ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲಿಕ್ಕೆ: ಸಚಿವ ಎಂಟಿಬಿ ನಾಗರಾಜ್‌

By Kannadaprabha News  |  First Published Feb 8, 2023, 8:08 PM IST

ಕ್ಷೇತ್ರದ ಅಭಿದ್ಧಿ ವಿಚಾರದಲ್ಲಿ ನಾನು ನನ್ನ ಕುಟುಂಬ ಹಗಲಿರುಳು ಶ್ರಮಿಸುವ ಮೂಲಕ ಜನ ಸೇವೆ ಮಾಡುವುದು ನಮ್ಮ ಉದ್ದೇಶವಾಗಿದೆ. ದೇವರು ನನಗೆ ಹಣ-ಅಂತಸ್ತು ಕೊಟ್ಟಿದ್ದಾನೆ. ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡುವ ಸಲುವಾಗಿ. 


ಹೊಸಕೋಟೆ (ಫೆ.08): ಕ್ಷೇತ್ರದ ಅಭಿದ್ಧಿ ವಿಚಾರದಲ್ಲಿ ನಾನು ನನ್ನ ಕುಟುಂಬ ಹಗಲಿರುಳು ಶ್ರಮಿಸುವ ಮೂಲಕ ಜನ ಸೇವೆ ಮಾಡುವುದು ನಮ್ಮ ಉದ್ದೇಶವಾಗಿದೆ. ದೇವರು ನನಗೆ ಹಣ-ಅಂತಸ್ತು ಕೊಟ್ಟಿದ್ದಾನೆ. ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡುವ ಸಲುವಾಗಿ. ಸಮ್ಮಿಶ್ರ ಸರಕಾರದಲ್ಲೂ ಸಹ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲವೆಂದು ರಾಜೀನಾಮೆ ನೀಡಿ ಬಂದೆ. ಕ್ಷೇತ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಸಚಿವ ಎಂ.ಟಿ.ಬಿ. ನಾಗರಾಜ್‌ ತಿಳಿಸಿದ್ದಾರೆ.

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಹರಳೂರು ಗ್ರಾಮದಲ್ಲಿ ಸಿಸಿ ರಸ್ತೆ, ಹೈಮಾಸ್‌್ಕ ಲೈಟ್‌ ಹಾಗೂ ಗ್ರಾವೆಲ್‌ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಮತದಾರರ ಋುಣ ನನ್ನ ಮೇಲಿದೆ. ಮತದಾರರ ಋುಣ ತೀರಿಸಲು ಆಗುವುದಿಲ್ಲ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶೇಷ ಅನುದಾನಗಳನ್ನು ತರುವ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ನಾನು ರಾಜಕೀಯಕ್ಕೆ ಬಂದಿರುವುದು ಸಹ ಜನ ಸೇವೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು. 

Tap to resize

Latest Videos

ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!

