ನಂಗೊಂದು ಮನೆ ಕೊಡಿ.. 7ನೇ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ

By Suvarna NewsFirst Published Aug 21, 2021, 11:26 PM IST
Highlights

* ಸರ್ಕಾರಿ ನಿವಾಸಕ್ಕೆ ಬೇಡಿಕೆ ಇಟ್ಟ ಸಭಾಪತಿ ಬಸವರಾಜ ಹೊರಟ್ಟಿ
 *7ನೇ ಪತ್ರದ ಮೂಲಕ ಬಸವರಾಜ ಹೊರಟ್ಟಿ ಸಿಎಂ ಬೊಮ್ಮಾಯಿಗೆ ಮನವಿ
* ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ 6 ಬಾರಿ ಪತ್ರ ಬರೆದಿದ್ದ ಹೊರಟ್ಟಿ

ಬೆಂಗಳೂರು, (ಆ.21): ಸರ್ಕಾರಿ ಮನೆಗಾಗಿ ಸಭಾಪತಿ ಬಸವರಾಜ ಹೊರಟ್ಟಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಇದುವರೆಗೂ ಅವರ ಬೇಡಿಕೆ ಈಡೇರಿಲ್ಲ. ಈಗ ಹೊಸ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿಕೊಂಡಿದ್ದಾರೆ.

ಹೌದು...ಸಭಾಪತಿಯ ಅಧಿಕೃತ ನಿವಾಸದ ಕುರಿತಂತೆ ಬಸವರಾಜ ಹೊರಟ್ಟಿ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಕುಮಾರ ಕೃಪಾ ಬೆಂಗಳೂರು ನಗರ ದಕ್ಷಿಣ ಲೋಕೋಪಯೋಗಿ ವಸತಿ, ಗೃಹ ಸಂಖ್ಯೆ 3ʼ ಅನ್ನು ತಮಗೆ ಹಂಚಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

30 ಅಧಿಕಾರಿಗಳ ಎತ್ತಂಗಡಿ: ಚುರುಕು ಮುಟ್ಟಿಸಿದ ಸಭಾಪತಿ

ಈಗಾಗಲೇ ಈ ಹಿಂದೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ 6 ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ 7ನೇ ಪತ್ರವನ್ನು ಹೊಸ ಸಿಎಂ ಬೊಮ್ಮಾಯಿ ಅವರಿಗೆ ಬರೆದಿದ್ದಾರೆ.

ವಿಧಾನ ಪರಿಷತ್‌ ಸಭಾಪತಿಯವರಿಗೆ ಸರ್ಕಾರದ ಅಧಿಕೃತ ನಿವಾಸವನ್ನು ನೀಡದಿರುವುದು ಬಸವರಾಜ್‌ ಹೊರಟ್ಟಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. 

 ಆ ನಿವಾಸವನ್ನು ಈ ಹಿಂದೆ ಬಿಎಸ್‌ವೈ ಸರ್ಕಾರದಲ್ಲಿ ಯೋಗೇಶ್ವರ್ ಅವರಿಗೆ ನೀಡಲಾಗಿತ್ತು. ಹೊರಟ್ಟಿ ಪತ್ರ ಬರೆದು ಮನವಿ ಮಾಡಿದಾಗ ಬಿಟ್ಟುಕೊಡುವಂತೆ ಬಿಎಸ್‌ವೈ ಯೋಗೇಶ್ವರ್‌ಗೆ ಸೂಚಿಸಿದ್ದರು. ಆದ್ರೆ,  ಸಿ ಪಿ ಯೋಗೇಶ್ವರ್ ಆಗ ಖಾಲಿ ಮಾಡಿರಲಿಲ್ಲ. ಈಗ ಯೋಗೇಶ್ವರ್ ಸಚಿವ ಅಲ್ಲ, ಆದ್ರೂ ಇನ್ನೂ ಸರ್ಕಾರಿ ಮನೆ ಖಾಲಿ ಮಾಡಿಲ್ಲ. ಈಗಲಾದರೂ ಸಭಾಪತಿಗಳಿಗೆ ನೀಡುತ್ತಿದ್ದ ಮನೆಯನ್ನ ನೀಡುವಂತೆ ಹೊರಟ್ಟಿ ಮತ್ತೊಮ್ಮೆ ಪತ್ರ ಬರೆದಿದ್ದಾರೆ. 

ಕುಮಾರಪಾರ್ಕ್‌ನ ಗಾಂಧಿ ಭವನ ಹಿಂಭಾಗದಲ್ಲಿರುವ ಸರ್ಕಾರಿ  ಮನೆಯನ್ನ  ಈ ಹಿಂದೆ ಸಭಾಪತಿಗಳಿಗೆ ನೀಡಲಾಗಿತ್ತು. ಈಗ ಹೊರಟ್ಟಿ ಸಹ ಆ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ.
 

click me!