ಕೆ.ಆರ್‌.ಪೇಟೆಯಲ್ಲಿ ರೇವಣ್ಣ ಸ್ಪರ್ಧೆ ಮಾಡಲ್ಲ: ಶಾಸಕ ಸಿ.ಎಸ್‌.ಪುಟ್ಟರಾಜು

By Kannadaprabha News  |  First Published Feb 8, 2023, 8:52 PM IST

ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪುತ್ರ ಎಚ್‌.ಡಿ.ರೇವಣ್ಣ ಅಭ್ಯರ್ಥಿಯಾಗುವ ಪ್ರಶ್ನೆಯೇ ಇಲ್ಲ. ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಅವರೇ ಮಹಾರಾಜರು. 


ಪಾಂಡವಪುರ (ಫೆ.08): ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪುತ್ರ ಎಚ್‌.ಡಿ.ರೇವಣ್ಣ ಅಭ್ಯರ್ಥಿಯಾಗುವ ಪ್ರಶ್ನೆಯೇ ಇಲ್ಲ. ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಅವರೇ ಮಹಾರಾಜರು. ಅವರು ಅಲ್ಲಿಯೇ ನಿಂತು ಈ ಬಾರಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ಪಟ್ಟಣದ ವಿ.ಸಿ.ಕಾಲೋನಿಯಲ್ಲಿ ಕರ್ನಾಟಕ ಕೊಳಗೇರಿ ಮಂಡಳಿಯಿಂದ ನಡೆದ 30ಲಕ್ಷ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಬರುತ್ತಾರೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು. ಹಾಸನದಿಂದ ಭವಾನಿ ರೇವಣ್ಣ ಅವರು ಆಕಾಂಕ್ಷಿಯಾಗಿದ್ದಾರೆ. ಅವರ ಸ್ಪರ್ಧೆ ಬಗ್ಗೆ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ.ರೇವಣ್ಣ ಅವರು ಕೂತು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

Tap to resize

Latest Videos

ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ: ಸಂಸದ ಮುನಿಸ್ವಾಮಿ

ಎಲ್ಲಾ ಪಕ್ಷದಲ್ಲೂ ಕುಟುಂಬ ರಾಜಕಾರಣ: ಕುಟುಂಬ ರಾಜಕಾರಣ ಎಂಬುದು ಎಲ್ಲಾ ಪಕ್ಷಗಳಲ್ಲಿಯೂ ಇದೆ. ಮಾಜಿ ಸಿಎಂ ಯಡಿಯೂರಪ್ಪನವರ ಇಬ್ಬರು ಮಕ್ಕಳು ಇದ್ದಾರೆ. ಈಗ ಅವರ ಮಗಳಿಗೆ ಸೀಟ್‌ ನೀಡುವ ಹುನ್ನಾರ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಮಗನಿಗೆ ಎಂಎಲ್‌ಎ ಸೀಟ್‌ ಕೊಟ್ಟಿಲ್ವಾ. ಯಾವ ಪಾರ್ಟಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಹೇಳಿ ನೋಡೋಣ ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಸದಸ್ಯರ ಹೋರಾಟದಿಂದ ಜೆಡಿಎಸ್‌ ಪಕ್ಷ ಅಸ್ತಿತ್ವದಲ್ಲಿ ಇದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿ ಗಟ್ಟಿಯಾಗಿ ನೆಲೆ ನಿಂತಿದೆ ಎಂದರು.

