Karnataka Politics: ದಳದಿಂದ ಹೊರ ಹೋಗುತ್ತಿರುವ 101ನೇ ವ್ಯಕ್ತಿ ಹೊರಟ್ಟಿ: ಎಚ್‌ಡಿಕೆ

By Girish Goudar  |  First Published Apr 5, 2022, 8:18 AM IST

*  ಬೊಮ್ಮಾಯಿ, ಸಿದ್ದು ಎಲ್ಲರೂ ಇಲ್ಲಿಂದ ಹೋದವರೇ
*  ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಲಿದೆ
*  ಹೊರಟ್ಟಿ ಹೋದರೆ ಇನ್ನೊಬ್ಬರು ಹೊರಟ್ಟಿ ಬರುತ್ತಾರೆ 
 


ಬೆಂಗಳೂರು(ಏ.05):  ಜನತಾದಳದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಸೇರಿದಂತೆ ಸುಮಾರು 100 ನಾಯಕರು ಹೋಗಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) 101ನೆಯವರು ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆಯನ್ನು ಗಮನಿಸಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ(BJP) ಹಣದ ಹೊಳೆ ಹರಿಸಲಿದೆ. ನಾನು ಅದನ್ನು ಎದುರಿಸುವುದು ಕಷ್ಟವಾಗಲಿದೆ. ಏನು ಮಾಡಲಿ ಎಂದು ಕೇಳಿದ್ದರು. ಆಗ ನಮ್ಮಿಂದ ನಿಮ್ಮ ಭವಿಷ್ಯ ಮಸುಕಾಗೋದು ಬೇಡ. ನಿಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದೇನೆ ಎಂದರು. ಯಾರೂ ಇಲ್ಲದಿದ್ದರೂ ನಮ್ಮ ಪಕ್ಷ ಉಳಿದಿದೆ. ಹೊರಟ್ಟಿ, ಕೋನರೆಡ್ಡಿ ಇದ್ದಾಗ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ನಮ್ಮ ಪಕ್ಷ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರಿದ್ದಾಗ ಪಕ್ಷ ಏನು ದೊಡ್ಡದಾಗಿ ಬೆಳೆದಿತ್ತಾ? ಹೊರಟ್ಟಿ ಹೋದರೆ ಇನ್ನೊಬ್ಬರು ಹೊರಟ್ಟಿ ಬರುತ್ತಾರೆ ಎಂದು ತಿಳಿಸಿದರು.

Tap to resize

Latest Videos

ನಾನೂ ಕೇಸರಿ ಶಾಲು ಹಾಕಿ ನಿಮ್ಮ ಜೊತೆ ಬರ್ತೀನಿ: ಕುಮಾರಸ್ವಾಮಿ

ನಮ್ಮ ಪಕ್ಷಕ್ಕೆ ಬೇರೆ ಪಕ್ಷಗಳಿಂದಲೂ ಬರುವವರು ಇದ್ದಾರೆ. ಸಿ.ಎಂ.ಇಬ್ರಾಹಿಂ(CM Ibrahim) ಅಷ್ಟೇ ಏಕೆ, ಇನ್ನೂ ಹಲವರು ಬರುವವರಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಕೂಡ ಬರುವವರು ಇದ್ದಾರೆ. 35-40ಕ್ಕೆ ಮಾತ್ರ ಸೀಮಿತವಾಗುವ ಪಕ್ಷವಲ್ಲ, ನಮ್ಮ ಗುರಿ 123 ಕ್ಷೇತ್ರ. ಅದಕ್ಕೆ ನಮ್ಮದೇ ಆದ ರೋಡ್‌ಮ್ಯಾಪ್‌ ಸಿದ್ಧ ಮಾಡಿದ್ದೇವೆ ಎಂದರು.

ಮಣ್ಣಿನ ಮಗ ಎಚ್‌ಡಿಕೆ ಒಮ್ಮೆಯಾದರೂ ಕೃಷಿ ಸಚಿವರಾಗಿದ್ದಾರಾ? ಅಶ್ವಥ್ ನಾರಾಯಣ ಪ್ರಶ್ನೆ

ಬೆಂಗಳೂರು: ಸಚಿವ ಡಾ.‌ಅಶ್ವತ್ ನಾರಾಯಣ್ ಮಾಜಿ ಸಿಎಂ ಎಚ್ ಡಿ‌ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ‌ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದ ಕುಮಾರಸ್ವಾಮಿಗೆ ಇಂದು(ಸೋಮವಾರ) ಪತ್ರಿಕಾಗೋಷ್ಠಿ ಮಾಡಿ ಅಶ್ವತ್ಥ್ ನಾರಾಯಣ ಅವರು ಎಲ್ಲಾ ಆರೋಪಕ್ಕೂ ಎಳೆ ಎಳೆಯಾಗಿ ಉತ್ತರ ನೀಡಿದರು.

