17 ಜನರಲ್ಲೇ ಒಬ್ರನ್ನ ವಿಪಕ್ಷ ನಾಯಕ ಮಾಡಿ: ಪಾಟೀಲ ವ್ಯಂಗ್ಯ

By Sathish Kumar KHFirst Published Jul 2, 2023, 8:26 PM IST
Highlights

ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಅಧಿವೇಶನ ಆರಂಭವಾಗುತ್ತಿದ್ದರೂ ಇನ್ನೂ ವಿಪಕ್ಷ ನಾಯಕರ ಆಯ್ಕೆ ಮಾಡಲಾಗಿಲ್ಲ. ಯಾರೂ ಇಲ್ಲವೆಂದರೆ 17 ಜನ ಇದ್ದಾರಲ್ಲ, ಅವರಲ್ಲೇ ಯಾರನ್ನಾದ್ರೂ ವಿಪಕ್ಷ ನಾಯಕರನ್ನಾಗಿ ಮಾಡಿ.

ಗದಗ (ಜು.02): ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಅಧಿವೇಶನ ಆರಂಭವಾಗುತ್ತಿದ್ದರೂ ಇನ್ನೂ ವಿಪಕ್ಷ ನಾಯಕರ ಆಯ್ಕೆ ಮಾಡಲಾಗಿಲ್ಲ. ಯಾರೂ ಇಲ್ಲವೆಂದರೆ 17 ಜನ ಇದ್ದಾರಲ್ಲ, ಅವರಲ್ಲೇ ಯಾರನ್ನಾದ್ರೂ ವಿಪಕ್ಷ ನಾಯಕರನ್ನಾಗಿ ಮಾಡಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್‌ ಹೇಳಿದ್ದಾರೆ. 

ಭಾನುವಾರ ಮಾಧ್ಯಮಗಳೊಂದಿಗೆ ವಿಪಕ್ಷ ನಾಯಕ ಆಯ್ಕೆ ಕಗ್ಗಟ್ಟು ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಮತ್ತೇ ಇನ್ಮುಂದೆ ಯಾರೂ ಹೋಗಲ್ಲ. ಕರ್ನಾಟಕ ವಿಧಾನಸಭಾ ಚುಬಾವಣೆಯ ಸೋಲಿನಿಂದ ಬಿಜೆಪಿಯ ನೈತಿಕತೆ ಕುಸಿತವಾಗಿದೆ. ಹೀಗಾಗಿ, ರಾಜ್ಯದ ಬಿಜೆಪಿ ನಾಯಕರಲ್ಲಿ ಉತ್ಸಾಹ ಕಮರಿ ಹೋಗಿದೆ. ಆದ್ದರಿಂದ ವಿಪಕ್ಷ ನಾಯಕ ಆಯ್ಕೆಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಪಕ್ಷ ನಾಯಕನ ಆಯ್ಕೆ ವಿಚಾರ ಅವರ ಪಕ್ಷಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಹೆಚ್ಚಾಗಿ  ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

'ದೇಶದಲ್ಲಿ ಜಿಎಸ್‌ಟಿ ತೆರಿಗೆಯಂತೆ, ರಾಜ್ಯದಲ್ಲಿ ವೈಎಸ್‌ಟಿ ತೆರಿಗೆ ಜಾರಿ'

ನಮ್ಮ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರದಂಥ ಕೆಲಸಗಳು ನಡೆದಿಲ್ಲ: ದೇಶದಲ್ಲಿ ಜಿಎಸ್ ಟಿ ಮಾದರಿಯಲ್ಲಿ ವೈಎಎಸ್‌ಟಿ ಸಂಗ್ರಹ ಎಂಬ ಕುಮಾರಸ್ವಾಮಿ ಅವರು ಆರೋಪ ಮಾಡುತ್ತಿದ್ದಾರೆ. ಆದರೆ, ಅವರು ಇಲ್ಲದ್ದನ್ನ ಹೇಳುತ್ತಿದ್ದಾರೆ. ಈ ಆರೋಪವನ್ನ ನಾನು ಅಲ್ಲಗಳೆಯುತ್ತೇನೆ. ಭ್ರಷ್ಟಾಚಾರದಂಥ ಯಾವುದೇ ಕೆಲಸಗಳು ನಮ್ಮ ಸರ್ಕಾರದಲ್ಲಿ‌ ನಡೆದಿಲ್ಲ ಎಂದು ಮಾಧ್ಯಮ ವರದಿಗಾರರಿಗೆ ಹೇಳಿದರು. 

