Local Body Election: ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸುವೆ: ಆನಂದ್‌ ಸಿಂಗ್‌

By Kannadaprabha News  |  First Published Dec 25, 2021, 10:02 AM IST

*  ಪ್ರತಿ ವಾರ್ಡ್‌ಗೂ ಕೋಟಿ ಅನುದಾನ
*  ಮತದಾರರ ಸಮಾವೇಶದಲ್ಲಿ ಸಿಂಗ್‌ ಭರವಸೆ
*  ಬಿಜೆಪಿ ವತಿಯಿಂದ ಹೊಸಪೇಟೆ ನಗರದ ಸರ್ವಾಂಗೀಣ ಅಭಿವೃದ್ಧಿ
 


ಹೊಸಪೇಟೆ(ಡಿ.25):  ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆ(Hosapete) ನಗರಸಭೆಯನ್ನು ಒಂದೂವರೆ ವರ್ಷದೊಳಗೆ ಮಹಾನಗರ ಪಾಲಿಕೆಯನ್ನಾಗಿ(City Corporation) ಮೇಲ್ದರ್ಜೆಗೆ ಏರಿಸಲಾಗುವುದು. ನಗರದ ಸಮಗ್ರ ಅಭಿವೃದ್ಧಿಗೆ ಪ್ರತಿ ವಾರ್ಡ್‌ಗೆ ತಲಾ ಒಂದು ಕೋಟಿ ಅನುದಾನ ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ(BJP) ಮತದಾರರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರಸಭೆಯ 35 ವಾರ್ಡ್‌ಗಳ ವ್ಯಾಪ್ತಿಯಲ್ಲೇ ಮಹಾನಗರ ಪಾಲಿಕೆ ಮಾಡಲಾಗುವುದು. ಕಮಲಾಪುರ ಪಟ್ಟಣ ಹಾಗೂ ಕಲ್ಲಹಳ್ಳಿ ಗ್ರಾಮದ ಮುಖಂಡರು ಮಹಾನಗರ ಪಾಲಿಕೆಗೆ ಸೇರಿಸುವುದು ಬೇಡ ಎಂದು ಕೋರಿದ್ದಾರೆ. ಈಗ ಹೊಸಪೇಟೆಯ 35 ವಾರ್ಡ್‌ಗಳನ್ನೊಳಗೊಂಡು ಮಹಾನಗರ ಪಾಲಿಕೆ ರಚಿಸಲು ಕಾನೂನು ಸಲಹೆ ಪಡೆದುಕೊಂಡು ನಿರ್ಧರಿಸಲಾಗುವುದು ಎಂದರು.

Latest Videos

undefined

Vidhan Parishat Election: 'ಕಾಂಗ್ರೆಸ್ಸಿಗರೇ ಬಿಜೆಪಿಗೆ ಮತ ಹಾಕಲು ಸಿದ್ದರಾಗಿದ್ದಾರೆ'

ಬಿಜೆಪಿ ಬಾವುಟ:

ನಗರಸಭೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸಲಾಗುವುದು. ಈ ಮೂಲಕ ಬಿಜೆಪಿ ವತಿಯಿಂದ ಹೊಸಪೇಟೆ ನಗರದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು.

ಹೊಸಪೇಟೆಯ ಕಮಲಾಪುರ ಪಟ್ಟಣ ಪಂಚಾಯಿತಿ ಕೂಡ ಪುರಸಭೆಯಾಗಿ ಮೇಲ್ದರ್ಜೆಗೇರಲಿದೆ. ಕಮಲಾಪುರದ ಅಭಿವೃದ್ಧಿಗಾಗಿ 130 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕ್ಯಾಬಿನೆಟ್‌ಗೆ ತರಲು ಸೂಚಿಸಿದ್ದಾರೆ ಎಂದರು.

ಸರ್ಕಾರಿ ಜಾಗದಲ್ಲಿ ವಾಸವಾಗಿರುವ 23 ಸಾವಿರ ಕುಟುಂಬಗಳಿಗೆ ಪಟ್ಟಾ ವಿತರಣೆ ಮಾಡಲಾಗುವುದು. ಈಗಾಗಲೇ ಸರ್ವೆ ನಡೆಸಲಾಗಿದ್ದು, 7 ಸಾವಿರ ಕುಟುಂಬಗಳಿಗೆ ಪಟ್ಟಾ ಈಗಾಗಲೇ ಸಿದ್ಧಗೊಂಡಿವೆ. ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌(Congress) ಸ್ಥಿತಿ ಅಧೋಗತಿಯಾಗಿದೆ. ಕಾಂಗ್ರೆಸ್‌ನಲ್ಲಿ ನೆಹರು-ಗಾಂಧಿ ಕುಟುಂಬದವರೇ ಆಡಳಿತ ನಡೆಸಿದ್ದಾರೆ. ಅಲ್ಲಿ ಕುಟುಂಬ ರಾಜಕಾರಣ(Family Politics) ಮೀತಿ ಮಿರಿದೆ. ನಾನು ಕಾಂಗ್ರೆಸ್‌ ನಿಂದ ನಿಂತ್ರೂ ಸೋಲ್ತಿನಿ ಎಂದರು.