Karnataka Politics: ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಇನ್ನಷ್ಟು ಕ್ಷೀಣ

ಮಾತೆತ್ತಿದ್ರೆ ತಾವು ಮಣ್ಣಿನ ಮಕ್ಕಳು ಅಂತ ಕುಮಾರಸ್ವಾಮಿ ಹೇಳಿಕೊಳ್ತಾರೆ. ಆದರೆ ಇವರು ಒಮ್ಮೆಯಾದರೂ ಕೃಷಿ ಸಚಿವರಾಗಿದ್ದಾರಾ ಎಂದು ವ್ಯಂಗ್ಯ ಮಾಡಿದ್ರು.‌ ಇವರು ಅಧಿಕಾರಕ್ಕೆ ಬಂದಾಗ ಪ್ರತಿ ಬಾರಿ Pwd ಖಾತೆಯೆ ಬೇಕು. ರೈತರ ಮೇಲೆ ಪ್ರೀತಿ ಇರೋರು ಒಮ್ಮೆಯಾದರೂ ಕೃಷಿ ಸಚಿವ ಆಗಿದ್ದಾರಾ ಎನ್ನುವ ಮೂಲಕ ಕುಮಾರಸ್ವಾಮಿ ಕುಟುಂಬದವರು ಸರ್ಕಾರ ಬಂದಾಗಲೆಲ್ಲಾ ದೊಡ್ಡ ದೊಡ್ಡ ಖಾತೆಯನ್ನೇ ಬಯಸುತ್ತಾರೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ ಡಿ ರೇವಣ್ಣ Pwd ಖಾತೆ ಪಡೆದಿದ್ದ ವಿಚಾರವನ್ನು ಪರೋಕ್ಷವಾಗಿ ಟೀಕಿಸಿದ್ರು.‌ ಅಂದರೆ ಇವರು ಹೇಳಿಕೆಗೆ ಮಾತ್ರ ರೈತರ ಬಗ್ಗೆ ಮಾತಾಡ್ತಾರೆ ಆದ್ರೆ ಕೃಷಿ ಖಾತೆ ಪಡೆಯೋಕೆ ಇವರಿಗೆ ಆಸಕ್ತಿ ಇಲ್ಲ ಎಂದು ಕುಟುಕುವ ಪ್ರಯತ್ನ ಮಾಡಿದ್ರು.

ಕುಮಾರಸ್ವಾಮಿ ರಿವರ್ಸ್ ಗೇರ್' ನಲ್ಲಿ ಓಡಾಡ್ತಿದ್ದಾರೆ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರ ಧರ್ಮ ರಾಜಕೀಯ ಮಾಡ್ತಿದೆ ಎಂದು ವಾಗ್ದಾಳಿ ಮಾಡಿದ್ರು. ಇದೇ ವೇಳೆ ರೈತರು ಬೆಳೆದ ಬೆಳೆ , ರೇಷ್ಮೆ ಮಾವು ಖರೀದಿ ಮಾಡೋದು ಮುಸ್ಲಿಂರು ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ್ ಅಂದು ರಾಮನಗರ ಮಾರ್ಕೆಟ್ ನಲ್ಲಿ ಗಲಾಟೆ ಆದಾಗ ಕುಮಾರಸ್ವಾಮಿ ಅವರ ನಡೆ ಬೇರೆ ರೀತಿ ಇತ್ತು.‌ ಆದ್ರೆ ಇಂದು ಏಕಾಏಕಿ ರಿವರ್ಸ್ ಗ್ಯಾರ್ ನಲ್ಲಿ ಮಾತಾಡ್ತಾ ಇದ್ದಾರೆ. ರಾಮನಗರದ ಮಾರ್ಕೆಟ್ ನಲ್ಲಿ ಕುಮಾರಸ್ವಾಮಿ ಅಂದು ಗಲಾಟೆ ಮಾಡಿದ್ರು.ರೈತರಿಗೆ ಅನ್ಯಾಯ ಆಗಿತ್ತು ಅಲ್ಲಿ ನಡೆದ ಘಟನೆಯ ವಿಡಿಯೊ ನೋಡಿ, ಹೊಟ್ಟೆ ಉರಿದು ಹೋಗಿತ್ತು. ಆದರೆ  ಈಗ ರಿವರ್ಸ್ ಗೇರ್ ನಲ್ಲಿ ಮಾತಾಡ್ತಾರೆ. ಒಂದು ದಿನ ಅವರ ಪರ,ಇನ್ನೊಂದು ದಿನ ಇನ್ನೊಬ್ಬರ ಪರ. ದಿನಕ್ಕೆ ಒಂದೊಂದು ಮಾತಾಡ್ತಾರಿ ಎಂದು ಕುಮಾರಸ್ವಾಮಿಗೆ ಅಶ್ವಥ್ ನಾರಾಯಣ್ ಪ್ರಶ್ನೆ ಮಾಡಿದ್ರು. ನೀವು ರೈತರ ಪರ ಮಾತಾಡ್ತಿರಿ, ಆದ್ರೆ ರೈತರ ಬೆಳೆಗೆ ಮೌಲ್ಯವರ್ಧನ ಮಾಡಿದ್ರಾ ಎಂದು ಸವಾಲು ಹಾಕಿದ್ರು...
 

click me!