ಗ್ರಾಮಗಳಲ್ಲಿ ಶಾಂತಿ-ಸುವ್ಯವಸ್ಥೆ ನೆಲಸುವಂತೆ ಮಾಡಲು. ಆದರೆ ರಾಜಕೀಯವನ್ನು ಗ್ರಾಮಗಳಲ್ಲಿ ದ್ವೇಷ ಬೆಳೆಸಿ ಸಾಮರಸ್ಯ ಒಡೆಯಲು ಬಳಸಬಾರದು. ಜನ ಯಾರಿಗೇ ಅ​ಧಿಕಾರ ನಡೆಸಲು ಅವಕಾಶ ನೀಡಿದರು ಅವರು ಜನರ ಸೇವೆ ಮಾಡಬೇಕು. ಬಡವರಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆಯಬಾರದು ಎಂದರು. ಕಾರ‍್ಯಕ್ರಮದಲ್ಲಿ ಬಿ.ಎಂ.ಆರ್‌.ಡಿ.ಎ. ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ಕೋಡಿಹಳ್ಳಿ ಜಾನಿ, ಬೇಗೂರು ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್‌. ರಾಮು, ಜೆ.ಆರ್‌.ಡಿ. ಪ್ರಕಾಶ್‌ ಹಾಗೂ ಇತರರು ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಹಿನ್ನಡೆ ಮಾಡಿಲ್ಲ: ಉಪಚುನಾವಣೆಯಲ್ಲಿ ನಾನು ಸೋತರೂ ಸಹ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಂದಿಗೂ ನಾನು ಹಿಂದೆ ಸರಿದಿಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ನಾರಾಯಣಕೆರೆ, ಕಲ್ಕುಂಟೆ ಅಗ್ರಹಾರ, ಅರೆಹಳ್ಳಿ ಮುತ್ತುಕದಹಳ್ಳಿ, ಬ್ಯಾಲಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಸುಮಾರು 18 ವರ್ಷಗಳ ಕಾಲ ಅ​ಧಿಕಾರ ಮಾಡಿದ ನಾನು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಪಕ್ಷಕ್ಕೆ ಬಂದೆ. ಆಗ ನಡೆದ ಉಪ ಚುನಾವಣೆಯಲ್ಲಿ ನಾನು ಸೋಲುನುಭವಿಸಬೇಕಾಯಿತು. 

ನನ್ನ ರಾಜಕೀಯ ಜೀವನದಲ್ಲಿ ಪಕ್ಷ ಭೇದ ಮರೆತು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೆ. ಆದರೂ ಕೂಡ ಸೋಲನುಭವಿಸಬೇಕಾಯಿತು. ಚುನವಣೆಯಲ್ಲಿ ಸೋತರೂ ಕೂಡ ಬಿಜೆಪಿ ಸರ್ಕಾರದಲ್ಲಿ ವಿಧಾನ ಪರಿಷತ್‌ ಸದಸ್ಯನಾಗಿ, ಸಚಿವನಾಗಿದ್ದೇನೆ. ಆದರೆ ಕೇವಲ ಅಧಿ​ಕಾರಕ್ಕಾಗಿ ಅಂಟಿಕೊಳ್ಳದೆ ನನಗೆ ರಾಜಕೀಯವಾಗಿ ಜನ್ಮ ಕೊಟ್ಟಂತಹ ಕ್ಷೇತ್ರದ ಅಭಿವೃದ್ಧಿಗೆ ದೃಢ ಸಂಕಲ್ಪ ತೊಟ್ಟೆ. ಸರ್ಕಾರದಿಂದ ವಿಶೇಷ ಅನುದಾನಗಳನ್ನು ತರುವ ಮೂಲಕ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದೇನೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ನೀಡುವ ಕೆಲಸ ಆಗಬೇಕು ಎಂದರು.

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಆಪ್ ಮಾಡುತ್ತಾ ಕಮಾಲ್: ಸಂಭಾಜೀ ನೇತೃತ್ವದಲ್ಲಿ ಪಕ್ಷ ಸಂಘಟನೆ

ಅನುಗೊಂಡನಹಳ್ಳಿ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ಓಬಳಾಪುರ ಮಂಜುನಾಥ್‌ ಮಾತನಾಡಿ, ಉಪ ಚುನವಣೆಯಲ್ಲಿ ಕ್ಷೇತ್ರದ ಜನ ಮಾಡಿದ ತಪ್ಪು ಇಂದು ಸಾಕಷ್ಟುಜನರಿಗೆ ಅರಿವಾಗಿದೆ. ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್‌ ಅವರು ಮತ ಪಡೆದು ಗೆದ್ದಿರುವ ಶಾಸಕರಿಗಿಂತ ಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಗ್ರಾಮಗಳಿಗೆ ತೆರಳಿ ಜನರ ಕಷ್ಟಸುಖ ಆಲಿಸುವ ಮೂಲಕ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ಅಭಿವೃದ್ಧಿ ಹೊಂದಲು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಗ್ರಾಮಗಳಲ್ಲಿ ಮತದಾನ ಮಾಡಬೇಕು ಎಂದರು.

click me!