ಹೋಂ ಮಿನಿಸ್ಟ್ರು ಟೀಚರ್ ತರ ವರ್ತಿಸಬಾರದು; ಖಡಕ್ ಆಗಿಬೇಕು -ಶಾಸಕ ರಾಜೂ ಗೌಡ

Published : Jul 30, 2022, 04:06 PM IST
ಹೋಂ ಮಿನಿಸ್ಟ್ರು ಟೀಚರ್ ತರ ವರ್ತಿಸಬಾರದು; ಖಡಕ್ ಆಗಿಬೇಕು -ಶಾಸಕ ರಾಜೂ ಗೌಡ

ಸಾರಾಂಶ

ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಕಠಿಣ ಕ್ರಮ ಜಾರಿಗೆ ತರಬೇಕು. ನಾವು ಸರ್ಜಿಕಲ್ ಸ್ಟ್ರೈಕ್ ಮಾಡಲು ಸಿದ್ಧ ಎಂದ ಎಂಎಲ್‌ಎ ರಾಜೂಗೌಡ

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜು.30) : ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳೂರಿನಲ್ಲಿ ಒಂದೇ ವಾರದಲ್ಲಿ ಮೂವರ ಯುವಕರ ಬರ್ಬರವಾಗಿ ಕೊಲೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಠಿಣ ಕ್ರಮಕ್ಕೆ ಶಾಸಕ ರಾಜುಗೌಡ ಆಗ್ರಹಿಸಿದರು. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಸುರಪುರ ಬಿಜೆಪಿ ಶಾಸಕ ರಾಜುಗೌಡ ಅವರು ಮಾತನಾಡಿ, ಒಂದೇ ವಾರದಲ್ಲಿಯೇ ಮೂವರು ಯುವಕರ ಕೊಲೆಯಾಗಿದೆ.ಇದೆ ರೀತಿ ಮುಂದುವರೆದರೇ  ಸಿರಿಯಸ್ ಆ್ಯಕ್ಷನ್ ತೆಗೆದುಕೊಳ್ಳದಿದ್ದರೆ ಕಷ್ಟವಾಗುತ್ತದೆ. ಹಂತಕರನ್ನು ಶೂಟೌಟ್ ಮಾಡಬೇಕೆಂದು ಶಾಸಕ ರಾಜುಗೌಡ ಅವರು ಪುನರುಚ್ಚರಿಸಿದ್ದಾರೆ.

ಯುಪಿ ಮಾದರಿ ಜಾರಿಗೆ ತರಬೇಕು..‌!

ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ(Uttara pradesh model) ಕಠಿಣ ಕ್ರಮ ಜಾರಿಗೆ ತರಬೇಕು‌ .ರಾಜ್ಯದಲ್ಲಿ ಮೋದಿ(Narendra Modi) ಹಾಗೂ ಯೋಗಿ(Yogi) ಮಾದರಿ ಕೂಡ ಬರುತ್ತದೆ. ಸರ್ಜಿಕಲ್ ಸ್ಟ್ರೈಕ್(surgical strike) ಮಾಡುವದಕ್ಕು ನಾವು ಸಿದ್ದರಿದ್ದವೆ. ಉತ್ತರ ಪ್ರದೇಶ(Uttara Pradesh) ಯಾಕೆ ಅದಕ್ಕಿಂತ ದೊಡ್ಡ ಕಠಿಣ ಕ್ರಮ ಜಾರಿಗೆ ತರಬೇಕಿದೆ‌‌. ಉತ್ತರ ಪ್ರದೇಶದ ರೀತಿ ಕರ್ನಾಟಕ ಮಾದರಿ ಆಗಿ ಕಠಿಣ ಕ್ರಮಕೈಗೊಳ್ಳಲಿ. ಹೈದ್ರಾಬಾದ್() ನಲ್ಲಿ ಪೊಲೀಸ್ ಅಧಿಕಾರಿ ಸಜ್ಜನ್ ಅವರು ಮಾಡಿದ ಶೂಟೌಟ್ ಮಾಡಲ್ ರಾಜ್ಯದಲ್ಲಿ ಜಾರಿಗೆ ತರಬೇಕಿದೆ. ಉತ್ತರ ಪ್ರದೇಶಕ್ಕಿಂHyderbadತ ವಿಶೇಷ ಕರ್ನಾಟಕ ಮಾದರಿಯನ್ನು ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಮಾಡ್ತಾರೆ. ಮಂಗಳೂರಿ(Mangaluru)ನಲ್ಲಿ ಕೊಲೆ ಮಾಡಿ ಕೇರಳಕ್ಕೆ ಓಡಿ ಹೋಗುತ್ತಾರೆ ಹಾಗಾಗಿ ‌ಕಠಿಣ ಕ್ರಮ ಅಂದರೆ ನಡೆಯೋದಿಲ್ಲ. ಮಾಡಬೇಕು ಎಂದು ತಮ್ಮದೇ ಸರ್ಕಾರಕ್ಕೆ ಚಾಟಿ ಬೀಸಿದರು.

