ಕೇಸ್ ಹಿಂಪಡೆದ ಬೆನ್ನಲ್ಲೇ ಜಾರಕಿಹೊಳಿ ಸುದ್ದಿಗೋಷ್ಠಿ: ಮಹತ್ವ ಮಾಹಿತಿ ಬಹಿರಂಗ

Published : Mar 07, 2021, 06:39 PM ISTUpdated : Mar 07, 2021, 07:34 PM IST
ಕೇಸ್ ಹಿಂಪಡೆದ ಬೆನ್ನಲ್ಲೇ ಜಾರಕಿಹೊಳಿ ಸುದ್ದಿಗೋಷ್ಠಿ: ಮಹತ್ವ ಮಾಹಿತಿ ಬಹಿರಂಗ

ಸಾರಾಂಶ

ದಿನೇಶ್‌ ಕಲ್ಲಹಳ್ಳಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ಹಿಂಪಡೆದ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆ.ಕೆ.ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

ಬೆಂಗಳೂರು, (ಮಾ.07): ರಮೇಶ್ ಜಾರಕಿಹೊಳಿ ವಿರುದ್ಧದ ರಾಸಲೀಲೆ ಸಿ.ಡಿ. ಪ್ರಕರಣವನ್ನು ಸಂಬಂಧಿಸಿದಂತೆ ದೂರುದಾರ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕೊಳಿ ಅವರು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, ಮಹತ್ವ ಅಂಶಗಳನ್ನು ತಿಳಿಸಿದ್ದಾರೆ.

"

ಬೆಂಗಳೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕೊಳಿ ಅವರು, ರಮೇಶ್ ಜಾರಕಿಹೊಳಿ ವಿರುದ್ಧದ ವಿಡಿಯೋವನ್ನು ಪೊಲೀಸರಿಗೆ ತಿಳಿಸುವ ಮೊದಲೇ ರಷ್ಯಾದಲ್ಲಿ ಯುಟ್ಯೂಬ್​ಗೆ ಅಪ್​ಲೋಡ್ ಆಗಿತ್ತು. 17 ಸರ್ವರ್ ಬುಕ್ ಮಾಡಿದ್ದರು. ಅದಕ್ಕಾಗಿ 10 ರಿಂದ 15 ಕೋಟಿ ಖರ್ಚು ಮಾಡಿದ್ದರು. ಗಂಭೀರ ಷಡ್ಯಂತ್ರವನ್ನು ನನ್ನ ಅಣ್ಣನ ವಿರುದ್ಧ ನಡೆಸಲಾಗಿತ್ತು. ದಯವಿಟ್ಟು ಮಾಧ್ಯಮಗಳಲ್ಲಿ ಆ ಮಹಿಳೆಗೆ ಸಂತ್ರಸ್ತ ಮಹಿಳೆ ಎಂಬ ಪದ ಬಳಸಬೇಡಿ. 15 ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿ ಮಂತ್ರಿಗಿರಿ ತಪ್ಪಿಸಲು ಈ ಕೆಲಸ ಮಾಡಿದ್ದಾರೆ ಎಂದರು.

ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಮೇಶ್ ಜಾರಕಿಹೊಳಿಗೆ ಬಿಗ್ ರಿಲೀಫ್

ಹನಿಟ್ರ್ಯಾಪ್ ಆರೋಪ
 ಸಿಡಿ ಕಟ್​ ಮಾಡಿ ಎಡಿಟ್ ಮಾಡಿ ಹಾಕಿದ್ದಾರೆ. ಷಡ್ಯಂತ್ರ ಹೊರಗೆ ಬರಲು ಸಮಗ್ರ ತನಿಖೆ ಆಗಬೇಕು. ರಮೇಶ್ ಜಾರಕಿಹೊಳಿ ಮನೆಯಿಂದ ಹೊರಗೆ ಬಂದು ದೂರು ಕೊಡಬೇಕು. ಮಹಿಳೆಗೆ ನೀನು ಹೆದರಬೇಡ, 50 ಲಕ್ಷ ಹಣ, ದುಬೈನಲ್ಲಿ ಕೆಲಸ ಕೊಡಿಸ್ತೀವಿ' ಅಂತ ಆಕೆಗೆ ಭರವಸೆ ಕೊಟ್ಟು ಈ ಕೆಲಸ ಮಾಡಿಸಿದ್ದಾರೆ ಆಂತ ನಮ್ಮ ಸೋರ್ಸ್​ ಹೇಳುತ್ತದೆ ಎಂದು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದರು.

