ಲೋಕಾಯುಕ್ತ ದಾಳಿ ವಿಚಾರ ತನಿಖೆ ನಂತರ ಎಲ್ಲವೂ ಸ್ಪಷ್ಟ: ಗೃಹ ಸಚಿವ ಆರಗ ಜ್ಞಾನೇಂದ್ರ

By Kannadaprabha News  |  First Published Mar 4, 2023, 2:00 AM IST

ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರವನ್ನು ಮಾಧ್ಯಮಗಳ ಮೂಲಕ ನನಗೆ ತಿಳಿದಿದೆ. ಈ ಕುರಿತು ನಾಲ್ಕೈದು ಜನರನ್ನು ಅರೆಸ್ಟ್‌ ಮಾಡಿದ್ದಾರೆ ಎಂದಿದ್ದಾರೆ. ವಿಷ​ಯ ಈಗ ವಿಚಾರಣೆ ಹಂತದಲ್ಲಿದ್ದು, ಈ ಬಗ್ಗೆ ನಾನು ಈಗಲೇ ಪ್ರತಿಕ್ರಿಯಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.


ಶಿವಮೊಗ್ಗ (ಮಾ.04): ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರವನ್ನು ಮಾಧ್ಯಮಗಳ ಮೂಲಕ ನನಗೆ ತಿಳಿದಿದೆ. ಈ ಕುರಿತು ನಾಲ್ಕೈದು ಜನರನ್ನು ಅರೆಸ್ಟ್‌ ಮಾಡಿದ್ದಾರೆ ಎಂದಿದ್ದಾರೆ. ವಿಷ​ಯ ಈಗ ವಿಚಾರಣೆ ಹಂತದಲ್ಲಿದ್ದು, ಈ ಬಗ್ಗೆ ನಾನು ಈಗಲೇ ಪ್ರತಿಕ್ರಿಯಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಹಣ ಅವರು ಇಟ್ಟುಕೊಂಡಿದ್ದರು ಎಂದು ತಿಳಿದಿಲ್ಲ. ಪರಿಶೀಲನೆ ನಡೆಯುತ್ತಿದೆ, ಕಾನೂನು ಪ್ರಕಾರ ತಪ್ಪಾಗಿದ್ರೆ ಶಿಕ್ಷೆಯಾಗಲಿದೆ. ವಿಚಾರಣೆ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನಿಂದ ಯಾರೂ ಪಾಠ ಕಲಿಯಬೇಕಿಲ್ಲ. ಅವರ ಅವಧಿಯಲ್ಲಿ ಲೋಕಾಯುಕ್ತ ಇದ್ದಿದ್ದರೆ, 60 ಪರ್ಸೆಂಟ್‌ ಲಂಚ, ಬಿಲ್ಲು, ಕೆಲಸ ಮಾಡುವಾಗಲೇ ಬಿಲ್‌ ಹೊಡೆದು ತಿಂದಿದ್ದು ಎಲ್ಲವೂ ಹೊರಗೆ ಬರ್ತಿತ್ತು. ಹೀಗಾಗಿ ಲೋಕಾಯುಕ್ತದ ಕುತ್ತಿಗೆ ಹಿಸುಕುವ ಕೆಲಸ ಕಾಂಗ್ರೆಸ್‌ ಮಾಡಿತ್ತು. ಈಗ ನಮ್ಮ ಬಸ​ವ​ರಾಜ ಬೊಮ್ಮಾಯಿ ಸರ್ಕಾರ ಲೋಕಾಯುಕ್ತಕ್ಕೆ ಪುನರ್‌ ಜನ್ಮ ನೀಡುವ ಕೆಲಸ ಮಾಡಿದೆ. ಲೋಕಾಯುಕ್ತ ಆಗಲೇ ಇದ್ದಿದ್ದರೆ ಕಾಂಗ್ರೆಸ್‌ನವರೆಲ್ಲಾ ಜೈಲಿನಲ್ಲಿ ಇರಬೇಕಾಗಿತ್ತು. ಕಾಂಗ್ರೆಸ್‌ನವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದರು.

