ಜೆಡಿಎಸ್‌ ಜತೆ ಮೈತ್ರಿ ಸುಳಿವು: ಬಿಜೆಪಿಗೆ ಪ್ರೀತಂ ಮುಜುಗರ

By Kannadaprabha News  |  First Published Apr 28, 2023, 6:32 AM IST

ರಾಜ್ಯದಲ್ಲಿ ಈ ಬಾರಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಜ್ಯ ಹಾಗೂ ಕೇಂದ್ರದ ನಾಯಕರು ಚುನಾವಣಾ ಪ್ರಚಾರದ ವೇಳೆ ಅದಮ್ಯ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ಪ್ರೀತಂಗೌಡ ಈ ರೀತಿಯ ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ, ಇದು ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿದೆ.

ಹಾಸನ(ಏ.28):  ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭರಾಟೆ ತೀವ್ರಗೊಂಡಿರುವ ನಡುವೆಯೇ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ವರಿಷ್ಠರ ಮಟ್ಟದಲ್ಲಿ ಹೊಂದಾಣಿಕೆ ನಡೆದಿದೆ ಎಂಬರ್ಥದ ಹೇಳಿಕೆ ನೀಡಿ ಹಾಸನ ಶಾಸಕ ಪ್ರೀತಂಗೌಡ ಅವರು ಅಚ್ಚರಿ ಮೂಡಿಸಿದ್ದಾರೆ

ರಾಜ್ಯದಲ್ಲಿ ಈ ಬಾರಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಜ್ಯ ಹಾಗೂ ಕೇಂದ್ರದ ನಾಯಕರು ಚುನಾವಣಾ ಪ್ರಚಾರದ ವೇಳೆ ಅದಮ್ಯ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ಪ್ರೀತಂಗೌಡ ಈ ರೀತಿಯ ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ, ಇದು ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿದೆ.

Latest Videos

undefined

ಸ್ವರೂಪ್‌ಗೆ ನಾನು ಎರಡನೇ ತಾಯಿ, ಆತನನ್ನು ಈ ಬಾರಿ ಗೆಲ್ಲಿಸಿ: ಭವಾನಿ ರೇವಣ್ಣ

ಮೋದಿ-ಎಚ್‌ಡಿಡಿ ಭೇಟಿ:

ನಗರದಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ಶಾಸಕ ಪ್ರೀತಂ ಗೌಡ, ‘ಜೆಡಿಎಸ್‌ಗೆ ಬಹುಮತ ಬರೋದಿಲ್ಲ. ದೆಹಲಿಯಲ್ಲಿ ಮೋದಿ ಸಾಹೇಬ್ರು ಹಾಗೂ ದೇವೇಗೌಡ್ರು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ನೀವು ಜೆಡಿಎಸ್‌ಗೆ ವೋಟು ಹಾಕಿದರೂ ಬಿಜೆಪಿಗೆ ಹಾಕಿದಂತೆ’ ಎಂದು ತಿಳಿಸಿದರು.

ಜೆಡಿಎಸ್‌ನ ಭದ್ರಕೋಟೆ ಹಾಸನ ಕ್ಷೇತ್ರದಲ್ಲಿ ಪ್ರೀತಂಗೌಡ ಶಾಸಕರಾದದ್ದು ಸಣ್ಣ ಸಾಧನೆಯಲ್ಲ!

‘ನೀವು ಹಾಸನದಿಂದ ಬೆಂಗಳೂರಿಗೆ ಹೋಗುವುದಾದರೆ ಬೆಳ್ಳೂರು ಕ್ರಾಸ್‌ ಮೇಲೆಯೇ ಹೋಗಬೇಕು. ಅದನ್ನು ಬಿಟ್ಟು ಮೈಸೂರು ಸುತ್ತಿಕೊಂಡು ಹೋಗುತ್ತೇನೆ ಎಂದರೆ ನಾನೇನು ಮಾಡಲು ಆಗಲ್ಲ. ಎಲ್ಲಾ ಹಳ್ಳದ ನೀರು ಹರಿದು ಸಮುದ್ರಕ್ಕೇ ಬರೋದು. ಹಾಗಾಗಿ ನೀವು ಸುತ್ತಾಡಿಕೊಂಡು ನನ್ನ ಬಳಿ ಬರುವುದಕ್ಕಿಂತ ನೇರವಾಗಿ ಬನ್ನಿ’ ಎಂದು ಹೇಳಿದರು. ಈ ಮೂಲಕ ಜೆಡಿಎಸ್‌ಗೆ ವೋಟು ಹಾಕುವ ಬದಲು ಬಿಜೆಪಿಗೇ ವೋಟು ಹಾಕಿ ಎಂದು ಸಲಹೆ ನೀಡಿದರು.

ಡೀಲ್‌ ಆಗಿದೆ

ಜೆಡಿಎಸ್‌ಗೆ ಬಹುಮತ ಬರುವುದಿಲ್ಲ. ದೆಹಲಿಯಲ್ಲಿ ಮೋದಿ ಸಾಹೇಬ್ರು ಹಾಗೂ ದೇವೇಗೌಡ್ರು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ನೀವು ಜೆಡಿಎಸ್‌ಗೆ ವೋಟು ಹಾಕಿದರೂ ಬಿಜೆಪಿಗೆ ಹಾಕಿದಂತೆ ಅಂತ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ತಿಳಿಸಿದ್ದಾರೆ. 

click me!