ಸ್ವಯಂ ಸೇವಕರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮರಲ್ಲ: ಈಶ್ವರಪ್ಪ ಕಿಡಿ

By Suvarna News  |  First Published Jul 30, 2022, 2:40 PM IST

ಸಂಘ ಪರಿವಾರದಲ್ಲಿ ಎರಡು ಗುಂಪು ಇದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ತೆವಲು ತೀರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.


ವರದಿ : ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್

ಶಿವಮೊಗ್ಗ (ಜು.30):  ಸಂಘ ಪರಿವಾರದಲ್ಲಿ ಎರಡು ಗುಂಪು ಇದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ. ರಾಷ್ಟ್ರದ್ರೋಹಿ ಮುಸಲ್ಮಾನರ ಮೇಲಿನ‌ ಸಿಟ್ಟಿನಿಂದ ಬಿಜೆಪಿ ಯುವಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದರು. ಆದರೆ ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಇದೀಗ ಹಿಂದು ಸಮಾಜ ಜಾಗೃತವಾಗಿದೆ. ಇದೇ ಕಾರಣಕ್ಕೆ ಹಿಂದು ಕಾರ್ಯಕರ್ತರ ಹತ್ಯೆಯಾದಾಗ ಜನ ಆಕ್ರೋಶಗೊಳ್ಳುತ್ತಾರೆ. ಭಾರತದಲ್ಲಿ ಹಿಂದುತ್ವ ಜಾಗೃತವಾಗಿದ್ದರಿಂದಲೇ ಭಾರತ ಇಂದು ವಿಶ್ವಗುರುವಾಗಿರುವುದು.  ಇದೀಗ ಎಬಿವಿಪಿ ಪಿಎಫ್ ಐ ಹಾಗೂ ಎಸ್ ಡಿಪಿಐ ನಿಷೇಧ ಮಾಡಬೇಕು ಎಂದು ಹೋರಾಟ‌ ಮಾಡುತಿದ್ದಾರೆ. ಬಿಜೆಪಿ ಪಕ್ಷದ ನಿಲುವು ಸಹ ಇದೇ ಆಗಿದೆ. ಪರಿವಾರದ ಬಿಕ್ಕಟ್ಟು ಗಲಭೆಗೆ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  ಸಿದ್ದರಾಮಯ್ಯ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ.? ಪಾಕಿಸ್ತಾನ ಮಾಡಿದ ದಾಳಿಗೆ‌ ಸರ್ಜಿಕಲ್ ಸ್ಟ್ರೈಕ್ ಮಾಡಿ ಮತ್ತೆ ಪಾಕಿಸ್ತಾನ ಭಾರತದ ಸುದ್ದಿಗೆ ಬರದಂತೆ ಮಾಡಿದ್ದು ಸಂಘಪರಿವಾರದ ನರೇಂದ್ರ ಮೋದಿ.

Tap to resize

Latest Videos

ದೇಶದ ಮೇಲೆ ದಾಳಿಗಳಾದಾಗ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿವಾರದ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಂಘ ಪರಿವಾರದ ಸ್ವಯಂ ಸೇವಕರ ಬಗ್ಗೆ ಸ್ವಲ್ಪವು ತಿಳಿದಿಲ್ಲ. ಸ್ವಯಂ ಸೇವಕರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮರಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಅವರ ಪಕ್ಷವನ್ನು ಸೋಲಿಸಿದ್ದು. 

ದೇಶದ ಆಶಾಕಿರಣ ಆರ್ ಎಸ್ ಎಸ್. ಸಿದ್ದರಾಮಯ್ಯ ತೆವಲು ತೀರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಜೊತೆಗೆ ಆರ್ ಎಸ್ ಎಸ್ ಬಗ್ಗೆ ತಿಳಿದುಕೊಳ್ಳಬೇಕು. ಆರ್ ಎಸ್ ಎಸ್ ಶಾಖೆಗೆ ಎರಡು ದಿನ ಬಂದು ಅಲ್ಲಿನ ಬಗ್ಗೆ ತಿಳಿದುಕೊಂಡರೆ ನಾಲಿಗೆ ಇಷ್ಟು ಉದ್ದ ಬಿಡುವುದಿಲ್ಲ. ಆರ್ ಎಸ್ ಎಸ್ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ಅವರು ತಮ್ಮ ನಾಲಿಗೆಯನ್ನು ತೊಳೆದುಕೊಳ್ಳಲಿ.

