊಡುತ್ತೇವೆ ಎಂದಿದ್ದರು. ಇದೆಲ್ಲ ಯಾರಿಗೆ ಕೊಟ್ಟಿದ್ದಾರೆ ಎಂದು ಬಿಜೆ​ಪಿ ಉತ್ತರಿಸಬೇಕು ಎಂದು ಹರಿಹಾಯ್ದರು.

ಜೋಡಿಲಿಂಗದಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಆತಂಕ

ಜನರ ಬಳಿ ಕ್ಷಮೆಯಾಚಿಸಿ: ಬಿಜೆಪಿಯವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವ ಮುನ್ನ ಅವರು ಕಳೆದ ಚುನಾವಣೆಯಲ್ಲ ನೀಡಿದ್ದ ಪ್ರಣಾಳಿಕೆಯನ್ನು ಒಮ್ಮೆ ಓದಬೇಕು. ಪ್ರಧಾನಿ ನರೇಂದ್ರ ಮೋದಿ .15 ಲಕ್ಷ ಹಣ ತಂದು ಕೊಡುತ್ತೇವೆ ಎಂದಿದ್ದರು. 2022ರೊಳಗೆ ಎಲ್ಲರಿಗೂ ಮನೆ ಎಂದಿದ್ದರು. ಎಷ್ಟುಜನರ ಖಾತೆಗೆ .15 ಲಕ್ಷ ಹಾಕಿದ್ದಾರೆ? ಎಷ್ಟುಕುಟುಂಬಕ್ಕೆ ಮನೆ ಕಟ್ಟಿಸಿಕೊಟ್ಟಿದ್ದಾರೆ? ಜನರಿಗೆ ಎಲ್ಲ ಕೊಡುತ್ತೇವೆ ಎಂದು ಏನನ್ನೂ ಕೊಡದ ಇವರು ಮೊದಲು ರಾಜ್ಯ, ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಚಾಟಿ ಬೀಸಿದರು.

ಬಿಜೆಪಿಯವರಿಗೆ ಬಡಜನರ ಸಂಕಷ್ಟಕ್ಕೆ ಮಿಡಿಯುವ ಮನಸ್ಸಿಲ್ಲ. ಇವರು ಜಾತಿ, ಧರ್ಮ ಮಧ್ಯೆ ಸಂಘರ್ಷ ಸೃಷ್ಟಿಮಾಡಿ ಚುನಾವಣೆ ಗೆಲ್ಲುವುದಕ್ಕೆ ನೋಡುವುದು, ಇಲ್ಲ ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವುದು, ಇದೂ ಆಗದಿದ್ದರೆ ಗೆದ್ದ ಶಾಸಕರನ್ನೇ ಹಣ ಕೊಟ್ಟು ಖರೀದಿ ಮಾಡಿ ಅಧಿಕಾರ ಮಾಡುವುದು ನರೇಂದ್ರ ಮೋದಿ ಸ್ಯಾಟರ್ಜಿ. ಇಂಥ ಕ್ರೂರ ಮನಸ್ಥಿಯಿಂದ ಬಿಜೆಪಿಯವರು ಹೊರಬರಬೇಕು ಎಂದು ತಿಳಿ​ಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಪ್ರಮುಖರಾದ ಆರ್‌.ಎಂ.ಮಂಜುನಾಥ್‌ ಗೌಡ, ಆರ್‌. ಪ್ರಸನ್ನಕುಮಾರ್‌, ಎನ್‌.ರಮೇಶ್‌, ಎಸ್‌.ಪಿ. ಶೇಷಾದ್ರಿ, ಎಚ್‌.ಸಿ.ಯೋಗೇಶ್‌, ಇಸ್ಮಾಲ್‌ ಖಾನ್‌, ಕಲಗೋಡು ರತ್ನಾಕರ್‌, ಎಚ್‌.ಪಿ.ಗಿರೀಶ್‌, ವಿಜಯಕುಮಾರ್‌, ವೇದ ವಿಜಯಕುಮಾರ್‌, ಕೆ.ದೇವೇಂದ್ರಪ್ಪ, ಮಧುಸೂದನ್‌, ಚೇತನ್‌, ಯಮುನಾ ರಂಗೇಗೌಡ, ಕವಿತಾ ರಾಘವೇಂದ್ರ ಮತ್ತಿತರರು ಇದ್ದರು.

ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಮೇಲೆ ಪೊಲೀಸರ ಹಲ್ಲೆ ಆರೋಪ: ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಗ್ಯಾರಂಟಿ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರು ಹೊಟ್ಟೆತುಂಬಿದವರು. ಅವರಿಗೆ ಬಡವರ ಹಸಿವಿನ ಬಗ್ಗೆ ಗೊತ್ತಿಲ್ಲ. ಇವರು ಟೀಕೆ ಮಾಡುವುದಕ್ಕೆ ಇನ್ನೂ ಟೈಮ್‌ ಇದೆ. ಡಿಸೆಂಬರ್‌ ಒಳಗೆ ಎಲ್ಲ ಗ್ಯಾರಂಟಿಗಳನ್ನು ಕಾಂಗ್ರೆಸ್‌ ಪಕ್ಷದ ವರಿಷ್ಠರು ಕೊಡುತ್ತಾರೆ. ಅಲ್ಲಿಯವರಿಗೆ ಬಿಜೆಪಿಯವರು ತಾಳ್ಮೆಯಿಂದ ಇರಬೇಕು
- ಕಿಮ್ಮನೆ ರತ್ನಾ​ಕರ್‌, ಕಾಂಗ್ರೆಸ್‌ ಮುಖಂಡ

click me!