
ಕೋಲ್ಕತಾ(ಜು.02) ಲೋಕಸಭಾ ಚುನಾವಣೆಯಲ್ಲಿ ಬೆಜಿಪಿ ಮಣಿಸಿ ಅಧಿಕಾರಕ್ಕೇರಲು ವಿಪಕ್ಷಗಳು ಭಾರಿ ರಣತಂತ್ರ ಹೂಡುತ್ತಿದೆ. ಇದಕ್ಕಾಗಿ ವಿಪಕ್ಷಗಳ ಒಗ್ಗೂಡಿಸಿ ಹೋರಾಟಕ್ಕೆ ಇಳಿದಿದೆ. ಪಾಟ್ನಾದಲ್ಲಿ ಇತ್ತೀಚೆಗೆ ವಿಪಕ್ಷಗಳ ಬೃಹತ್ ಮೈತ್ರಿ ಸಭೆ ನಡೆಸಲಾಗಿತ್ತು. 15ಕ್ಕೂ ಹೆಚ್ಚು ಪಕ್ಷಗಳು ಪಾಲ್ಗೊಂಡು ಒಗ್ಗಟ್ಟಿನ ಹೋರಾಟದ ಮಂತ್ರ ಮಠಿಸಿತ್ತು. ಆದರೆ ಈ ಸಭೆ ಬೆನ್ನಲ್ಲೇ ಬಿರುಕು ಕಾಣಿಸಿಕೊಂಡಿತ್ತು. ಟಿಎಂಸಿ, ಸಿಪಿಎಂ, ಆಮ್ ಆದ್ಮಿ ಪಾರ್ಟಿಗಳು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿತ್ತು. ಇದೀಗ ಟಿಎಂಸಿ ಹೇಳಿಕೆ ವಿಪಕ್ಷಗಳ ಮೈತ್ರಿಗೆ ಮತ್ತೆ ಹಿನ್ನಡೆ ತಂದಿದೆ. ಬಂಗಾಳದಲ್ಲಿ ಬಿಜೆಪಿ ಮಣಿಸಲು ಟಿಎಂಸಿ ಮಾತ್ರ ಸಾಕು, ನಮಗೆ ಮೈತ್ರಿ ಅಗತ್ಯವಿಲ್ಲ ಎಂದು ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮಣಿಸಲು ನಮಗೆ ಯಾವುದೇ ಮೈತ್ರಿ ಅಗತ್ಯವಿಲ್ಲ. ಬಂಗಾಳದಲ್ಲಿ ಟಿಎಂಸಿ ಬಲಿಷ್ಠವಾಗಿದೆ. ಇಲ್ಲಿ ಏಕಾಂಗಿಯಾಗಿ ಬಿಜೆಪಿ ವಿರುದ್ದ ಹೋರಾಡುತ್ತೇವೆ. ಅಭೂತಪೂರ್ವ ಗೆಲುವು ಸಾಧಿಸುತ್ತೇವೆ ಎಂದು ಸೌಗತ ರಾಯ್ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.
ಬಿಜೆಪಿ ಬಾವುಟದ ಮೇಲೆ ಕಾಂಡೋಮ್ ನೇತು ಹಾಕಿದ ಕಿಡಿಗೇಡಿಗಳು, ಬಂಗಾಳದಲ್ಲಿ ನೀಚ ಕೃತ್ಯ!
ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಅಗತ್ಯತೆ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಈಗಾಗಲೇ ಮೈತ್ರಿಯಿಂದ ಕೆಲ ಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದ ಟಿಎಂಸಿ ಏಕಾಂಗಿ ಹೋರಾಟದ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳಲ್ಲ ಅನ್ನೋ ಪರೋಕ್ಷ ಎಚ್ಚರಿಕೆಯನ್ನು ಟಿಎಂಸಿ ನೀಡಿದೆ. ಈ ಎಲ್ಲಾ ಬೆಳವಣಿಗೆಗಳು ವಿಪಕ್ಷ ಮೈತ್ರಿಯ ಬುಡ ಅಲುಗಾಡಿಸುತ್ತಿದೆ.
ಪಾಟ್ನಾದಲ್ಲಿ ನಡೆದ ಸಭೆ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಬೃಹತ್ ಮೈತ್ರಿಕೂಟ ಕಟ್ಟುವ ತಮ್ಮ ಭಾರೀ ಯತ್ನಕ್ಕೆ ರಾಜ್ಯದಲ್ಲಿ ಕೆಲ ಪಕ್ಷಗಳ ಒಳಮೈತ್ರಿ ಅಡ್ಡಿ ಮಾಡಿದೆ. ಈ ಕುತಂತ್ರವನ್ನು ತಾವು ಬಯಲಿಗೆಳೆಯುವುದಾಗಿ ಸಿಪಿಎಂ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಮತ್ತೊಂದೆಡೆ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮಾತನಾಡಿ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮತ್ತೊಂದೆಡೆ ಬಂಗಾಳದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪರ ಬಿಎಸ್‌ಎಫ್ ಕೆಲಸ; ಮತ ಹಾಕದಂತೆ ಗಡಿ ಭಾಗದ ಜನರಿಗೆ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಈ ನಡುವೆ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಭಾಗಿಯಾಗಬೇಕಾದರೆ ಕೇಂದ್ರ ಸರ್ಕಾರ ದೆಹಲಿ ಮೇಲಿನ ಅಧಿಕಾರ ಉಳಿಸಿಕೊಳ್ಳಲು ಹೊರಡಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಬೇಕೆಂಬ ಆಪ್ ಸಂಚಾಲಕ ಕೇಜ್ರಿವಾಲ್ ಷರತ್ತಿನ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಅಜಯ ಮಾಕನ್, ಇಂಥ ನಡೆ ವಿಪಕ್ಷಗಳÜ ಒಗ್ಗಟ್ಟಿಗಾಗಿ ಅಲ್ಲ ಬದಲಾಗಿ ಮೈತ್ರಿಯನ್ನು ವಿಫಲಗೊಳಿಸಲು ಹೂಡಿದ ಯೋಜಿತ ಸಂಚು ಎಂದಿದ್ದರು. ಈ ಮೂಲಕ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದೀಗ ಒಂದೊಂದೆ ಘಟನೆಗಳು ಈ ಕಂದಕ ಹೆಚ್ಚಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.