ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದಾಗಿ ಹೇಳುತ್ತಿರುವ ಕುಮಾರಸ್ವಾಮಿ ಸ್ವತಂತ್ರವಾಗಿ ಕೇವಲ 5 ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ರಾಮನಗರ (ಜ.29): ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದಾಗಿ ಹೇಳುತ್ತಿರುವ ಕುಮಾರಸ್ವಾಮಿ ಸ್ವತಂತ್ರವಾಗಿ ಕೇವಲ 5 ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಇಂದು ನಡೆದ ಶಾದಿ ಮಹಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕುಮಾರಸ್ವಾಮಿ ನನಗೆ ಹೊಸ ಪಕ್ಷ ಕಟ್ಟಿ ಶಕ್ತಿ ಪ್ರದರ್ಶನ ಮಾಡುವಂತೆ ಸವಾಲು ಹಾಕಿದ್ದಾರೆ. ನಾನೇಕೆ ಕುಮಾರಸ್ವಾಮಿ ಹೇಳಿದ ಅಂತ ಹೊಸ ಪಕ್ಷ ಕಟ್ಟಲು ಹೋಗಬೇಕಾ.? ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇನ್ನು ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದಾಗಿ ಹೇಳುತ್ತಿರುವ ಕುಮಾರಸ್ವಾಮಿ ಕೇವಲ ೫ ಸ್ಥಾನ ಸ್ವತಂತ್ರವಾಗಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಕೊಟ್ಟಮಾತು ಮರೆತಿರುವ ಸಿದ್ದರಾಮಯ್ಯ ಅಧಿಕಾರ ದಾಹಿ : ಅಶ್ವತ್ಥನಾರಾಯಣ್
ಕಾಂಗ್ರೆಸ್ ಮತಗಳನ್ನ ಜೆಡಿಎಸ್ ಒಡೆಯುತ್ತಿದೆ: ಸಿದ್ದರಾಮಯ್ಯ ಅವರು ಧರ್ಮಸ್ಥಳದ ಸಿದ್ದವನದಲ್ಲಿ ಸಭೆ ನಡೆಸಿ ಮೈತ್ರಿ ಸರ್ಕಾರ ಕೆಡವಲು ಮುಂದಾಗಿದ್ದಲ್ಲದೆ ಕೇವಲ 14 ತಿಂಗಳಲ್ಲೇ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಂಚು ರೂಪಿಸಿದ್ದು ಗೊತ್ತಿಲ್ಲದ ವಿಚಾರವಲ್ಲ ಎಂದು ಕುಮಾರಸ್ವಾಮಿ ಆರೋಪಿಸುತ್ತಾರೆ. ಆದರೆ, ಬಿಜೆಪಿ ಜೊತೆ ಹೋದವರು ಯಾರು ಎಂಬುದನ್ನು ಕುಮಾರಸ್ವಾಮಿ ತಿಳಿದುಕೊಳ್ಳಬೇಕು. ನಮಗೂ ಜೆಡಿಎಸ್‌ಗೂ ಸಂಬಂಧವಿಲ್ಲ. ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವಾಗಿ ಅವರಿಗೆ ಯಾವುದೇ ತತ್ವ ಸಿದ್ದಾಂತ ಇಲ್ಲ. ಬಿಜೆಪಿಗೆ ಅನುಕೂಲ ಮಾಡಲು, ಕಾಂಗ್ರೆಸ್ ಮತಗಳನ್ನ ಒಡೆಯುವುದಕ್ಕಾಗಿಯೇ ಜೆಡಿಎಸ್ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.
ಜೆಡಿಎಸ್‌ಗೆ ಸಿದ್ದಾಂತ, ವೈಚಾರಿಕತೆ ಇಲ್ಲ: ದೇಶದಲ್ಲಿ ಜಾತಿ ವ್ಯವಸ್ಥೆ ದೇವರು ಮಾಡಿದ್ದಲ್ಲ. ಸ್ವಾರ್ಥಕ್ಕೋಸ್ಕರ ನಾವು ಮಾಡಿರೋದು. ನಾವು ಒಂದು ಧರ್ಮ, ಜಾತಿಯಲ್ಲಿ ಹುಟ್ಟಿದ್ದೇವರ ಅದನ್ನ ಪಾಲನೆ ಮಾಡ್ತಿದ್ದೇವೆ. ಆದರೆ ಇನ್ನೊಂದು ಧರ್ಮ, ಜಾತಿಯನ್ನ ದ್ವೇಷಿಸಬಾರದು. ಬಿಜೆಪಿಯವರು ಆ ಕೆಲಸವನ್ನ ಮಾಡ್ತಾರೆ. ಈ ಜೆಡಿಎಸ್ ನವರಿಗೂ ಸಿದ್ದಾಂತ, ವೈಚಾರಿಕತೆ ಇಲ್ಲ. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗ್ತಾರೆ. ನನ್ನನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಮಾಡುವುದಾಗಿ ಹೇಳಿದರೂ ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ. ಆರ್ ಎಸ್ಎಸ್ ಪರ ಹೋಗಲ್ಲ. ಅದಕ್ಕೆ ನನ್ನನ್ನು ಹಿಂದೂ ವಿರೋಧಿ ಅಂತ ಬಿಂಬಿಸುತ್ತಿದ್ದಾರೆ. ಗಾಂಧೀಜಿ ಅಪ್ಪಟ ಹಿಂದೂ ಅಲ್ವಾ. ಅಂತವರನ್ನ ಕೊಂದ ಗೂಡ್ಸೆಯನ್ನ ಪೂಜಿಸುವ ಇವರು ಹಿಂದೂನಾ.? ಇವರಿಗೆ ಮರ್ಯಾದೆ ಇದ್ಯಾ. ಇಂತವರ ಜೊತೆ ಸೇರಿಕೊಂಡಿರೋ ಜೆಡಿಎಸ್ ನವರಿಗೆ ಮಾನಮರ್ಯಾದೆ ಇದ್ಯಾ.? ಎಂದರು.
ಬಿಜೆಪಿ ‘ಪಾಪದ ಪುರಾಣ’ ಪ್ರಚಾರಕ್ಕಾಗಿ ಯಾತ್ರೆ: ಸಿದ್ದರಾಮಯ್ಯ
ಬಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಭರವಸೆ: ಮಾಗಡಿಯಲ್ಲಿ ಸಿದ್ದರಾಂಯ್ಯ ಭಾಷಣದ ವೇಲೆ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರಿಗ ಮಂತ್ರಿ ಸ್ಥಾನ ಕೊಡಬೇಕು ಎಂದು ಕಾರ್ಯಕರ್ತರು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಮೊದಲು ಗೆಲ್ಲಿಸಿ ಆಮೇಲೆ ಮಂತ್ರಿ ಮಾಡೊಣ. ಮೊದಲು ಹೆಣ್ಣು ನೋಡಿ, ಆಮೇಲೆ ಮದುವೆ ಮಾಡೋಣ. ಹೆಣ್ಣು ನೋಡದೇ ಮದುವೆ ಮಾಡಲು ಸಾಧ್ಯವೇ. ಹಾಗೆಯೇ ಮೊದಲು ಬಾಲಕೃಷ್ಣ ಅವರನ್ನು ಶಾಸಕರನ್ನಾಗಿ ಮಾಡಿ. ಆಮೇಲೆ ತೀರ್ಮಾನ ಮಾಡೋಣ. ಈ ಬಾರಿ ಬಾಲಕೃಷ್ಣ ಅವರನ್ನ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಕೈಮುಗಿದರು.