'ಆರೆಸ್ಸೆಸ್‌ನಲ್ಲಿ ಅಭ್ಯಾಸ ಮುಗಿಸಿದವರಿಗೆ ಬಿಜೆಪಿ ಟಿಕೆಟ್‌ ನೀಡಿ'

By Kannadaprabha News  |  First Published Mar 8, 2023, 10:30 PM IST

ಎಲ್ಲಿಂದಲೋ ಬಂದವರನ್ನು ಅಧಿ​ಕಾರ ದಾಹಕ್ಕೆ ಖರೀದಿ ಮಾಡಿಕೊಂಡು ಧರ್ಮವನ್ನು ಹಾಳು ಮಾಡಬೇಡಿ. ಹಿಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದ ಸಂಜೀವ ಮರಡಿ. 


ಬಾಗಲಕೋಟೆ(ಮಾ.08): ಬಿಜೆಪಿಯಲ್ಲಿ ಯಾರು ಹಿರಿಯ ನಾಯಕರು ಇದ್ದಾರೆ ಅವರೆಲ್ಲರನ್ನು ದೂರ ಮಾಡಲಾಗಿದೆ. ಯಾರು ಬಿಜೆಪಿ ಶಾಸಕರಾಗಬೇಕು ಎಂದು ಆಶಯವನ್ನು ಹೊಂದಿದ್ದಾರೆ ಅವರೆಲ್ಲರೂ ಮೊದಲು ಆರ್‌ಎಸ್‌ಎಸ್‌ ಅಭ್ಯಾಸ ವರ್ಗಕ್ಕೆ ಸೇರಿಕೊಳ್ಳಬೇಕು. ಆರ್‌ಎಸ್‌ಎಸ್‌ನಲ್ಲಿ ಐಟಿಸಿ, ಓಟಿಸಿ ತರಬೇತಿ ಪಡೆದು ಬರಬೇಕು. ಅಭ್ಯಾಸವನ್ನು ಸಂಪೂರ್ಣವಾಗಿ ಮುಗಿಸಿದ ಮೇಲೆ ಅವರಿಗೆ ಟಿಕೆಟ್‌ ನೀಡಬೇಕು. ಅಂದಾಗ ಅವರಿಗೆ ಹಿಂದುತ್ವದ ಅರಿವಾಗುತ್ತದೆ ಎಂದು ಶ್ರೀರಾಮ ಸೇನೆ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಹೇಳಿದರು.

ಮಂಗಳವಾರ ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಿಂದಲೋ ಬಂದವರನ್ನು ಅಧಿ​ಕಾರ ದಾಹಕ್ಕೆ ಖರೀದಿ ಮಾಡಿಕೊಂಡು ಧರ್ಮವನ್ನು ಹಾಳು ಮಾಡಬೇಡಿ. ಹಿಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

undefined

ಅಧಿಕಾರ ಕೊಟ್ಟರೆ ರಾಮರಾಜ್ಯ ನಿರ್ಮಾಣ: ಜೆಡಿಎಸ್‌ ಸಮಾವೇಶದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ

ಬಾಗಲಕೋಟೆ ಜಿಲ್ಲೆಯಲ್ಲಿ ಕೆಲವು ನಾಯಕರು, ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಇದ್ದರೂ ಸುಖಾಸುಮ್ಮನೆ ಕೆಲವರನ್ನು ಉಚ್ಚಾಟಿಸುವುದು ಸರಿಯಲ್ಲ. ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ಬಿಜೆಪಿ ಶಾಸಕರಿಂದಲೇ ಕೇಸು ದಾಖಲಿಸುವ ಕೆಲಸ ನಡೆಯುತ್ತಿದೆ. ಇದು ಸರಿಪಡಿಸಿಕೊಳ್ಳದಿದ್ದರೇ ಪರಿಣಾಮ ಎದುರಿಸಬೇಕಾದಿತು ಎಂದು ಮರಡಿ ಆಕ್ರೋಶ ಹೊರಹಾಕಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲು ಈಗೀನ ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ, ಮಾಜಿ ಎಂಎಲ್‌ಸಿ ನಾರಾಯಣಸಾ ಭಾಂಡಗೆ, ಎಸ್‌. ಡಿ.ಜೋಗಿನ, ನ್ಯಾಯವಾದಿ ಹಳ್ಳೂರ ಸೇರಿ ಹಲವು ನಾಯಕರು ಶ್ರಮಿಸಿದ್ದಾರೆ. ಅಂತಹವರಿಗೆ ಪಕ್ಷದಲ್ಲಿ ಗೌರವಯುತ ಸಿಕ್ಕಿಲ್ಲ. ಆದರೆ ಇತ್ತೀಚೆಗೆ ಅಧಿ​ಕಾರಕ್ಕಾಗಿ ಪಕ್ಷದಲ್ಲಿ ಕೆಲವರು ಬಂದಿದ್ದರಿಂದ ಪಕ್ಷದ ಹಿರಿಯರಿಗೆ ಗೌರವ ಇಲ್ಲದಂತಾಗಿದೆ ಎಂದು ಹೇಳಿದರು.

10 ಸಾವಿರ ಮತ ಪಡೆಯುವ ಯೋಗ್ಯತೆ ಶಾಸಕರಿಗಿಲ್ಲ:

ಬಿಜೆಪಿಯವರು ಮೋದಿ ಅವರ ಹೆಸರನ್ನು ಹೇಳಿ ಮತವನ್ನು ತೆಗೆದುಕೊಳ್ಳುತ್ತಿದ್ದೀರಿ. ಮೋದಿ ಹೆಸರು ಬಿಟ್ಟು 10 ಸಾವಿರ ಮತಗಳನ್ನು ಪಡೆಯುವ ಯೋಗ್ಯತೆ ಈಗಿನ ಶಾಸಕರಿಗೆ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಪ್ರವೀಣ ಬಾಯ್‌ ತೊಗಡಿಯಾ ಅವರನ್ನು ಹೊರಗೆ ಹಾಕಿದ್ದೀರಿ. ರಾಜ್ಯ ಮಟ್ಟದಲ್ಲಿ ಪ್ರಮೋದ ಮುತಾಲಿಕ ಅವರನ್ನು ಹೊರ ಹಾಕುತ್ತೀರಿ. ವೀರಣ್ಣ ಚರಂತಿಮಠ ಶಾಸಕರಾದರೇ ಮುಸ್ಲಿಮರಿಗೆ .100 ಕೋಟಿ ನೀಡುತ್ತೇವೆ ಎನ್ನುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

click me!