ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಈಗ ಬಿಸಿಲಿನ ಜಳ ಹೆಚ್ಚಾಗುತ್ತಿದೆ. ಬಿಸಿಲು ಹೆಚ್ಚಾದಂತೆ ರಾಜಕೀಯ ಚಟುವಟಿಕೆಗಳು ಸಹ ಹೆಚ್ಚಾಗುತ್ತಿವೆ. ಇಷ್ಟು ದಿನಗಳ ಕಾಲ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಚಟುವಟಿಕೆಗಳು ಮಾತ್ರ ಜೋರಾಗಿ ಕೇಳಿಬರುತ್ತಿತ್ತು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್, ಸುವರ್ಣ ನ್ಯೂಸ್, ರಾಯಚೂರು
ರಾಯಚೂರು (ಫೆ.08): ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಈಗ ಬಿಸಿಲಿನ ಜಳ ಹೆಚ್ಚಾಗುತ್ತಿದೆ. ಬಿಸಿಲು ಹೆಚ್ಚಾದಂತೆ ರಾಜಕೀಯ ಚಟುವಟಿಕೆಗಳು ಸಹ ಹೆಚ್ಚಾಗುತ್ತಿವೆ. ಇಷ್ಟು ದಿನಗಳ ಕಾಲ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಚಟುವಟಿಕೆಗಳು ಮಾತ್ರ ಜೋರಾಗಿ ಕೇಳಿಬರುತ್ತಿತ್ತು. ಆದ್ರೆ ಈಗ ಆ ಮೂರು ಪಕ್ಷಗಳನ್ನು ಮಣಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಟ್ಟಿರುವ ಆಮ್ ಆದ್ಮಿ ಪಾರ್ಟಿಯ ಚಟುವಟಿಕೆಗಳು ಸಹ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಜೋರಾಗುತ್ತಿವೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವೂ ಎಸ್. ಟಿ. ಮೀಸಲು ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಇದ್ದರೆ. ಕಾಂಗ್ರೆಸ್ ಸೋಲಿಸಲು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು ಮಾಡುತ್ತಾ ಮತದಾರ ಮನಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ.
undefined
ಇತ್ತ ಜೆಡಿಎಸ್ ನ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಪಂಚರತ್ನ ಯಾತ್ರೆ ಮುಗಿಸಿ, ಗ್ರಾಮೀಣ ಪ್ರದೇಶದಲ್ಲಿ ತಿರುಗಾಟ ನಡೆಸಿ ಸ್ಥಳೀಯರಿಗೆ ಒಂದು ಅವಕಾಶ ನೀಡಿ ಅಂತ ಹೇಳುತ್ತಾ ಮತಬೇಟೆ ಶುರು ಮಾಡಿದ್ದಾರೆ. ಈ ಮೂರು ಪಕ್ಷಗಳ ಮಧ್ಯೆ ಆಪ್ ಅಭ್ಯರ್ಥಿ ಡಾ. ಸುಭಾಷ್ ಚಂದ್ರ ಸಂಭಾಜೀ, ನಾನು ಸಿವಿಲ್ ಇಂಜಿನಿಯರಿಂಗ್ ಪದವೀಧರ ನಾನು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನವರು ಆಗಿದ್ರು. ನಾನು ರಾಯಚೂರು ಗ್ರಾಮೀಣ ಜನರ ಸೇವೆ ಮಾಡಲು ರಾಯಚೂರಿಗೆ ಬಂದಿದ್ದೇನೆ. ನಾನು ಸೋತರು, ಗೆದ್ದರೂ ರಾಯಚೂರಿನಲ್ಲಿಯೇ ಇರುತ್ತೇನೆ. ನನಗೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ ಅಂತ ಗ್ರಾಮೀಣ ಪ್ರದೇಶಗಳಲ್ಲಿ ಓಡಾಟ ನಡೆಸಿ ಆಪ್ ಪಕ್ಷ ಸಂಘಟನೆ ನಡೆಸಿದ್ದಾರೆ.
Raichur: ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿನಿ ಆತ್ಮಹತ್ಯೆ
ಯಾರು ಈ ಡಾ. ಸುಭಾಷ್ ಚಂದ್ರ ಸಂಭಾಜೀ?: ಡಾ.ಸುಭಾಷ್ ಚಂದ್ರ ಸಂಭಾಜೀ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ.. ಡಾ.ಸುಭಾಷ್ ಚಂದ್ರ ಸಂಭಾಜೀ, ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕುರಪಟ್ಟಹಳ್ಳಿಯವರು. ಓದಿದ್ದು ಸಿವಿಲ್ ಇಂಜಿನಿಯರಿಂಗ್..ಪದವಿ ಮುಗಿದ ಬಳಿಕ ಸರ್ಕಾರಿ ಇಂಜಿನಿಯರ್ ಆಗಿ ಸುಮಾರು 25 ವರ್ಷ ನೀರಾವರಿ, PWD, ಪ್ರಧಾನ್ ಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿದ್ದು, ಸದ್ಯ ನಿವೃತ್ತಿ ಹೊಂದಿದ್ದ ಡಾ.ಸುಭಾಷ್ ಚಂದ್ರ ಸಂಭಾಜೀ, ಇಂಜಿನಿಯರ್ ಆಗಿದ್ದ ವೇಳೆಯಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಇರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಆಪ್ ಪಕ್ಷ ಸೇರಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಅದರ ಭಾಗವಾಗಿ ರಾಯಚೂರು ನಗರದಲ್ಲಿ ಮನೆ ಮಾಡಿ ನಿತ್ಯ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲ ಪಕ್ಷ ಸಂಘಟನೆ ಶುರು ಮಾಡಿದ್ದಾರೆ.
