ಸಂಸತ್‌ನಲ್ಲಿ ವಿಪಕ್ಷಗಳ ಗಲಭೆ : ಎಚ್‌ಡಿಡಿ ಅಸಮಾಧಾನ

By Suvarna NewsFirst Published Aug 22, 2021, 2:36 PM IST
Highlights
  • ಸಂಸತ್ ನಲ್ಲಿ ನನಗೆ ಮಾತನಾಡಲು ಸಿಗಬಹುದು ಎಂದು ಕೊನೆ ತನಕ ಕಾದೆ.
  • ದುರಂತ ಎಂದರೆ  ವಿರೋಧಿ ಪಕ್ಷಗಳ ಗುಂಪು  ಸಭೆ ನಡೆಯೋಕೆ ಬಿಡಲಿಲ್ಲ
  • ವಿಪಕ್ಷಗಲ ಗಲಭೆ ಬಗ್ಗೆ ಎಚ್ ಡಿ ದೇವೆಗೌಡ ಅಸಮಾಧಾನ

ಬೆಂಗಳೂರು (ಆ.22): ಸಂಸತ್ ನಲ್ಲಿ ನನಗೆ ಮಾತನಾಡಲು ಸಿಗಬಹುದು ಎಂದು ಕೊನೆ ತನಕ ಕಾದೆ. ದುರಂತ ಎಂದರೆ  ವಿರೋಧಿ ಪಕ್ಷಗಳ ಗುಂಪು  ಸಭೆ ನಡೆಯೋಕೆ ಬಿಡಲಿಲ್ಲ ಎಂದು ಮಾಜಿ ಪ್ರದಾನಿ ಎಚ್ ಡಿ ದೇವೆಗೌಡರು ಹೇಳಿದರು. 

ಬೆಂಗಳೂರಿನ ಜೆಪಿ ಭವನದಲ್ಲಿಂದು ಮಾತನಾಡಿದ ಮಾಜಿ ಪಿಎಂ ಎಚ್ ಡಿಡಿ ವಿಪಕ್ಷಗಳ ಗಲಾಟೆಯಿಂದ ಮಾತನಾಡಲು ಸಾಧ್ಯವಾಗಲೆ ಇಲ್ಲ. ಎಷ್ಟೇ ಗಲಾಟೆ ಮಾಡಿದರು ಆಡಳಿತ ಪಕ್ಷ ಬಿಲ್ ಮಾಡಿಕೊಳ್ಳುತ್ತಲೇ ಹೋದರು. ಸಂವಿಧಾನ ತಿದ್ದುಪಡಿ ಬಿಲ್ ಮಾತ್ರ ಮೂರು ಗಂಟೆ ತಡ ಮಾಡಿದರು. ಅದರ ಚರ್ಚೆಯಲ್ಲಿ ಭಾಗವಹಿಸಿದ್ದು ಬಿಟ್ಟರೆ ಬೇರೆ ಯಾವುದು ಮಾತಾಡಲು ಸಿಗಲಿಲ್ಲ ಎಂದರು. 

ದೇವೇಗೌಡರ ಪೋಟೋ ತೆರವು.. ಬಿಜೆಪಿ-ಜೆಡಿಎಸ್‌ ಸದಸ್ಯರ ಕಿತ್ತಾಟ!

ಹಳಿ ತಪ್ಪಿದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೇಬಲ್ ಮೇಲೆ ನಿಂತು ಪ್ರದರ್ಶನ ಮಾಡುವಂತಹ ಸ್ಥಿತಿ ಇದೆ ಎಂದರು.