ಜೆಡಿಎಸ್‌ನಲ್ಲಿ ಭಿನ್ನಮತದ ಅರ್ಥವಿಲ್ಲ: ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರಿಗೆ ಭಿನ್ನಮತದ ಪದದ ಅರ್ಥವೇ ಗೊತ್ತಿಲ್ಲ. ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎಚ್‌.ಟಿ.ಮಂಜುಗೆ ವರಿಷ್ಠರು ಟಿಕೆಟ್‌ ಘೋಷಣೆ ಮಾಡಿದ್ದಾರೆ. ಬಿ.ಎಲ್.ದೇವರಾಜು ಅವರಿಗೆ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿ. ಫಾರಂ ನೀಡುವಾಗ ಇದೆ ನಿಮ್ಮ ಕೊನೆ ಚುನಾವಣೆ ಎಂದು ಹೇಳಿ ನೀಡಲಾಗಿತ್ತು ಎಂದರು. ಈ ಬಾರಿ ಕ್ಷೇತ್ರಕ್ಕೆ ಎಚ್‌.ಟಿ.ಮಂಜಣ್ಣನೇ ಆಕಾಂಕ್ಷಿ ಆಗಬೇಕೆಂದು ಎಂಬುದು ಕಾರ್ಯಕರ್ತರು ಅಪೇಕ್ಷೆ ಮಾಡಿದ್ದರು. ಹೀಗಾಗಿ ಅವರಿಗೆ ಟಿಕೆಚ್‌ ನೀಡಲಾಗಿದೆ. ಬಂಡಾಯ ಎದ್ದಿರುವ ಅಭ್ಯರ್ಥಿಗಳನ್ನು ಸಮಾಧಾನ ಮಾಡುತ್ತೇವೆ ಎಂದರು.

ಎಚ್‌ಡಿಡಿ ಕುಟುಂಬದ ಬಗ್ಗೆ ಮಾತನಾಡಿದರೆ ಹಲ್ಲು ಉದುರುತ್ತದೆ: ಈ ಬಾರಿಯು ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲಲು ನಾವೆಲ್ಲರೂ ಶ್ರಮ ವಹಿಸುತ್ತೇವೆ. ದೇವೇಗೌಡರ ಮನೆ ವಿಚಾರಕ್ಕೆ ಯಾರಾದರೂ ಮೂಗು ತೂರಿಸುವ ಕೆಲಸ ಮಾಡದರೆ ಅಥವಾ ಮಧ್ಯೆ ಪ್ರವೇಶ ಮಾಡಿದರೆ ಅವರ ಹಲ್ಲು ಉದುರಿ ಹೋಯ್ತವೇ ಎಂದರು. 

ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲಿಕ್ಕೆ: ಸಚಿವ ಎಂಟಿಬಿ ನಾಗರಾಜ್‌

ಸೂರಜ್‌ ರೇವಣ್ಣ ಅವರು ಕುಮಾರಸ್ವಾಮಿ ಅವರನ್ನು ಕಡೆಗಣಿಸಿ ನೀಡಿದ್ದ ಹೇಳಿಕೆಗೆ ಸಂಬಂಧಿದ ಪ್ರಶ್ನೆಗೆ ಉತ್ತರಿಸಿ ಅಪ್ಪ ಮಕ್ಕಳು, ಅವರ ಕುಟುಂಬ ವಿಚಾರಕ್ಕೆ ನಿವ್ಯಾಕೆ ಹೋಗುತ್ತೀರಾ?, ದೇವೇಗೌಡರ ಮನೆ ವಿಚಾರಕ್ಕೆ ಹೋದವರ ಹಲ್ಲು ಉದುರಿ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯರಾದ ಆರ್‌.ಸೋಮಶೇಖರ್‌, ಸುನೀತಾ ಕದಿರೇಶನ್‌, ಸುಧಾ ಜಯರಾಂ, ಎನ್‌.ಚಂದ್ರಶೇಖರ್‌, ನರಸಿಂಹಚಾರಿ, ಮುಖ್ಯಾಧಿಕಾರಿ ವೀಣಾ, ಎಂಜನಿಯರ್‌ ಚೌಡಪ್ಪ, ಕೊಳಚೆ ನಿರ್ಮೂಲನೆ ಮಂಡಳಿ ಎಂಜನಿಯರ್‌ ಮಂಜೇಶ್‌ ಇತರರಿದ್ದರು.

click me!