ಕೊಡಗು ಜಿಲ್ಲಾ ಪ್ರವಾದ ವೇಳೆ ಸಿದ್ದರಾಂಯ್ಯನವರು ಮಾಂಸದೂಟ ಮಾಡಿ ದೇಗುಲಕ್ಕೆ ಹೋಗಿದ್ದಾರೆ. ಎನ್ನುವ ಆರೋಪಕ್ಕೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಬಿಜೆಪಿ ನಡೆಗೆ ಕಿಡಿಕಾರಿದ್ದಾರೆ.
ಹುಬ್ಬಳ್ಳಿ, (ಆಗಸ್ಟ್.22): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಡಿಕೇರಿ ಪ್ರವಾಸದ ವೇಳೆ ಮಾಂಸದೂಟ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಮಾಂಸದೂಟದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧಗಳ ಚರ್ಚೆ ಜೋರಾಗಿದೆ. ಕೆಲವವರು ಆಹಾರ ಪದ್ಧತಿಯನ್ನು ಪ್ರಶ್ನಿಸಬಾರದು ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಸಿದ್ದರಾಮಯ್ಯ ಮಾಡಿದ್ದು ತಪ್ಪು ಎಂದು ಅಭಿಪ್ರಾಯಟ್ಟಿದ್ದಾರೆ.
ಸಿದ್ದರಾಮಯ್ಯ ಕೋಳಿ ಸಾರು ತಿಂದಿಲ್ಲ: ಊಟ ಬಡಿಸಿದವರೇ ಕೊಟ್ರು ಸ್ಪಷ್ಟನೆ
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಹುಬ್ಬಳ್ಳಿಯಲ್ಲಿ ಇಂದು(ಸೋಮವಾರ) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದು ಅಚ್ಚರಗೆ ಕಾರಣವಾಗಿದೆ. ಹೌದು ಅಚ್ಚರಿ ಎನ್ನಿಸಿದರೂ ಸತ್ಯ.
ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಮುತಾಲಿಕ್, ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ. ವಿನಾಕಾರಣ ಅವರ ವಿರುದ್ಧ ಆರೋಪ ಮಾಡುವ ಬಿಜೆಪಿಯ ಕೆಲವರ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು.
ಮಾಂಸ ಸೇವನೆಯು ಒಂದು ಚರ್ಚೆಯ ವಿಷಯವೇ ಅಲ್ಲ. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯ ಅವರನ್ನು ಎಳೆದು ತರುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯ ವರ್ತನೆಯ ಅಸಹ್ಯ ತರಿಸುವಂತಿದೆ. ನಮ್ಮಲ್ಲಿ ಎಲ್ಲಾ ರೀತಿಯ ಭಕ್ತರಿದ್ದಾರೆ. ಮಾಂಸ ಸೇವನೆ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್, ಮಡಿಕೇರಿ ಚಲೋ ಚಳವಳಿಯನ್ನು ಖಂಡಿಸಿದರು.
ಸಾವರ್ಕರ್ ಬಗ್ಗೆ ಸರಿಯಾಗಿ ತಿಳಿದುಕೊಂಡ ನಂತರ ಅವರು ಮಾತನಾಡಬೇಕು. ಮತಾಂಧ ಟಿಪ್ಪು ಸುಲ್ತಾನನ್ನು ಇವರು ಹೀರೊ ಮಾಡಲು ಹೊರಟಿದ್ದಾರೆ. ನಾವು ಮನೆಮನೆಗೆ ತೆರಳಿ ಸಾವರ್ಕರ್ ಬಗ್ಗೆ ತಿಳವಳಿಕೆ ನೀಡುತ್ತೇವೆ. ಪ್ರತಿ ಗಣೇಶ ಪೆಂಡಾಲ್‌ನಲ್ಲೂ ಸಾವರ್ಕರ್ ಫೋಟೋ ಇಡುತ್ತೇವೆ ಎಂದರು.