ಹಿಮಾಚಲ ವಿಧಾನಸಭಾ ಚುನಾವಣೆ ಸಮೀಕ್ಷಾ ವರದಿ ಪ್ರಕಟಗೊಂಡಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದಿದೆ. ಈ ಮೂಲಕ ಹಿಮಾಚಲ ಪ್ರದೇಶದಲ್ಲಿದ್ದ ಸಂಪ್ರದಾಯ ಮುರಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ನವದೆಹಲಿ(ಡಿ.05): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಅನ್ನೋ ಕುತೂಹಲಕ್ಕೆ ಸಮೀಕ್ಷಾ ವರದಿ ಉತ್ತರ ನೀಡಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸಂಪ್ರದಾಯ ಮುರಿಯಲಿದೆ ಎಂದಿದೆ. ಬಿಜೆಪಿ 34 ರಿಂದ 39 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ರಿಪಬ್ಲಿಕ್ ಟಿವಿ ಸಮೀಕ್ಷೆ ಹೇಳುತ್ತಿದೆ. ಇತ್ತ ಜನ್‌ಕಿ ಬಾತ್ ಸಮೀಕ್ಷೆ ಕೂಡ ಬಿಜೆಪಿ ಅಧಿಕಾರ ಮುಂದುವರಿಸಲಿದೆ ಎಂದಿದೆ. ಬಿಜೆಪಿಗೆ ಪ್ರತಿಸ್ಪರ್ಧಿ ಕಾಂಗ್ರೆಸ್ ಕೂಡ ತೀವ್ರ ಪೈಪೋಟಿ ನೀಡಲಿದೆ. ಕಾಂಗ್ರೆಸ್ 28 ರಿಂದ 33 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದ್ದ ಆಮ್ ಆದ್ಮಿ ಪಾರ್ಟಿಗೆ ಹಿನ್ನಡೆಯಾಗಿದೆ. ಆಮ್ ಆದ್ಮಿ ಪಾರ್ಟಿ ಗರಿಷ್ಠ 1 ಸ್ಥಾನ ಗೆಲ್ಲಲಿದೆ ಎಂದಿದೆ. ಆದರೆ ಇತರರು 1 ರಿಂದ 4 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದಿದೆ.
ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆ ವರದಿ(ರಿಪಬ್ಲಿಕ್ ವರದಿ)
ಬಿಜೆಪಿ: 34 ರಿಂದ 39
ಕಾಂಗ್ರೆಸ್ : 28-33
ಆಮ್ ಆದ್ಮಿ ಪಾರ್ಟಿ 0 ಯಿಂದ 1
ಇತರರ 1 ರಿಂದ 4
Gujarat Assembly Elections: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ದಾಖಲೆಯ ಬಹುಮತ, ಮತ್ತೆ ಅಧಿಕಾರಕ್ಕೆ..!
ಹಿಮಾಚಲ ಪ್ರದೇಶದಲ್ಲಿ ಜನ್‌ಕಿ ಬಾತ್ ಸಮೀಕ್ಷೆ ಕೂಡ ಇದನ್ನೇ ಹೇಳುತ್ತಿದೆ. ಬಿಜೆಪಿ 32 ರಿಂದ 40 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಇತ್ತ ಕಾಂಗ್ರೆಸ್ 27 ರಿಂದ 30 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಆದರೆ ಆಮ್ ಆದ್ಮಿ ಪಕ್ಷ ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆಯಲು ವಿಫಲವಾಗಲಿದೆ ಎಂದಿದೆ. ಆದರೆ ಇತರರು 1 ರಿಂದ 2 ಸ್ಥಾನ ಗೆಲ್ಲಲಿದ್ದಾರೆ ಅನ್ನೋ ವರದಿಯನ್ನು ಜನ್‌ಕಿ ಬಾತ್ ಹೇಳಿದೆ.
ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆ(ಜನ್‌ಕಿ ಬಾತ್ ವರದಿ)
ಬಿಜೆಪಿ: 32 ರಿಂದ 40
ಕಾಂಗ್ರೆಸ್ : 27ರಿಂದ 30
ಆಮ್ ಆದ್ಮಿ ಪಾರ್ಟಿ : 0
ಇತರರು: 1 ರಿಂದ 2
ಜೀ ಚುನಾವಣೋತ್ತರ ಸಮೀಕ್ಷೆಯಲ್ಲೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದಿದೆ. ಕಾಂಗ್ರೆಸ್ ತೀವ್ರ ಪೈಪೋಟ್ ನೀಡವು ಸಾಧ್ಯತೆ ಕಾಣುತ್ತಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ, ಬಿಜೆಪಿಗೆ ಸೋಲು, ಆಪ್‌ಗೆ ಅಧಿಕಾರ!
ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆ(ಜೀ ವರದಿ)
ಬಿಜೆಪಿ: 35 ರಿಂದ 40
ಕಾಂಗ್ರೆಸ್ : 20 ರಿಂದ 25
ಆಮ್ ಆದ್ಮಿ ಪಾರ್ಟಿ : 0 ಯಿಂದ 3
ಇತರರು: 1 ರಿಂದ 5
ಹಿಮಾಚಲ: ದಾಖಲೆಯ ಶೇ.75.75ರಷ್ಟುಮತ
ಬಿಜೆಪಿ, ಕಾಂಗ್ರೆಸ್, ಆಮ್‌ಆದ್ಮಿ ಪಕ್ಷದ ನಡುವಿನ ಪೈಪೋಟಿಗೆ ಸಾಕ್ಷಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ನಡೆದ ಮತದಾನದಲ್ಲಿ ದಾಖಲೆಯ ಶೇ.75.75ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದರು. 2017ರಲ್ಲಿ ಶೇ.75.57ರಷ್ಟುಮತದಾನವಾಗಿತ್ತು. ಈ ಬಾರಿ ಶೇ.76.8ರಷ್ಟುಮಹಿಳಾ ಮತದಾರರು, ಶೇ.72.4ರಷ್ಟುಪುರುಷ ಮತದಾರರು ಮತ್ತು ಶೇ.68.4ರಷ್ಟುತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ. ಇಲ್ಲಿ ಬಿಜೆಪಿಗೆ ಸತತ 2ನೇ ಬಾರಿ ಗೆದ್ದು ಇತಿಹಾಸ ನಿರ್ಮಿಸುವ ಇರಾದೆ ಇದೆ. ಆದರೆ ದೇಶದಲ್ಲಿ ಕಳಾಹೀನವಾಗಿರುವ ಕಾಂಗ್ರೆಸ್‌ಗೆ ಅಧಿಕಾರಕ್ಕೇರುವ ಅನಿವಾರ್ಯತೆ ಇದೆ. ಡಿ.8ರಂದು ಗುಜರಾತ್ ಜತೆಗೆ ಹಿಮಾಚಲ ಮತ ಎಣಿಕೆಯೂ ನಡೆಯಲಿದ್ದು, ಅಂದು ಮತದಾರರ ನಾಡಿಮಿಡಿತ ಗೊತ್ತಾಗಲಿದೆ.