ವರದಿ- ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬೀದರ್
ಬೀದರ್ (ಜು.30) :: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ, ಬಲವರ್ಧನೆಗೊಳಿಸುವ ಸಲುವಾಗಿಯೇ ಕಲ್ಯಾಣ ಕರ್ನಾಟಕ ಭಾಗದ ಬೀದರ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮುಂಬರುವ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು ಸೇರಿದಂತೆ ಪ್ರಮುಖರ ಸಭೆ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು, ಹೆಚ್.ಡಿ ಕುಮಾರಸ್ವಾಮಿ ಹೇಳಿದರು,.
ಬೀದರ್(Bidar) ನಗರದ ಹೋಟೆಲ್ ವೈಬ್(Hotel Vibe) ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತ್ಯಾತೀತ ಜನತಾದಳ ಪಕ್ಷ(JDS Secular)ವನ್ನು ಸಂಘಟಿಸುವ ಸಲುವಾಗಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ಚುನಾವಣಾ ಪೂರ್ವ ಸಿದ್ದತೆ ಮತ್ತು ಸಮಾಲೋಚನೆ ಸಭೆ ನಡೆಸಲಾಗುತ್ತದೆ. ಈಗ ಕಲ್ಯಾಣ ಕರ್ನಾಟಕ(Kalyana Karnataka) ಭಾಗದಿಂದ ಸಭೆ ಆರಂಭಿಸಲಾಗಿದೆ ಎಂದರು.
ಅರೋಹರ: ಹನುಮಂತ ನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ ಆಡಿಮಾಸ ಆಚರಣೆ!
ಪಕ್ಷದ ಸಂಘಟನೆ ಮತ್ತು ಬಲವರ್ಧನೆ ದೃಷ್ಟಿಯಿಂದ ನಿನ್ನೆ ಬೀದರ್ ನಗರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖರ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರು, ಪ್ರಮುಖರು ಸೇರಿದಂತೆ ಅನೇಕರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಜಿಲ್ಲೆಗಳ ಮುಖಂಡರಿಂದ ಅನಿಸಿಕೆಗಳನ್ನು ಪಡೆದುಕೊಂಡಿದ್ದೇವೆ. ಕೊಪ್ಪಳ(Koppala) ಮತ್ತು ಬಳ್ಳಾರಿ(Ballari) ಭಾಗದಲ್ಲಿ ಪಕ್ಷ ಸಂಘಟನೆಯಾಗಬೇಕಾಗಿದೆ. ಬೀದರ್, ಕಲಬುರಗಿ(Kalaburagi), ಯಾದಗಿರಿ(Yadgiri), ರಾಯಚೂರಿ(Raichuru)ನಲ್ಲಿ ಈಗಾಗಲೇ ಪಕ್ಷ ಉತ್ತಮ ರೀತಿಯಲ್ಲಿದೆ.
ನಾವು ಅನೇಕ ಬಾರಿ ಈ ಭಾಗದಲ್ಲಿ ಗೆದ್ದಿದ್ದೇವೆ. ಇನ್ನೂ ಹತ್ತು ಹನ್ನೆರಡು ದಿನಗಳಲ್ಲಿ ಬೀದರ್ ಜಿಲ್ಲೆಯ ಅಭ್ಯರ್ಥಿಗಳನ್ನು ಪೈನಲ್ ಮಾಡುವಂತೆ ಶಾಸಕ ಬಂಡೆಪ್ಪ ಖಾಶೆಂಪುರ್(MLA Bandeppa Kashempur) ರವರಿಗೆ ತಿಳಿಸಿದ್ದೇನೆ. ರಾಯಚೂರು ಜಿಲ್ಲೆಯ ಮಸ್ಕಿ ಹೊರತುಪಡಿಸಿ ಉಳಿದೆಡೆ ಸಂಘಟನೆ ಚನ್ನಾಗಿದೆ. ಮುಂದಿನ ತಿಂಗಳಲ್ಲಿ ಪಕ್ಷದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಪಂಚರತ್ನ ರಥಯಾತ್ರೆಯ ಎರಡು ಹಂತದ ಕಾರ್ಯಕ್ರಮಗಳು ಸಿದ್ದತೆ ಈಗಾಗಲೇ ನಡೆಯುತ್ತಿದೆ.