Tap to resize

Latest Videos

ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು 500ರ ನೋಟು ನೀಡುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೆಲವೊಮ್ಮೆ ಸಿದ್ದರಾಮಯ್ಯನವರು ಸತ್ಯ ಹೇಳುತ್ತಾರೆ. ಕಾಂಗ್ರೆಸ್‌ನ ಸಮಾವೇಶಕ್ಕೆ ಜನರನ್ನು ಹಣ ನೀಡಿ ಕರೆದುಕೊಂಡು ಬರುವುದು ದುರಂತ. ಕೊನೆಗೂ ಸಿದ್ದರಾಮಯ್ಯ ಹಣ ನೀಡಿ ಸಭೆಗಳಿಗೆ ಜನರನ್ನು ಕರೆಯುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ರಾಜ್ಯದ ಜನರಿಗೆ ಸತ್ಯ ಗೊತ್ತಾಗಿದೆ ಎಂದು ಕುಟುಕಿದರು.

ತೀರ್ಥಹಳ್ಳಿ ಕ್ಷೇತ್ರ ಅಭಿ​ವೃ​ದ್ಧಿಗೆ 3250 ಕೋಟಿ ಬಿಡು​ಗ​ಡೆ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ವಿಕಾಸಕ್ಕೆ ಆಡಳಿತಾರೂಢ ಸರ್ಕಾರವು ಸುಮಾರು .3250 ಕೋಟಿಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಅನೇಕ ಮಹತ್ವದ ಹಾಗೂ ಜನರ ನಿರೀಕ್ಷೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟ​ಣಕ್ಕೆ ಸಮೀಪದ ಮತ್ತೂರಿನ ಅಮೃತ ಭಾರತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಜನೂರು ಭಾಗದ ಸುಮಾರು 73 ಬಗರ್‌ಹುಕುಂ ಸಾಗುವಳಿದಾರರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತ​ನಾ​ಡಿ​ದರು. ಬಿಜೆಪಿ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳಂತೆ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಅರ್ಹ ಫಲಾನುಭವಿಗಳಿಗೆ ಗುರುತಿಸಿ, ಪಕ್ಷಾತೀತವಾಗಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು.

ಬೆಂಗ​ಳೂರಿಗೆ ರಾಮ​ನಗರ ಹೆಬ್ಬಾ​ಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ

ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಗರ್‌ಹುಕುಂ ಸಮಿತಿಯನ್ನು ಹೆಚ್ಚುವರಿಯಾಗಿ ಹೋಬಳಿ ಮಟ್ಟದಲ್ಲಿ ರಚಿಸಲು ಸರ್ಕಾರದಿಂದ ಅನುಮತಿ ಕೊಡಿಸಿ, ಸುತ್ತಮುತ್ತಲ ಪ್ರದೇಶದ 5-6 ಗ್ರಾಮಗಳ ಸದಸ್ಯರನ್ನೊಳಗೊಂಡಂತೆ ಸಮಿತಿಯನ್ನು ರಚಿಸಿ, ಅವರ ಮೂಲಕ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ, ದಾಖಲೆಗಳನ್ನು ಪರಿಶೀಲಿಸಲಾಗಿದೆ. ನಂತರ ಅರ್ಹರಾದ 73 ಫಲಾನುಭವಿಗಳಿಗೆ ಹಕ್ಕುಪತ್ರದೊಂದಿಗೆ ತಹಸೀಲ್ದಾರ್‌ ಕಚೇರಿಯಿಂದ ನೀಡಬಹುದಾದ ಎಲ್ಲ ಅಧಿಕೃತ ದಾಖಲೆಗಳನ್ನು ನೀಡಲಾಗಿದೆ ಎಂದು ಹೇಳಿದರು.

click me!