ಗ್ರಾಮೀಣ ಕ್ಷೇತ್ರ ಸಂಪೂರ್ಣ ನೀರಾವರಿ ಮಾಡಲು ನನಗೆ ಬೆಂಬಲಿಸಿ: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದೊಡ್ಡ ನದಿಗಳು ಹರಿಯುತ್ತಿವೆ. ಒಂದು ಕಡೆ ಕೃಷ್ಣಾ ನದಿ ಇದ್ರೆ, ಮತ್ತೊಂದು ಕಡೆ ತುಂಗಭದ್ರಾ ನದಿಯಿದೆ. ಆದ್ರೂ ರಾಯಚೂರು ಗ್ರಾಮೀಣ ಕ್ಷೇತ್ರದ 50ರಷ್ಟು ಪ್ರದೇಶವೂ ಒಣಭೂಮಿ ಇದೆ. ಈ ಪ್ರದೇಶಕ್ಕೆ ನೀರಾವರಿ ಮಾಡಲು ಹತ್ತಾರು ಯೋಜನೆಗಳು ತಂದರೂ ನೀರಾವರಿ ಮಾಡಲು ಆಗಿಲ್ಲ. ಹೀಗಾಗಿ ನಾನು ನೀರಾವರಿ ಇಂಜಿನಿಯರ್ ಆಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರವೂ ಪ್ರದೇಶ ಸಂಪೂರ್ಣ ಮಾಡುವ ಗುರಿ ಕಟ್ಟಿಕೊಂಡು ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಬಂದಿದ್ದೇನೆ. ಕ್ಷೇತ್ರದಲ್ಲಿ ಓಡಾಟ ಮಾಡಿ ಆಪ್ ಪಕ್ಷದ ಸಂಘಟನೆ ಮಾಡುವ ಕೆಲಸ ಶುರು ಮಾಡಿದ್ದೇನೆ. ಕ್ಷೇತ್ರದ ಜನರು ಸಹ ಪ್ರೀತಿ ವಿಶ್ವಾಸದಿಂದ ನನಗೆ ಸ್ವಾಗತ ಮಾಡುತ್ತಿದ್ದಾರೆ.
ಕೇಜ್ರಿವಾಲ್ ಸಿದ್ಧಾಂತಗಳೇ ನನಗೆ ಶ್ರೀರಕ್ಷೆ: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಭಾಷ್ ಚಂದ್ರ ಸಂಭಾಜೀ ಕಳೆದ 7-8 ತಿಂಗಳಿಂದ ಕ್ಷೇತ್ರದಲ್ಲಿ ತಿರುಗಾಟ ನಡೆಸಿದ್ದಾರೆ. ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಆಡಳಿತ ಜನರು ನೋಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 76 ವರ್ಷಗಳು ಕಳೆದರೂ ಸಹ ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಬದುಕು ಬದಲಾಗಿಲ್ಲ. ಜನರು ಬದಲಾವಣೆ ಬಯಸಿದ್ದಾರೆ. ಜನರಿಗೆ ಇಷ್ಟು ದಿನಗಳ ಕಾಲ ಕೇವಲ ಮೂರು ಪಕ್ಷಗಳು ಮಾತ್ರ ಇದ್ದವು, ಹೀಗಾಗಿ ಅವರಿಗೆ ಆಯ್ಕೆ ಇರಲಿಲ್ಲ.