ಕೆಲವರನ್ನು ಹೊರಗೆ ಹಾಕಿದರು. ಇದೆಲ್ಲಾ ಒಳ್ಳೆಯ ಲಕ್ಷಣಗಳು ಅಲ್ಲ. ಲೋಕಸಭಾ ರಾಜ್ಯಸಭಾದಲ್ಲಿ ವಿಚಾರಗಳ ಮೇಲೆ ಚರ್ಚೆ ಮಾಡಬೇಕು. ಕಾಂಗ್ರೆಸ್ ಬಿಜೆಪಿ ಇಬ್ಬರಿಗೂ ಚರ್ಚೆಗೆ ಅವಕಾಶ ಇದೆ. ಸರಿ ತಪ್ಪು ಜನ ತೀರ್ಮಾನ ಮಾಡಲಿ. ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಎಂದು ದೇವೆಗೌಡರು ಹೇಳಿದರು. 

ಒಂದು ಬಿಲ್‌ಗೆ 3 ಗಂಟೆ, ವಿಪಕ್ಷಗ ಗಲಾಟೆಯಿಂದ ಕಾರ್ಯಕಲಾಪ ನಡೆಯದೇ ಟೈಮ್  ವ್ಯರ್ಥವಾಯಿತು. ವಿರೋಧ ಪಕ್ಷದ ಕೆಲ ಸ್ನೇಹಿತರನ್ನು ಕರೆದು ಮಾತನಾಡಿದೆ. ಬೆಲೆ ಏರಿಕೆ, ರೈತರ ಸಮಸ್ಯೆ, ಹೀಗೆ ಹಲವಾರು ಭೀಕರ ಸಮಸ್ಯೆಗಳು ಇವೆ. ಆದರೆ ನನ್ನ ದೃಷ್ಟಿಯಲ್ಲಿ ಕಾಲವೆಲ್ಲ ವ್ಯರ್ಥವಾಯ್ತು. ಒಂದಿಷ್ಟು ಜನ ಡಾನ್ಸ್ ಮಾಡಲು ಶುರು ಮಾಡಿದರು. ಇತಿಹಾಸದಲ್ಲಿ ಅಂತಹ ಘಟನೆ ನಾನು ನೋಡಲಿಲ್ಲ ಎಂದರು.

ಬೇರೆ ಬೇರೆ ರಾಷ್ಟ್ರದಲ್ಲಿಯೂ ಏನಾಯ್ತು ಎಂದು ಗಮನದಲ್ಲಿದೆ. ಆದರೆ ಟೇಬಲ್ ಮೇಲೆ ನಿಂತು ಡಾನ್ಸ್ ಮಾಡೋದು ನೋಡಲಿಲ್ಲ.  ಈಗಾಗಿರುವುದನ್ನು ಸರಿಪಡಿಸಿ, ಹಳಿ ತಪ್ಪಿದ ಸ್ಥಿತಿಯನ್ನು ಸರಿ ಮಾಡಲು ಇವರೆಲ್ಲಾ ಸೇರಿಯೇ ಮಾಡಬೇಕು. ಇಂಥಹ ಘಟನೆಗಳು ಒಳ್ಳೆಯ ಲಕ್ಷಣ ಅಲ್ಲ ಎಂದರು.  

ಕೃಷ್ಣ ವಿಚಾರವಾಗಿ ಸಿಎಂ ನಿನ್ನೆ ಹೇಳಿದ್ದಾರೆ. ಶರದ್ ಪವಾರ್ ಹಾಗೂ ನಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡುತ್ತೇನೆ. ಇದನ್ನು ಸರಿ ಪಡಿಸಿಕೊಳ್ಳುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಮೂರು ರಾಜ್ಯಗಳು ಅರ್ಜಿ ಹಾಕಿವೆ. ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಸಂತೋಷ. ಆಲಮಟ್ಟಿ ವಿಚಾರ ಇಂದಿನದಲ್ಲ.  ನಮ್ಮ ಪಕ್ಷ ಅಲ್ಲಿಂದ ಪಾದಯಾತ್ರೆ ಮಾಡುವ ತೀರ್ಮಾನಕ್ಕೆ ಬಂದಿದೆ. ಹಾಗೆ ಮೇಕೆದಾಟು ವಿಚಾರವಾಗಿಯೂ ಇನ್ನೊಂದು ತಂಡ ಇಲ್ಲಿಂದ ಬರಬೇಕು ಎಂದು ತೀರ್ಮಾನ ಆಗಿದೆ.  ಮೂರು ಯೋಜನೆಗಳು ಹೀಗೆ ಆಗಿದೆ. ನಮ್ಮ ಹಣೆಬರಹ ಇದು ಎಂದು ಅವರು ಹೇಳಿದರು. 