ಕಾಂಗ್ರೆಸ್‌ ಮುಳುಗುವ ಹಡಗು ಆಗಿದೆ. ಆ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಬೆಲೆ ನೀಡಲಾಗುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹಿಟ್ಲರ್‌ನಂತೇ ಆಡಳಿತ ನಡೆಸಿದ್ದಾರೆ. ಅವರ ಬಳಿಕ ಅವರ ಮಗ ರಾಜೀವ್‌ ಗಾಂಧಿ ಪ್ರಧಾನಿಯಾದರು. ಬಳಿಕ ಮನಮೋಹನ್‌ ಸಿಂಗ್‌ ಅವರು ಗಾಂಧಿ ಕುಟುಂಬದ ಕೈಗೊಂಬೆಯಂತೇ ಆಡಳಿತ ನಡೆಸಿದರು ಎಂದರು.

ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಆಗಲು ರಾಹುಲ್‌ ಗಾಂಧಿ(Rahul Gandhi) ಅವರು ಹಿಂದೇಟು ಹಾಕುತ್ತಿದ್ದಾರೆ. ರಾಹುಲ್‌ ಗಾಂಧಿ ಅವರು ಮೂರು ದಿನ ದಿಲ್ಲಿಯಲ್ಲಿದ್ದರೆ, ಮೂರು ದಿನ ಇಟಲಿಯಲ್ಲಿ ಇರ್ತಾರೆ. ಆದ್ರೂ ಅವರಿಗೆ ಪಕ್ಷದ ಪಟ್ಟಕಟ್ಟಲು ಕಾಂಗ್ರೆಸ್‌ ಹವಣಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ನಗರಸಭೆಯ 35 ವಾರ್ಡ್‌ಗಳಲ್ಲಿ ಬಿಜೆಪಿ ಅರ್ಹರಿಗೆ ಟಿಕೆಟ್‌ ನೀಡಿದೆ. ನಗರಸಭೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಕಳೆದ ಎರಡೂವರೆ ವರ್ಷಗಳಿಂದ ಸದಸ್ಯರು ಇಲ್ಲದ್ದರಿಂದ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಹಾಗಾಗಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

Vidhan Parishat Election: ಕಾಂಗ್ರೆಸ್‌ನವರೇ ತಮ್ಮ ಅಭ್ಯರ್ಥಿ ಸೋಲಿಸ್ತಾರೆ: ಆನಂದ್‌ ಸಿಂಗ್‌

ಎಂಎಲ್ಸಿ ವೈ.ಎಂ. ಸತೀಶ್‌, ಮುಖಂಡರಾದ ಸಚ್ಚಿದಾನಂದ, ಹನುಮಂತಪ್ಪ, ಅಯ್ಯಾಳಿ ತಿಮ್ಮಪ್ಪ, ಕವಿತಾ ಸಿಂಗ್‌, ಅಶೋಕ್‌ ಜೀರೆ, ಅನಂತ ಪದ್ಮನಾಭ, ಭರಮಲಿಂಗನಗೌಡ, ಸಾಲಿಸಿದ್ದಯ್ಯಸ್ವಾಮಿ, ಗುದ್ಲಿ ಪರಶುರಾಮ, ಸಂಗಪ್ಪ, 35 ವಾರ್ಡ್‌ಗಳ ಬಿಜೆಪಿ ಅಭ್ಯರ್ಥಿಗಳು ಮತ್ತಿತರರಿದ್ದರು.

ಖುರ್ಚಿಗಳು ಖಾಲಿ ಖಾಲಿ:

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತದಾರರ ಸಮಾವೇಶ ಹಮ್ಮಿಕೊಂಡಿತ್ತು. ಜೂ. ಪುನೀತ್‌ ರಾಜಕುಮಾರ ಮತ್ತು ಜೂ. ರಾಜಕುಮಾರ ಅವರ ಹಾಡುಗಳನ್ನು ಆಲಿಸಿದ ಜನ, ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಚಳಿ ಹೊಡೆತಕ್ಕೆ ಖುರ್ಚಿಗಳನ್ನು ಖಾಲಿ ಮಾಡಿದ್ದರು. 
 

click me!