ದಿನಕ್ಕೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಹದಿನಾಲ್ಕರಿಂದ ಹದಿನಾರು ಸಭೆಗಳನ್ನು ಮಾಡುವ ಯೋಜನೆ ಇದೆ. ಅಷ್ಟೇ ಅಲ್ಲದೆ ಪ್ರತಿ ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡಲಾಗುತ್ತದೆ. ಸುಮಾರು 104-105 ದಿನಗಳ ಕಾಲ ನಿರಂತರವಾಗಿ ಕಾರ್ಯಕ್ರಮ ಮಾಡಲಾಗುತ್ತದೆ. ಎ ಕೆಟಗೇರಿಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೊದಲಿಗೆ ಅಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.
ನಮ್ಮ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಸರ್ವರಿಗೂ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ನಮ್ಮ ಪಕ್ಷ ಎಲ್ಲಿ ಎಡುವಿದೆ ಎಂಬುದನ್ನು ಅನೇಕರು ಬರೆದಿರುವ ಲೇಖನಗಳ ಮೂಲಕ ಗ್ರಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಸರಿ ಪಡಿಸುವ ಕೆಲಸ ಮಾಡುತ್ತೇನೆ. ನಾಡಿನ ಜನತೆಗೆ ಈ ಭಾರಿ ಜೆಡಿಎಸ್ ಗೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡುತ್ತೇನೆ. ರಾಜ್ಯದ ಎಲ್ಲಾ ನದಿ, ಉಪನದಿಗಳು ನಾಡಿನ ಜನತೆಗೆ ಉಪಯೋಗವಾಗುವ ರೀತಿಯಲ್ಲಿ ಮಾಡುವುದರ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಹೇಳಿದರು.
ಎರಡು ರಾಷ್ಟ್ರೀಯ ಪಕ್ಷಗಳಿಂದ ನಾಡಿನ ನೀರಾವರಿ ಯೋಜನೆಗಳನ್ನು ಪೂರೈಸಲು ಸಾಧ್ಯವಿಲ್ಲ. ಎರಡು ಪಕ್ಷಗಳು ಅಧಿಕಾರ ನಡೆಸಿರುವುದನ್ನು ನೋಡಿದ್ದೇವೆ. ಆದರೇ ಅವರು ಯಾವುದೇ ಕೆಲಸಗಳನ್ನು ಮಾಡಿಲ್ಲ. ನಾವು ಸಮ್ಮಿಶ್ರ ಸರ್ಕಾರ ಮಾಡಿದಾಗ ನಾಡಿನ ನೀರಾವರಿ ಯೋಜನೆಗಳನ್ನು ಪೂರೈಸಲು ಅವಕಾಶ ನೀಡಲಿಲ್ಲ. ನಮಗೆ ಅವಕಾಶ ನೀಡುವ ಮೂಲಕ ಸ್ವಂತ ಸರ್ಕಾರ ರಚನೆಗೆ ಅವಕಾಶ ನೀಡಿದರೆ ಅದನ್ನು ನಾವು ಮಾಡುತ್ತೇವೆ. ನಾವು ಯೋಜನೆಗಳನ್ನು ರೂಪಿಸಲು ಸಾಧ್ಯವೇ ಎಂದು ನಮ್ಮ ಪಕ್ಷದ ಕೆಲವು ಶಾಸಕರು ಪ್ರಶ್ನಿಸಿದ್ದಾರೆ. ಆದರೇ ನನಗೆ ನಂಬಿಕೆ ಇದೆ. ಜನ ನಮಗೆ ಅಧಿಕಾರ ನೀಡಬೇಕು.
