
ಚಿಕ್ಕಮಗಳೂರು (ಮಾ.04): ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ರೇಡ್ ಆಗ್ತಿರ್ಲಿಲ್ಲ, ಕೇಸ್ ಮುಚ್ಚಿ ಹಾಕೋ ಕೆಲಸ ಮಾಡುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಚನ್ನಗಿರಿ ಶಾಸಕ ಮಾಡಲ್ ವಿರೂಪಾಕ್ಷಪ್ಪರವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿರುವುದಕ್ಕೆ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ, ಎಸಿಬಿ ಮೂಲಕ 54 ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಟ್ಟಿತ್ತು ಎಂದರು.
ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೂ ಕ್ಲೀನ್ ಚಿಟ್ ಕೊಟ್ರು, ನೀರಾವರಿ ಇಲಾಖೆ ಕಳ್ಳ ಬಿಲ್ ಬರೆದವರಿಗೂ ಕ್ಲೀನ್ ಚಿಟ್ ಕೊಟ್ರು, ಮರಳು ದಂಧೆ ಮಾಡಿದವರಿಗೆ ಕ್ಲೀನ್ ಚಿಟ್ ಕೊಟ್ರು. ರಿಡ್ಯೂನಲ್ಲಿ 8 ಸಾವಿರ ಕೋಟಿ ಸರ್ಕಾರಕ್ಕೆ ನಷ್ಟಆಗಿದೆ ಅಂತ ಕೆಂಪಣ್ಣ ಆಯೋಗ ವರದಿ ನೀಡಿದೆ. ಕದ್ದ ಕಳ್ಳರು ಯಾರು, ಪ್ರಾಮಾಣಿಕ ತನಿಖೆ ಆಗಿದ್ರೆ ಕಳ್ಳ ಯಾರೂ, ಲೂಟಿ ಹೊಡೆದವರು ಯಾರು ಅಂತ ಹೊರ ಬರ್ತಿತ್ತು ಎಂದರು. ಇವತ್ತು ಯಾರೇ ಇದ್ರು ಯಾವ ವಿಚಾರದಲ್ಲೂ ಯಾರನ್ನೂ ಬಚಾವ್ ಮಾಡೋ ಪ್ರಶ್ನೆಯೇ ಇಲ್ಲ ಅನ್ಮೋದಕ್ಕೆ ಇದು ನಿದರ್ಶನ. ಭ್ರಷ್ಟಾಚಾರವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.
ಹೊಸಪೇಟೆಯಲ್ಲಿ ಕಲ್ಯಾಣ ಕರ್ನಾಟಕ ಪ್ರೊ ಕಬಡ್ಡಿ ಮ್ಯಾಚ್‌ಗಳ ಕಲರವ
ಉಪಕಾರ ಸ್ಮರಣೆ ಸನಾತನ ಸಂಸ್ಕೃತಿ ಲಕ್ಷಣ: ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸೋದು ಭಾರತದ ಸನಾತನ ಸಂಸ್ಕೃತಿಯ ಒಂದು ಲಕ್ಷಣ ಎಂದು ಶಾಸಕ ಸಿ.ಟಿ. ರವಿ ಹೇಳಿದರು. ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿದ್ಯಾ ಕಾಫಿ ಸಂಸ್ಥೆಯಿಂದ ನಿರ್ಮಿಸಿಕೊಟ್ಟಸುಸಜ್ಜಿತ ಕಟ್ಟಡವನ್ನು ಶುಕ್ರವಾರ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಸಣ್ಣ ಉಪಕಾರವನ್ನು ಸ್ಮರಿಸುವಂತದ್ದು ನಮ್ಮ ಸನಾತತ ಸಂಸ್ಕೃತಿ ಎಂದರು. ನಮ್ಮ ಕಣ್ಣಿಗೆ ದೇವರು ಕಾಣುವುದಿಲ್ಲ ಅದೊಂದು ನಂಬಿಕೆ, ಆದರೆ, ದೇವರ ರೂಪದಲ್ಲಿ ಯಾರಾರಯರು ಸಹಾಯ ಮಾಡುತ್ತಾರೊ ಅವರೆಲ್ಲರೂ ದೇವರೆಂದು ನಮ್ಮ ಸಮಾಜ ಭಾವಿಸುತ್ತದೆ.
ಹಾಗಾಗಿಯೇ ಅಕ್ಷರ ಕಲಿಸಿದ ಗುರು, ಜೀವ ಉಳಿಸಿದ ಡಾಕ್ಟರ್‌ನ್ನು ವೈದ್ಯೋ ನಾರಾಯಣೋ ಹರಿಃ ಎಂದು ಗುರುತಿಸಿದೆವು. ಆ ರೀತಿ ಜೀವ ಉಳಿಸಿದ ವೈದ್ಯರೂ ಕೂಡ ದೇವರಾಗುತ್ತಾರೆ. ಸುತ್ತಮುತ್ತ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ಲಭಿಸುವ ಆಸ್ಪತ್ರೆ ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ ಎಂದು ಹೇಳಿದರು. ಸಮಾಜ ಯಾವಾಗಲು ಕೃತಜ್ಞತಾ ಪೂರ್ವಕವಾಗಿರಬೇಕು. ಯಾವಾಗ ಸಮಾಜ ಕೃತಜ್ಞತೆಯನ್ನು ಮರೆತು ಕೃತಜ್ಞವಾಗುತ್ತದೊ ಆಗ ಸಮಾಜದ ವ್ಯವಸ್ಥೆ ಅಧೋಗತಿಗೆ ಹೋಗಿದೆ ಎಂದರ್ಥ. 2022ರ ಜೂ.6 ರಂದು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು.
ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ
ಈಗ ಮಾ.3ಕ್ಕೆ ಉದ್ಘಾಟನೆ ಮಾಡುತ್ತಿದ್ದೇವೆ, 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇದರ ಜತೆಗೆ ಪಕ್ಕದ ಹಳೆ ಕಟ್ಟಡ ನೀಡಿದರೆ ಡಯಾಲಿಸಿಸ್ ಸೆಂಟರ್, ಕ್ವಾಟ್ರರ್ಸ್ ನಿರ್ಮಿಸುವುದಾಗಿ ವಿದ್ಯಾ ಕಾಫಿ ಸಂಸ್ಥೆಯವರು ಹೇಳಿದ್ದಾರೆ. ಕೆಲವರು ದೇವಸ್ಥಾನಕ್ಕೆ ಟ್ಯೂಬ್‌ಲೈಟ್ ನೀಡಿದರೆ ಬೆಳಕೆ ಕಾಣದಷ್ಟುದಾನಿಗಳ ಹೆಸರು ಬರೆಸಿರುವುದನ್ನು ನೋಡಿದ್ದೇವೆ. ಆದರೆ, 1.5 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ಕಟ್ಟಿಕೊಟ್ಟರೂ ನಾನು ಏನೂ ಕೊಟ್ಟೆಇಲ್ಲಾ ಎಂಬ ನಮ್ರತೆಯ ಭಾವ ಸಹೋದರರು ಸಂಕೋಚದಿಂದ ಕುಳಿತಿದ್ದಾರೆ. ಈ ರೀತಿಯ ಮನಸ್ಥಿತಿ ಬಹಳ ಕಡಿಮೆ ಜನರಲ್ಲಿರುತ್ತದೆ. ಹಾಗಾಗಿ ಸೂರ್ಯಚಂದ್ರ ಇರೋವರೆಗೂ ವಿದ್ಯಾ ಕಾಫಿ ಅವರ ಹೆಸರು ಚಿರಸ್ಥಾಯಿ ಯಾಗಿರುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.