ನಾಳೆ ಒಂದು ದಿನ ಬಿಟ್ಟು ನಮ್ಮ ಸೋರ್ಸ್​ ಮೂಲಕ ನಾವು ಕೆಲಸ ಮಾಡ್ತೀವಿ. ಮರ್ಯಾದೆ ಗೌರವ ಹೋದರೆ ಕಷ್ಟವಾಗುತ್ತೆ. ನಾವೂ ಈ ಕೇಸ್​ ಫಾಲೊ ಮಾಡ್ತೀವಿ. ನಮ್ಮ ಸೋರ್ಸ್ ಮೂಲಕ ಕೆಲಸ ಮಾಡುತ್ತೇವೆ. ಇದು ಹನಿಟ್ರ್ಯಾಪ್ ಆಗಿದೆ. ಪ್ರಶ್ನೆಗಳನ್ನು ಯಾರೋ ಬರೆದುಕೊಟ್ಟಿದ್ದಾರೆ. ಅದನ್ನು ಆಕೆ ಕೇಳಿದ್ದಾಳೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೀತಿದೆ. ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ವಾಪಸ್‌ಗೆ 5 ಪ್ರಮುಖ ಕಾರಣಗಳು

ಮುಂದಿನ ನಡೆ ಬಗ್ಗೆ ಮಾಹಿತಿ
ಇವತ್ತು (ಭಾನುವಾರ) ನಾನೇ ರಮೇಶ್​ ಜಾರಕಿಹೊಳಿಯನ್ನು ಭೇಟಿ ಮಾಡುತ್ತೇನೆ. ಧೈರ್ಯವಾಗಿ ಹೊರಗೆ ಬರಲು ಮನವೊಲಿಸ್ತೀನಿ. ದಿನೇಶ್ ಕಲ್ಲಹಳ್ಳಿ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ನಂತರ ಯೋಚಿಸುತ್ತೇವೆ. ಲಾಯರ್ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತಗೊಳುತ್ತೇವೆ ಎಂದು ಸ್ಪಷ್ಟಪಡಿಸಿದರು.

'ಹನಿಟ್ರ್ಯಾಪ್ ಇರಬಹುದು ಅಥವಾ ಫೇಕ್'
ವಿಡಿಯೊ ನಾನು ಈವರೆಗೆ ನೋಡಿಲ್ಲ. ಇದು ಹನಿಟ್ರ್ಯಾಪ್ ಇರಬಹುದು ಅಥವಾ ಫೇಕ್ ಇರಬಹುದು. ನನ್ನ ಪ್ರಕಾರ ಇದು ಫೇಕ್ ವಿಡಿಯೊ. ಹನಿಟ್ರ್ಯಾಪ್​ಗೆ ಪ್ರಯತ್ನ ಪಟ್ಟಿದ್ದಾರೆ. ದಿನೇಶ್ ಕಲ್ಲಹಳ್ಳಿಯೂ ಇದರಲ್ಲಿ ಮಿಸ್​ಗೈಡ್ ಆಗಿರಬಹುದು. ಅವರಿಗೆ ಸಂಪೂರ್ಣ ಮಾಹಿತಿ ಕೊಡದೇ ದಾರಿತಪ್ಪಿಸಿದ್ದಾರೆ ಆಂತ ನನಗೆ ಅನ್ನಿಸುತ್ತೆ. ದಿನೇಶ್ ಕಲ್ಲಹಳ್ಳಿಯನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿರಬಹುದು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