ವಿಜಯೇಂದ್ರಗೆ ಬಿಎಸ್‌ವೈ ಶಿಕಾರಿಪುರ ತ್ಯಾಗ, ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದು ಹೀಗೆ
ರಾಣಿಬೆನ್ನೂರಿ(Ranebennooru)ನ ರೈತರೊಬ್ಬರು ಆತ್ನಹತ್ಯೆ(Suicide) ಮಾಡಿಕೊಂಡಿದ್ದಾರೆ. ಅದಕ್ಕೆ ಬ್ಯಾಂಕ್ ನಲ್ಲಿನ ಕಿರುಕುಳ ಕಾರಣ ಎನ್ನಲಾಗಿದೆ. ಇಂತಹ ಪರಿಸ್ಥಿತಿಯನ್ನು ಈಗಿನ ಬಿಜೆಪಿ ಸರ್ಕಾರ ನಿರ್ಮಾಣ ಮಾಡಿದೆ. ಮಳೆ ಹಾನಿಯಿಂದ, ಕೋವಿಡ್ ನಿಂದ ಉಂಟಾದ ಸಾವು ನೋವುಗಳಿಗೂ ಕೂಡ ಸೂಕ್ತವಾದ ಪರಿಹಾರ ಸಿಕ್ಕಿಲ್ಲ. ಈ ರೀತಿಯ ಆಡಳಿತ ಈ ಸರ್ಕಾರ ನೀಡುತ್ತಿದೆ.
ಪಂಚರತ್ನ ಯೋಜನೆಯ ಮೂಲಕ ರೈತರಿಗೆ ಅನುಕೂಲವಾಗುವಂತೆ ಆರ್ಥಿಕ ನೆರವು ನೀಡುವ ಯೋಜನೆಯಿದೆ. ಅವೆಲ್ಲವನ್ನೂ ಜನತೆಯ ಮುಂದೆ ಇಡುತ್ತೇನೆ. ಜನರಿಗೆ ಒಳಿತಾಗಲು ಒಂದು ಬಾರೀ ಎಲ್ಲಾ ವ್ಯಾಮೋಹಗಳನ್ನು ಬಿಟ್ಟು ಜೆಡಿಎಸ್ ಗೆ ಬೆಂಬಲ ನೀಡುವಂತೆ ನಾಡಿನ ಜನತೆಗೆ ಮನವಿ ಮಾಡುತ್ತೇನೆ. ನಾಡಿನಾದ್ಯಂತ ಪ್ರವಾಸ ಮಾಡಿ ನಮ್ಮ ಪಕ್ಷದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇನೆ. ನಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಕೂಡ ಮಾಡುತ್ತೇನೆ ಎಂದರು.
ನಿಖಿಲ್ ಕುಮಾರಸ್ವಾಮಿ ಚುನಾವಣಾ ಸ್ಪರ್ಧೆ:
ನಿಖಿಲ್ ರವರನ್ನು ಚುನಾವಣೆಗೆ ನಿಲ್ಲಿಸುವುದು ದೊಡ್ಡ ವಿಷಯವಲ್ಲ. ಅವರನ್ನು ಸ್ವಾಗತಿಸಿ ಗೆಲ್ಲಿಸಲು ಕೂಡ ಅನೇಕರು ತಯಾರಿದ್ದಾರೆ. ಆದರೇ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ 40 - 50 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ನಾನು ಅವರಿಗೆ ಜವಬ್ದಾರಿ ನೀಡುತ್ತಿದ್ದೇನೆ ಎಂದರು.
ರೈತರ ಸಾಲಮನ್ನಾ ಎಂಬುದು ತಾತ್ಕಾಲಿಕವಾದ ಪರಿಹಾರ:
ರೈತರ ಸಾಲಮನ್ನಾ ಎಂಬುದು ತಾತ್ಕಾಲಿಕವಾದ ಪರಿಹಾರವಾಗಿದೆ. ರೈತ ಸಾಲಮಾಡುವ ಪರಿಸ್ಥಿತಿ ಬರಬಾರದು ಎಂಬ ಕಾರಣಕ್ಕಾಗಿ ಕೆಲವು ಯೋಜನೆಗಳನ್ನು ನಾವು ರೂಪಿಸುತ್ತೇವೆ. ರೈತರಿಗೆ ಶಾಶ್ವತವಾದ ಪರಿಹಾರ ಬೇಕಾಗಿದೆ. ರೈತರಿಗೆ ಆರ್ಥಿಕ ನೆರವು ನೀಡುವ ಮೂಲಕ ರೈತ ಸಾಲಗಾರನಾಗದಂತೆ ಮಾಡುವ ಯೋಜನೆ ನಮ್ಮಲ್ಲಿ ಇದೆ.