ಮಹದಾಯದು ನಮ್ಮಲ್ಲಿಯೇ ಶುರುವಾಗಿ ಮಹಾರಾಷ್ಟ್ರ ಸ್ವಲ್ಪ ಭಾಗ ಇದೆ. ಕುಮಾರಸ್ವಾಮಿಯವರು ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ. ಈ ಮೂರು ಯೋಜನೆಗಳ ಕುರಿತು ಸುಮ್ಮನೆ ಕೂತರೆ ಆಗಲ್ಲ ಎಂದು ತೀರ್ಮಾನ ತೆಗದುಕೊಂಡರು. ಹಾಗಾಗಿ ನಾನು ಸಾಂಕೇತಿಕ ವಾಗಿ ಒಂದು ದಿನ ಹೋಗುತ್ತೇನೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ. 

ಪ್ರಾದೇಶಿಕ ಪಕ್ಷವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಕಾಂಗ್ರೆಸ್ ಬಿಜೆಪಿಗೆ ಸಮಸ್ಯೆ ಇದೆ. ದೆಹಲಿಯಲ್ಲಿ ಯಾರು ಆಳುತ್ತಾರೋ ಅವರು ಈ ರೀತಿ ಹೋರಾಟ ಮಾಡಲು ಸಾಧ್ಯವಿಲ್ಲ. 10 ವರ್ಷ ಮನಮೋಹನ್ ಸಿಂಗ್ ಇದ್ದರೂ ಏನಾಯಿತು. ಹಣ ಒದಗಿಸಲು ನಾನು ಏನು ನಿರ್ಣಯ ಮಾಡಿದೆ ಅದು ಇವತ್ತಿಗೂ ಮುಂದುವರೆದಿದೆ. ಯಾರೂ ಇದನ್ನು ತೆಗೆಯಲಿಲ್ಲ ಆದರೆ ಸ್ವಲ್ಪ ಕಡಿಮೆ ಮಾಡಿದ್ದಾರೆ ಎಂದರು. 

ಮೇಕೆದಾಟು ವಿಚಾರದಲ್ಲಿ ಕುಡಿಯುವ ನೀರನ್ನು ಬಳಸಿ ಉಳಿದ ನೀರು ಬಿಡುತ್ತೇವೆ ಎಂದರೆ ಅವರು ಬಿಡುವುದಿಲ್ಲ. ನಾವು ಪಾದಯಾತ್ರೆ ಶುರು ಮಾಡಿದಾಗ ಆ ಭಾಗದ ಜನರಿಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ. 

ನಾನು ಯಾರ ಬಗ್ಗೆಯೂ ಹೇಳಲ್ಲ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ.  ಮುಂದಿನ ಚುನಾವಣೆಯಲ್ಲಿ ಹೆಸರಿಗೂ ಇರೋದಿಲ್ಲ ಅಂತ ಹೇಳುತ್ತಾರೆ. ಇದನ್ನು ಯಾರು ಹೇಳಿದರು ಎನ್ನೋದು ಬೇಡ. ಹೊರಾಟ ಮಾಡಿ ಅಸ್ತಿತ್ವ ಉಳಿಸಿಕೊಂಡೇ ಅಧಿಕಾರಕ್ಕೆ ಬರುವುದು ಅಂತ ಹೆಚ್ ಡಿಕೆ ತೀರ್ಮಾನ ಮಾಡಿದ್ದಾರೆ ಎಂದರು.  

click me!