ರಾಸಲೀಲೆ ಸಿ.ಡಿ. ಕೇಸ್: ಸರ್ಕಾರಕ್ಕೊಂದು ಆಗ್ರಹ ಮಾಡಿದ ಎಚ್‌ಡಿಕೆ

By Suvarna NewsFirst Published Mar 7, 2021, 7:52 PM IST
Highlights

 ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣವನ್ನು ಹಿಂಪಡೆದಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕೋಲಾರ, (ಮಾ.07): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣವನ್ನು ದೂರುದಾದ ದಿನೇಶ್ ಕಲ್ಲಹಳ್ಳಿ ಅವರು ವಾಪಸ್ ಪಡೆದುಕೊಂಡಿದ್ದು, ಇದಕ್ಕೆ ಎಚ್‌ಡಿಕೆ ಮಾಡಿರುವ ಆರೋಪವನ್ನು ಕಾರಣವಾಗಿ ಕೊಟ್ಟಿದ್ದಾರೆ. 

ಇನ್ನು ಈ ಇದಕ್ಕೆ ಪ್ರತಿಕ್ರಿಯಿಸುರವ ಕುಮಾರಸ್ವಾಮಿ, ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ದೂರುದಾರ ದಿನೇಶ್‌ ಕಲ್ಲಹಳ್ಳಿ ಯಾವ ಕಾರಣಕ್ಕೆ ದೂರು ಹಿಂಪಡೆದಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಕರಣ ಸಂಬಂಧ ಸರ್ಕಾರವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ವಾಪಸ್‌ಗೆ 5 ಪ್ರಮುಖ ಕಾರಣಗಳು

ತಾಲ್ಲೂಕಿನ ಅಜ್ಜಪ್ಪನಹಳ್ಳಿ ಗೇಟ್‌ ಬಳಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದೊಂದು ವಾರದಿಂದ ಅಸಹ್ಯಕರ ಘಟನೆಗಳು ನಡೆಯುತ್ತಿವೆ. ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸರ್ಕಾರ ತನ್ನ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ದಿನೇಶ್‌ ಮೊದಲು ಯಾವ ಕಾರಣಕ್ಕೆ ದೂರು ಕೊಟ್ಟಿದ್ದರು, ನಂತರ ಯಾವ ಕಾರಣಕ್ಕೆ ಹಿಂಪಡೆದಿದ್ದಾರೆ, ಈ ಪ್ರಕರಣ ಯಾವ ಕಾರಣಕ್ಕೆ ಬಹಿರಂಗಗೊಂಡಿತು, ದೂರು ಹಿಂಪಡೆಯಲು ಯಾರು ಪ್ರೇರೇಪಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ಸತ್ಯಾಸತ್ಯತೆ ಏನು ಎಂಬುದನ್ನು ಸರ್ಕಾರ ಜನರ ಮುಂದಿಡಬೇಕು. ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ. ಹೀಗಾಗಿ ಅವರು ಹೊರ ಬಂದು ಮಾತನಾಡಿಲ್ಲ ಎಂದರು.

ಸಚಿವ ಸಿ.ಪಿ.ಯೋಗೇಶ್ವರ್‌ ಗ್ರಾಫಿಕ್ಸ್‌ ಎಕ್ಸ್‌ಪರ್ಟ್‌. ಅವರಿಗೆ ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನ ಇರುವುದರಿಂದ ಗ್ರಾಫಿಕ್ಸ್‌ ಬಗ್ಗೆ ಮಾತನಾಡಿದ್ದಾರೆ ಎಂದು ಟಾಂಗ್ ಕೊಟ್ಟರು.

click me!