ಈ ಬಾರಿ ಬಿಜೆಪಿರವರಿಗೆ ಆಪರೇಷನ್ ಕಮಲ ಮಾಡಲು ಶಕ್ತಿ ಸಿಗಲಾರದು:
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯವರಿಗೆ ಆಪರೇಷನ್ ಕಮಲ ಮಾಡಲು ಶಕ್ತಿ ಸಿಗಲ್ಲ. ಅವರಿಗೆ ಆಪರೇಷನ್ ಕಮಲ ಮಾಡಲು ಸಾಧ್ಯವಾದ್ರೆ ಅವರು ಆಪರೇಷನ್ ಕಮಲ ಮಾಡುತ್ತಾರೆ. ಅದರೆ ಈ ಭಾರಿ ಅದು ಸಾಧ್ಯವಿಲ್ಲ.
ಸಿಎಂ ಇಬ್ರಾಹಿಂರವರು ಚುನಾವಣೆಗೆ ಸ್ಪರ್ಧಿಸುವುದು ಅವರಿಗೆ ಬಿಟ್ಟ ವಿಷಯ:
ಸಿಎಂ ಇಬ್ರಾಹಿಂರವರನ್ನು ಚುನಾವಣೆಗೆ ನಿಲ್ಲಿಸಬೇಕು ಎಂಬ ಉದ್ದೇಶ ನಮಗೆ ಇದೆ. ಆದರೇ ಅದು ಅವರಿಗೆ ಬಿಟ್ಟ ವೈಯಕ್ತಿಕ ವಿಷಯವಾಗಿದೆ. ಅವರು ನಿಲ್ಲಬೇಕು ಎಂಬ ಆಸೆ ನಮಗಿದೆ ಎಂದರು.
5 ವರ್ಷ ಸರ್ಕಾರ ಕೊಟ್ರೆ ನಿಮ್ಮ ಮಗನಾಗಿ ಕೆಲಸ ಮಾಡ್ತೀನಿ: ಎಚ್‌ಡಿ ಕುಮಾರಸ್ವಾಮಿ
ಇತ್ತೀಚೆಗೆ ಹತ್ಯೆಯಾದವರ ಮನೆಗೆ ಸದ್ಯದಲ್ಲಿಯೇ ಭೇಟಿ ನೀಡುತ್ತೇನೆ:
ಇತ್ತೀಚೆಗೆ ಹತ್ಯೆಯಾದ ಮೂರು ಜನರ ಮನೆಗಳಿಗೆ ನಾನು ಸದ್ಯದಲ್ಲಿ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ. ಬಜರಂಗದಳ ಇರಲಿ, ಹಿಂದುತ್ವದ ಸಿದ್ದಾಂತ ಇಟ್ಟುಕೊಂಡು ಹೋರಾಟ ಮಾಡುವವರೆ ಇರಲಿ. ಮುಸ್ಲಿಂ ಸಂಘಟನೆಗಳೇ ಇರಲಿ ತಾವುಗಳು ತಮ್ಮ ಸಂಘಟನೆಯ ಶಕ್ತಿ ತುಂಬಿಸಿಕೊಳ್ಳುವ ಸಲುವಾಗಿ ಅಮಾಯಕರ ಜೀವನದೊಂದಿಗೆ ಚಲ್ಲಾಟವಾಡಬೇಡಿ ಎಂದು ಎಲ್ಲಾ ಸಂಘಟನೆಗಳಿಗೆ ತಿಳಿಸುತ್ತೇನೆ.
