* ದುರಾಡಳಿತದಿಂದ ಬೇಸತ್ತ ಜನರಿಂದ ಕಾಂಗ್ರೆಸ್‌ಗೆ ಬೆಂಬಲ: ಶಾಸಕ ಗಣೇಶ್
* ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಲಿದೆ
* ರೈತರ ನೆರವಿಗೆ ಸರ್ಕಾರ ಧಾವಿಸಬೇಕು
ಕುರುಗೋಡು(ಡಿ.25): ಪುರಸಭೆಯಲ್ಲಿ ಕಳೆದ ಸಾಲಿನ ಬಿಜೆಪಿ(BJP) ದುರಾಡಳಿತಕ್ಕೆ ಬೇಸತ್ತ ಮತದಾರರು ಈ ಚುನಾವಣೆಯಲ್ಲಿ ಕಾಂಗ್ರೆಸ್(Congress)ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್(JN Ganesh) ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ವಾರದಿಂದ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದೇನೆ. ಎಲ್ಲ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳದ್ದೇ ದೂರುಗಳು ಕೇಳಿಬರುತ್ತಿವೆ.
ಪಟ್ಟಣದ ಜನರು ಬೀದಿ ದೀಪ, ಚರಂಡಿ, ರಸ್ತೆ ಮತ್ತು ಶುದ್ಧ ಕುಡಿಯುವ ನೀರು ಬಯಸುತ್ತಾರೆ. ಆದರೆ, ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ದುರಾಡಳಿತದಿಂದ ಚಿತ್ರಣವೇ ಬೇರಿದೆ. ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಜನರು ಅನಿವಾರ್ಯವಾಗಿ ಖಾಸಗಿ ಘಟಕಗಳನ್ನು ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
undefined
Karnataka Congress : ಆರೋಪಿಗೆ ಕಾಂಗ್ರೆಸ್‌ನಿಂದ ಚುನಾವಣೆ ಟಿಕೆಟ್!
ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಲಿದ್ದು, ಪುರಸಭೆ ಕಚೇರಿಯಲ್ಲಿನ ಭ್ರಷ್ಟಾಚಾರ(Corruption) ಹೋಗಲಾಡಿಸಿ ಜನಸಾಮಾನ್ಯರಿಗೆ ಸುಲಭವಾಗಿ ಸೇವೆ ದೊರೆಯುವಂತೆ ಮಾಡುತ್ತೇವೆ. ಪಕ್ಷಭೇದವಿಲ್ಲದೆ ಎಲ್ಲ ವಾರ್ಡ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅಕಾಲಿಕ ಮಳೆಯಿಂದ(Untimely Rain) ಬೆಳೆ ನಷ್ಟವಾಗಿ(Crop Loss) ಕುರುಗೋಡು ತಾಲೂಕಿನಲ್ಲಿ ನಾಲ್ವರು ರೈತರು(Farmers) ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. ಬೆಳೆ ನಷ್ಟವಾಗಿರುವ ಬಹುತೇಕ ರೈತರು ಚಿಂತಾಕ್ರಾಂತರಾಗಿದ್ದಾರೆ. ರಾಜ್ಯ ಸರ್ಕಾರ(Government of Karnataka) ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ನಾರಾ ಭರತ್ ರೆಡ್ಡಿ ಮಾತನಾಡಿ, ಪಟ್ಟಣದ ಪುರಸಭೆ ಚುನಾವಣೆಯಲ್ಲಿ(Election) ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯುವಕರಿಗೆ(Youths) ಹೆಚ್ಚು ಅವಕಾಶ ನೀಡಲಾಗಿದೆ. ಇಲ್ಲಿನ ಯುವಕರು ಬದಲಾವಣೆ ಬಯಸಿದ್ದು, ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ ಎಂದರು. ಮುಖಂಡರಾದ ಮುಂಡರಗಿ ನಾಗರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಎಂ.ಹನೀಫ್, ಚಾನಾಳು ಚನ್ನಬಸವರಾಜ ಮತ್ತು ಜೆ.ಓಂಕಾರಪ್ಪ ಇದ್ದರು.
ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ
ಪುರಸಭೆ ಚುನಾವಣೆ ನಿಮಿತ್ತ ಪಟ್ಟಣದ 10ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಶಾಸಕ ಸುರೇಶ್ ಬಾಬು(Suresh Babu) ಮತಯಾಚನೆ ಮಾಡಿದರು.
ನಂತರ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ಕುರುಗೋಡಿನಲ್ಲಿ(Kurugodu) ಕೈಗೊಂಡ ಅಭಿವೃದ್ಧಿ ಕಾಮಗಾರಿಗಳೇ ಪುರಸಭೆಯ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿವೆ. ಜೊತೆಗೆ ಕುರುಗೋಡು ಪಟ್ಟಣದಲ್ಲಿ ಎಲ್ಲ ವಾರ್ಡುಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಕುರುಗೋಡು ಪುರಸಭೆಯ ಎಲ್ಲ 23 ವಾರ್ಡುಗಳ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
Council Election: ಕಾಂಗ್ರೆಸ್‌ನಲ್ಲಿ ದೇಶ ಮುನ್ನಡೆಸುವ ನಾಯಕರಿಲ್ಲ: ಆನಂದ್ ಸಿಂಗ್
ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ಬಳ್ಳಾರಿ(Ballari): ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಬುಡಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್(Congress) ಮುಖಂಡ ಜೆ.ಎಸ್. ಆಂಜಿನೇಯಲು(GS Anjineyalu) ಹಾಗೂ ಅವರ ಮಕ್ಕಳ ವಿರುದ್ಧ ಇಲ್ಲಿನ ಕೌಲ್‌ಬಜಾರ್ ಠಾಣೆಯಲ್ಲಿ ಜೀವ ಬೆದರಿಕೆ, ದೌರ್ಜನ್ಯ ಆರೋಪದಡಿ ಡಿ.18 ರಂದು ಎಫ್‌ಐಆರ್(FIR) ದಾಖಲಾಗಿತ್ತು.
ಪೂರ್ಣಚಂದ್ರರಾವ್ ಎಂಬುವರು ದೂರು(Complaint) ನೀಡಿದ್ದು, ‘ಜೆ.ಎಸ್. ಆಂಜಿನೇಯಲು ಹಾಗೂ ಅವರ ಮಕ್ಕಳಾದ ಶಿವು, ಅಖಿಲ್, ಪವನ್ ಅವರು ಮನೆಗೆ ನುಗ್ಗಿ ಹಲ್ಲೆ(Assault) ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನ್ನ ಸಹೋದರ ಡ್ಯಾನಿಯಲ್ ನನಗೆ ಹಣ ಕೊಡಬೇಕಾಗಿದ್ದು, ಆ ಹಣವನ್ನು ನೀನೇ ಕೊಡಬೇಕು. ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿ, ನಂತರ ಗಾಂಧಿ ನಗರದ ಅಮ್ಮಾ ಹೋಟೆಲ್ ಬಳಿ ಮಾತನಾಡಲು ಕರೆಸಿ ಮೂರು ಖಾಲಿ ಪೇಪರ್‌ನಲ್ಲಿ ಹಾಕಿ ಸಹಿ ಹಾಕುವಂತೆ ಒತ್ತಾಯಿಸಿದ್ದರು.