ಸಿದ್ದರಾಮಯ್ಯ ಬಂದರೆ ನಾನೇ ಆರ್ ಎಸ್ ಎಸ್ ಶಾಖೆಗೆ ಕರೆದುಕೊಂಡು ಹೋಗುತ್ತೇನೆ. ಒಕ್ಕಲಿಗರು ಕೆಂಪೇಗೌಡನ ರಕ್ತ, ಕುರುಬರು ಸಂಗೊಳ್ಳಿ ರಾಯಣ್ಣನ ರಕ್ತ ಹಂಚಿಕೊಂಡು ಹುಟ್ಟಿದವರು. ನಿಮ್ಮ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಇದೆ. ಆದರೆ ಆರ್ ಎಸ್ ಎಸ್ ನಲ್ಲಿ ಗುಂಪುಗಳಿಲ್ಲ. ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ.

Praveen Nettaru murder; ಮುಸ್ಲಿಂ ಗೂಂಡಾಗಳಿಂದ ಈ ಹತ್ಯೆ, ಈಶ್ವರಪ್ಪ ಆರೋಪ

ಹರ್ಷ ಹಾಗೂ ಪ್ರವೀಣ್ ನಲ್ಲಿ ನಾವು ಕಳೆದುಕೊಂಡು ನೋವಿನಲ್ಲಿದ್ದೇವೆ. ಕೊಲೆ‌ ಮಾಡಿದ ದೇಶ ದ್ರೋಹಿಗಳನ್ನು ಘಟನೆ ನಡೆದು 24 ಗಂಟೆ ಒಳಗಾಗಿ ಬಂಧಿಸಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ 32 ಜನ ಹಿಂದುಗಳ ಹತ್ಯೆಯಾಯಿತು ಆಗ ಎಷ್ಟು ಬಾರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದೀರಿ‌ ಸ್ಪಷ್ಟಪಡಿಸಿ. ನಳೀನ್ ಕಟೀಲು ಬಂದಾಕ್ಷಣ ಸಿದ್ದರಾಮಯ್ಯ ಸೋತರು ಹಾಗೂ ಅವರ ಸರ್ಕಾರ ಹೋಯಿತು. ಇದೇ ಸಿಟ್ಟಿಗೆ ಇದೀಗ ಸಿದ್ದರಾಮಯ್ಯ ಅವರು ಇದೀಗ ನಳೀನ್ ಕುಮಾರ್ ಕಟೀಲನ್ನು ವಿಚಾರಣೆಗೊಳಪಡಿಸಿ ಎನ್ನುತಿದ್ದಾರೆ.

ಬಿಜೆಪಿ ಕಾರ್ಯಕರ್ತರ ರಕ್ಷಣೆ ಮಾಡುವುದು ನಮ್ಮ ಕೈಯಲ್ಲಿ ಆಗುತ್ತಿಲ್ಲ - ಈಶ್ವರಪ್ಪ

ಸಿದ್ದರಾಮಯ್ಯ ಅವರು ರಾಜಕಾರಣದ ಇತಿಮಿತಿಯನ್ನು ಮೀರಿ ನಾಲಗೆ ಚಾಚುತಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಒಡೆದಿರುವುದು ಅಧಿಕಾರಕ್ಕೋಸ್ಕರವೇ ರಮೇಶ್ ಕುಮಾರ್ ಗೂಂಡಾ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇದೇ‌ ಕಾರಣದಿಂದಲೇ ರಮೇಶ್ ಕುಮಾರ್ ಮಾಧ್ಯಮದವರ ಮೇಲೆ ಹಲ್ಲೆ‌ ನಡೆಸಿದ್ದಾರೆ. ಕೂಡಲೇ ರಮೇಶ್ ಕುಮಾರ್ ಅವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು

click me!