ಎನ್ಐಎಗೆ ವರ್ಗಾಯಿಸಿದ ಎಷ್ಟೋ ಕೇಸ್ ಗಳು ನಾಲ್ಕೈದು ವರ್ಷಗಳು ಕಳೆದರು ಕೂಡ ತನಿಖೆಯ ಮಾಹಿತಿ ಸಿಗುತ್ತಿಲ್ಲ. ಸರ್ಕಾರದ ಭ್ರಷ್ಟ ವ್ಯವಸ್ಥೆಯ ನಡುವೆಯೂ ಕೂಡ ನ್ಯಾಯಯುತವಾಗಿ ಕೆಲಸ ಮಾಡುವ ತನಿಖೆ ನಡೆಸುವ ಅಧಿಕಾರಿಗಳು ಇದ್ದಾರೆ. ನಮ್ಮ ಪೊಲೀಸ್ ಇಲಾಖೆಯಲ್ಲಿಯೇ ಬಹಳಷ್ಟು ಅಧಿಕಾರಿಗಳು ಇದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕಾಗಿತ್ತು. ಆದರೇ ಅದನ್ನು ಈ ಸರ್ಕಾರ ಮಾಡುತ್ತಿಲ್ಲ.
ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಪ್ರಮುಖ ಕೇಸ್ ಗಳನ್ನು ಎನ್ಐಎಗೆ ನೀಡುತ್ತಿದೆ. ಇಲ್ಲಿನ ಪ್ರಾಮಾಣಿಕ ಅಧಿಕಾರಿಗಳಿಗೆ ತನಿಖೆಗೆ ವಹಿಸಿ ನಿಸ್ಪಷ್ಯಪಾತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು. ಸಂಘಗಳನ್ನು, ಸಂಘಟನೆಗಳನ್ನು ನಿಷೇಧ ಮಾಡಿ ಎಂದು ನಾನು ಹೇಳುವುದಿಲ್ಲ. ಜನಸಾಮಾನ್ಯರ ಜೀವನದ ಜೊತೆಗೆ ಚಲ್ಲಾಟವಾಡಬೇಡಿ. ನಿಮ್ಮ ದುಡಿಮೆಯ ಮೇಲೆ ನಿಮ್ಮ ಶಕ್ತಿ ರೂಪಿಸಿಕೊಳ್ಳಿ ಎಂದು ಹೇಳುತ್ತೇನೆ. ಹಿಜಾಬ್ ಘಟನೆಯನ್ನು ದೊಡ್ಡದಾಗಿ ಮಾಡಲಾಗಿದೆ ಎಂದು ಕುಮಾರಸ್ವಾಮಿರವರು ಹೇಳಿದರು.
ಕಾರ್ಯಕರ್ತರ ವಿಷಯದಲ್ಲಿ ಈಶ್ವರಪ್ಪರವರು ಹೇಳಿರುವುದು ಯುವಕರನ್ನು ಗುಲಾಮಗಿರಿಯೆಡೆಗೆ ತೆಗೆದುಕೊಂಡು ಹೋಗುವ ರೀತಿಯಲ್ಲಿದೆ. ಅದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಕಾಂಗ್ರೆಸ್ ನಾಯಕರು ಕಲ್ಲು, ಮೊಟ್ಟೆ, ಮೆಟ್ಟು ಹೇಳಿಕೆಗಳನ್ನು ಬಿಟ್ಟು ಜನರು ನೆಮ್ಮದಿಯಿಂದ ಬದುಕಲು ಬಿಡಬೇಕು ಎಂದು ಕುಮಾರಸ್ವಾಮಿರವರು ಹೇಳಿದರು.
ಜೈ ಭೀಮ್ ಸಿನಿಮಾ ನೋಡಿ:
ಜೈ ಭೀಮ್ ಎಂಬ ಸಿನಿಮಾ ಈ ದೇಶದ ಪ್ರಸ್ತುತ ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ ಸಾಧ್ಯವಾದಷ್ಟು ಜೈ ಭೀಮ್ ಸಿನಿಮಾ ನೋಡಿ ಎಂದು ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಬಂಡೆಪ್ಪ ಖಾಶೆಂಪುರ್, ಮಾಜಿ ಸಚಿವ ಎನ್.ಬಿ ನಬಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೇರಿದಂತೆ ಅನೇಕರಿದ್ದರು,..