ಉ.ಪ್ರ. ರೀತಿ ಕಾನೂನಿಗೆ ಸಿದ್ಧ, ಅಗತ್ಯಬಿದ್ದರೆ ಕಠಿಣ ಕಾನೂನು: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ SDPI, PFI ನಿಷೇಧ ಮಾಡಲಿ:

ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೆ ಸರಕಾರವಿದೆ‌. ರಾಜ್ಯದಲ್ಲಿ SDPI ಹಾಗೂ PFI ನಿಷೇಧ ಮಾಡಬೇಕು. ವಿರೋಧ ಪಕ್ಷದಲ್ಲಿದ್ದಾಗ  SDPI, PFI ಬ್ಯಾನ್ ಮಾಡುತ್ತೆವೆಂದು  ಹೇಳಿದ್ದಿವಿ‌‌‌‌. ಈಗ ಕೂಡ ಬ್ಯಾನ್ ಮಾಡುತ್ತೆವೆ ಅಂತ ಹೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು. ಬ್ಯಾನ್ ಮಾಡೋದಿದ್ರೆ  ಬ್ಯಾನ್ ಮಾಡಿ ಮಾಡಿ ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ. ನಾನು SDPI ಹಾಗೂ PFI ನಿಷೇಧ ಮಾಡುವ ಬಗ್ಗೆ ನಾನು ಇದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ಹೇಳುತ್ತೆನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಸಚಿವ ಅರಗ ಜ್ಞಾನೇಂದ್ರ ಜೊತೆ ಇದರ ಬಗ್ಗೆ ಮಾತನಾಡುತ್ತೆನೆ.

ಕಾಂಗ್ರೆಸ್ ನಾಯಕರು RSS ಶಾಖೆಗೆ ಬನ್ನಿ..!

ಸಂಘ ಪರಿವಾರ ಬ್ಯಾನ್ ಮಾಡಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸುರಪುರ ಶಾಸಕ ರಾಜುಗೌಡ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘ ಪರಿವಾರದ ಬಗ್ಗೆ ನಿಮಗೆ ಏನು ಗೊತ್ತು. ಸಂಘ ಪರಿವಾರದವರು ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಗೊತ್ತಿಲದಿದ್ದರೆ ಸಂಘದ ಶಾಖೆಗೆ ಬನ್ನಿ, ನಿಮಗೆ ಉಚಿತ ತರಬೇತಿ ಕೊಡಲಾಗುತ್ತದೆ. ಟೀಕೆ ಮಾಡದೇ ಪಕ್ಷಗಳು ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬಾರದೆಂದರು.

ಉತ್ತರ ಪ್ರದೇಶ ಮಾದರಿ ಬಿಜೆಪಿ ಚುನಾವಣಾ ತಂತ್ರಗಾರಿಕೆ?

ಹೋಂ ಮಿನಿಸ್ಟರ್ ಟೀಚರ್ ತರ ವರ್ತನೆ ಮಾಡಬಾರದು, ಖಡಕ್ ಆಗಿರ್ಬೇಕು:

ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಕರಾವಳಿಯಲ್ಲಿ ರಕ್ತದೋಕುಳಿ ನಿಲ್ತಾ ಇಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ(aaraga jnanendra) ವಿರುದ್ಧ ಸ್ವಪಕ್ಷದ ಶಾಸಕರು ಗರಂ ಆಗಿದ್ದಾರೆ, ಜೊತೆಗೆ ಎಬಿವಿಪಿ(ABVP), ಬಿಜೆಪಿ(BJP)ಹಾಗೂ ಇತರೆ ಸಂಘ ಪರಿವಾರದ ಕಾರ್ಯಕರ್ತರು ಗೃಹ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗಾಗಿ ಹೋಂ ಮಿನಿಸ್ಟರ್ ಟೀಚರ್ ತರ ವರ್ತನರ ಮಾಡಬೇಡಿ, ಖಡಕ್ ಅಗಿ ಕೆಲಸ ಮಾಡಬೇಕು, ನಿಮಗೆ ಸರ್ಕಾರ, ಸಿಎಂ ಅವ್ರು ಪ್ರೀ ಆಗಿ ಬಿಟ್ಟಿದ್ದಾರೆ, ಉತ್ತಮ ಅಧಿಕಾರಿಗಳನ್ನು ಬಳಸಿಕೊಂಡು ಹಂತಕರನ್ನು ಎಡೆಮುರಿ ಕಟ್ಟಬೇಕು ಎಂದು ಶಾಸಕ ರಾಜೂಗೌಡ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