ಡಿ.ಕೆ. ಶಿವಕುಮಾರ್‌ ರೈತರ ವಿಚಾರವಾಗಿ ಮಾತಾಡಿದ್ದಾರೆ: ಶ್ರಮ ಪಡುವವರು ಒಬ್ಬರು, ಅನುಭವಿಸುವವರು ಮತ್ತೊಬ್ಬರು ಎಂಬ ವಿಚಾರವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇದರ ಅರ್ಥ ರೈತ ಶ್ರಮ ಪಡುತ್ತಾನೆ. ಅವನಿಗೆ ಸಂತೋಷ ಅನುಭವಿಸಲು ಹೆಚ್ಚು ಅವಕಾಶ ಇರಲ್ಲ. ರೈತರಿಗೆ ಪ್ರತಿಫಲ ಸಿಕ್ಕಿಲ್ಲ.. ನೋವಿನಿಂದ ಆ ಮಾತು ಹೇಳಿದ್ದಾರೆ. ಅವರು ರೈತರನ್ನ ಉದ್ದೇಶಿಸಿ ಹೇಳಿದ್ದು, ಒಕ್ಕಲಿಗರು ಮೂಲಭೂತವಾಗಿ ರೈತರು. ಆ ಅರ್ಥದಲ್ಲಿ ಹೇಳಿರಬಹುದು. ಆದ್ದರಿಂದ ತಪ್ಪು ಭಾವನೆ ಬೇಡ ಎಂದು ಸಮಜಾಯಿಷಿ ನೀಡಿದರು. 

ವಿಪಕ್ಷ ನಾಯಕರ ಆಯ್ಕೆಗೆ ದೆಹಲಿಗೆ ಬಂದ ಬಿ.ಎಸ್‌. ಯಡಿಯೂರಪ್ಪ: ಈ ಕುರಿತು ಕರ್ನಾಟಕದಲ್ಲಿ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವ ವಿಚಾರಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಇನ್ನು ರಾತ್ರಿ 8 ಗಂಟೆಗೆ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಸಂಜೆ 4 ಗಂಟೆಗೆ ಭೇಟಿ ಆಗುವ ವೇಳೆಯನ್ನು 8 ಗಂಟೆಗೆ ಮುಂದೂಡಿಕೆ ಮಾಡಲಾಗಿತ್ತು. ಈ ಸಮಯಕ್ಕೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ಮಾಡಲು ತುರ್ತು ಸಭೆಯನ್ನಯ ಕೈಗೊಳ್ಳಲಾಗಿದೆ. ಹೀಗಾಗಿ, ಬಿ.ಎಸ್. ಯಡಿಯೂರಪ್ಪ ಅವರನ್ನು ರಾತ್ರಿ 9 ಗಂಟೆಗೆ ಭೇಟಿ ಮಾಡಿ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ಈ ವೇಳೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿ ಘೋಷಣೆ ಮಾಡುವ ಸಾಧ್ಯತೆಯಿದೆ. 

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನು ಸನ್ಮಾನಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

ನಾಳೆಯಿಂದ ಜು.14ರವರೆಗೆ ಅಧಿವೇಶನ: ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಹಿನ್ನಲೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಪೂರ್ವ ಸಿದ್ದತೆ ಬಗ್ಗೆ ಪರಿಶೀಲನೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆಯಿಂದ 14ರ ವರೆಗೂ ಅಧಿವೇಶನ ಇರುತ್ತದೆ. ರಾಜ್ಯಪಾಲರು 12 ಗಂಟೆ ಭಾಷಣ ಮಾಡುತ್ತಾರೆ. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಕಾಯಿದೆಗಳನ್ನು ಆಡಳಿತ ಪಕ್ಷ ಮಂಡಿಸುವುದು. ಯಾವೆಲ್ಲ ಬಿಲ್ ಮಂಡಿಸುತ್ತಾರೆ ಅಂತ ನೋಡಬೇಕು. ಇನ್ನು ಬಿಜೆಪಿಯವರು ಪ್ರತಿಭಟನೆ ಮಾಡಿವುದಾಗಿ ಹೇಳುತ್ತಿದ್ದಾರೆ. ಆದರೆ, ಜನರಿಗೆ ಪ್ರಯೋಜನ ಆಗುವಂತಹದ್ದು ನಡೆಯಲಿ. ಮೊದಲ ಅಧಿವೇಶನ, ಬಹಳ ಆಸಕ್ತಿಯಿಂದ ಇದ್ದೇನೆ. ಪ್ರಿತಿ, ಸೌಹಾರ್ದಯತೆಯಿಂದ ಅಧಿವೇಶನ ನಡೆಸಬೇಕು ಎಂದುಕೊಂಡಿದ್ದೇನೆ. ಹೊಸ ಶಾಸಕರು ಇದಾರೆ. ಆದ್ದರಿಂದ ಅಧಿವೇಶನದಲ್ಲಿ ಹೆಚ್ಚಿನ ಶಾಸಕರು ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

click me!