ಈಗ ಹೊಸ ಆಯ್ಕೆ ಆಗಿ ಆಪ್ ಪಕ್ಷ ಬಂದಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಕೂಡ ಗುಡಿಸಲು ಮನೆಗಳು ನೋಡುತ್ತೇವೆ. ಬಡತನ ತಾಂಡಾವಾಡುತ್ತಿದೆ. ಜನರು ಜಮೀನು ಇದ್ರೂ ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೋಗುತ್ತಾರೆ. ಗ್ರಾಮೀಣ ಪ್ರದೇಶದ ಅಂಗಡಿಗಳು ಮದ್ಯ ಮಾರಾಟದಿಂದ ಯುವಕರು ದುಷ್ಟ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ನಾನು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆ ಮುಂದುವರೆಸಿದ್ದೇನೆ. ಜನರ ಬಳಿ ಹೋದಾಗ ಜನರು ತಮ್ಮ ನೋವುಗಳನ್ನು ನಮ್ಮ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಜನರ ಸಮಸ್ಯೆ ದೂರು ಮಾಡಲು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವ್ಯರ್ಥವಾಗಿ ಹರಿದು ಹೋಗುವ ಎರಡು ನದಿಗಳ ನೀರಿನ ಬಳಕೆ ಆಗಬೇಕಾಗಿದೆ.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಹತ್ತಾರು ಕೆರೆಗಳು ಇವೆ. ಆ ಕೆರೆಗಳಿಗೆ ನದಿಯಿಂದ ನೀರು ತುಂಬಿಸುವ ಪ್ಲಾನ್ ಹಾಕಿಕೊಂಡಿದ್ದೇನೆ. ಜೊತೆಗೆ ದೆಹಲಿ ಮಾದರಿ ಅಭಿವೃದ್ಧಿ ಮಾಡುವ ಕನಸು ಇಟ್ಟುಕೊಂಡು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಜನರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸದೊಂದಿಗೆ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಹೋದ ಕಡೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಿದ್ಧಾಂತಗಳನ್ನು ಜನರಿಗೆ ಮನವರಿಕೆ ಮಾಡುತ್ತಾ ಆಮ್ ಆದ್ಮಿ ಪಕ್ಷ ಸಂಘಟನೆ ನಡೆಸಿದ್ದೇವೆ.ಹೀಗಾಗಿ ಇಷ್ಟು ದಿನಗಳ ಕಾಲ ಮೂರು ಪಕ್ಷಗಳ ಬಗ್ಗೆ ಚರ್ಚೆ ಮಾಡುತ್ತಾ ಇದ್ದ ಜನರು ಈಗ ಆಮ್ ಆದ್ಮಿ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಶುರು ಮಾಡಿದ್ದಾರೆ.
ಮೂರು ಪಕ್ಷಗಳಿಗೆ ಟಕ್ಕರ್ ನೀಡುತ್ತಾ ಆಪ್: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಮತ್ತು ವಾಲ್ಮೀಕಿ ಸಮುದಾಯದ ಮತಗಳು ಹೆಚ್ಚಾಗಿವೆ. ಈ ಎರಡು ಸಮುದಾಯದ ಮತಗಳು ಸೆಳೆಯಲು ಮೂರು ಪಕ್ಷಗಳು ನಾನಾ ಕಸರತ್ತು ನಡೆಸಿವೆ. ಈಗ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಭಾಜೀ ಕುರುಬಗೊಂಡ ಸಮುದಾಯಕ್ಕೆ ಸೇರಿದವರು. ಜೊತೆಗೆ ಕುರುಬ ಸಮುದಾಯದ ಮತಗಳೇ ಟಾರ್ಗೆಟ್ ಮಾಡಿ ಆಪ್ ಅಭ್ಯರ್ಥಿ ಓಡಾಟ ಶುರು ಮಾಡಿದ್ದಾರೆ. ಹೀಗಾಗಿ ಮೂರು ಪಕ್ಷಗಳಿಗೆ ಕೆಲ ಕುರುಬ ಸಮುದಾಯದ ಮತಗಳು ಕೈತಪ್ಪುವ ಸಾಧ್ಯತೆಯೂ ಇದೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್.ಡಿ.ಕುಮಾರಸ್ವಾಮಿ
ಮುಖ್ಯವಾಗಿ ಆಪ್ ಅಭ್ಯರ್ಥಿ ಸುಭಾಷ್ ಚಂದ್ರ ಸಂಭಾಜೀ ಗ್ರಾಮೀಣ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ಶುರು ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ಬೇರೆ ಪಕ್ಷಗಳಿಗೆ ಬೆಂಬಲಿಸುತ್ತಾ ಬಂದಿದ್ದು, ಈ ಬಾರಿ ಆಪ್ ಗೆ ಬೆಂಬಲಿಸಿ ಅಂತ ವಿವಿಧ ಪಕ್ಷಗಳ ಕುರುಬ ಸಮುದಾಯದ ಮುಖಂಡರ ಮನವೊಲಿಸಲು ಮುಂದಾಗಿದ್ದು, ಇತರೆ ಪಕ್ಷಗಳಿಗೆ ಇದು ನುಂಗಲಾರದ ತುತ್ತಾಗಿದೆ. ಒಟ್ಟಾರೆ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿದು ಪಕ್ಷ ಸಂಘಟನೆ ಜೊತೆಗೆ ಮತಬೇಟೆ ಶುರು ಮಾಡಿದ್ದಾರೆ. ಆದ್ರೆ ಮತದಾರ ಪ್ರಭು ಯಾವ ಪಕ್ಷಕ್ಕೆ ಜೈ ಎನ್ನುತ್ತಾನೆ ಎಂಬುವುದು ಕಾದು ನೋಡಬೇಕಾಗಿದೆ.