ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನರ ಹಿತ ಮರೆತಿವೆ: ಕುಮಾರಸ್ವಾಮಿ

By Kannadaprabha News  |  First Published Mar 9, 2023, 2:30 AM IST

ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನರ ಹಿತ ಮರೆತಿವೆ. ಜನಪರ ಕಾಳಜಿಯಿಲ್ಲದೇ ಇರುವುದರಿಂದ ರಾಜ್ಯ ಅಧೋಗತಿಯತ್ತ ಸಾಗುತ್ತಿದೆ. ಜನಪರವಾಗಿರುವ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿದಾಗ ಮಾತ್ರ ಜನ ಕಲ್ಯಾಣ ಸಾಧ್ಯ ಎಂದ ಎಚ್‌.ಡಿ. ಕುಮಾರಸ್ವಾಮಿ. 


ಕೊಪ್ಪಳ(ಮಾ.09): ಜನತೆ ನೆಮ್ಮದಿಯಿಂದ ಜೀವನ ಸಾಗಿಸಬೇಕೆಂದರೇ ರಾಜ್ಯದಲ್ಲಿ ಸ್ವತಂತ್ರವಾಗಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅಭಿಲಾಷೆ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಬಾದಾಮಿಗೆ ಪಯಣ ಬೆಳೆಸುತ್ತಿದ್ದ ಅವರು, ತಾಲೂಕಿನ ಹಿಟ್ನಾಳ್‌ ಟೋಲ್‌ ಗೇಟ್‌ ಬಳಿ ಬುಧವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಹಾಗು ಜೆಡಿಎಸ್‌ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮನೆ-ಮನೆಗೆ ಕರಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು ಅಧಿಕಾರದಲ್ಲಿದ್ದಾಗ ಜನರ ಹಿತ ಮರೆತಿವೆ. ಜನಪರ ಕಾಳಜಿಯಿಲ್ಲದೇ ಇರುವುದರಿಂದ ರಾಜ್ಯ ಅಧೋಗತಿಯತ್ತ ಸಾಗುತ್ತಿದೆ. ಜನಪರವಾಗಿರುವ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿದಾಗ ಮಾತ್ರ ಜನ ಕಲ್ಯಾಣ ಸಾಧ್ಯ ಎಂದರು.

Tap to resize

Latest Videos

undefined

KOPPAL: ರೈಲ್ವೇ ಸೇತುವೆ ಮಾಡಿಸಿಕೊಡುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಸಚಿವ ಆನಂದ್‌ ಸಿಂಗ್‌ಗೆ ಗ್ರಾಮಸ್ಥರಿಂದ ತರಾಟೆ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಬೇಕು. ಅಂದಾಗ ಮಾತ್ರ ಜನರು ನೆಮ್ಮದಿಯಿಂದ ಬದುಕಲಿದ್ದಾರೆ. ಬಿಜೆಪಿ ಕೋಮುವಾದ ಬೆಂಬಲಿಸಿದರೇ ಕಾಂಗ್ರೆಸ್‌ ಮತ್ತೊಂದು ಅನ್ಯಾಯ ಮಾಡುವಲ್ಲಿ ನಿರತವಾಗಿದೆ. ವಾಸ್ತವವಾಗಿ ಜನರ ಸಮಸ್ಯೆ ಕೇಳುವವರಿಲ್ಲದಂತಾಗಿರುವುದರಿಂದ ಸಮಸ್ಯೆಗಳು ಜ್ವಲಂತವಾಗಿವೆ. ಹೀಗಾಗಿ ಜೆಡಿಎಸ್‌ಗೆ ಅಧಿಕಾರ ಕೊಡಿ ಎಂದು ಕರೆ ನೀಡಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ನಿಯೋಜಿತ ಅಭ್ಯರ್ಥಿವೀರೇಶ ಮಹಾಂತಯ್ಯನಮಠ, ಜಿಲ್ಲಾ ಪ್ರ.ಕಾ. ಮಂಜುನಾಥ ಸೊರಟೂರು, ತಾಲೂಕಾಧ್ಯಕ್ಷ ಚನ್ನಪ್ಪ ಮುತ್ತಾಳ, ಕಾರ್ಯದರ್ಶಿ ಅಯುಬ್‌ ಅಡ್ಡೆವಾಲೆ, ಎಂ.ಡಿ.ಷಫಿ, ಸುರೇಶಗೌಡ ಪಾಟೀಲ…, ಮೂರ್ತೆಪ್ಪ ಗಿಣಿಗೇರಿ, ಪರಶುರಾಮ ಚಿಗರಿ, ಮಾರುತಿ ಕೊರಗಲ, ಬಸವರಾಜ ಹಲಗೇರಿ, ಆಂಜನೇಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

click me!