ಮಾಗಡಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಭಾಷಣದ ವೇಳೆ ಕಣ್ಣೀರು ಹಾಕಿದ್ದಾರೆ. ಕುಮಾರಸ್ವಾಮಿ ಸಿಎಂ ಆಗೋದನ್ನು ಯಾರ ಕೈಯಲ್ಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಮನಗರ (ಮೇ.5): ಮಾಗಡಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಭಾಷಣದ ವೇಳೆ ಕಣ್ಣೀರು ಹಾಕಿದ್ದಾರೆ. ನಾನು ಎಲ್ಲಾ ಕಡೆ ಸುತ್ತಾಡಿ ಬಂದಾಗ ಈ ಗ್ರಾಮದ ಹೆಣ್ಣು ಮಗಳು ನನಗೆ ಊಟ ಹಾಕಿದ್ರು. ಈ ಮಣ್ಣಿನ ಅನ್ನದ ಖುಣ ನನ್ನ ಮೇಲಿದೆ. ನಿಮ್ಮ ಮುಂದೆ ಕೈಚಾಚಲಿಕ್ಕೆ ಬಂದಿದ್ದೇನೆ. ನಾನು ಯಾರಿಗೋಸ್ಕರ ಬಂದಿದ್ದೇನೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಮೋಸ, ವಂಚನೆ ಮಾಡಿ ಸೋಲಿಸಿದ್ರು. ಇವತ್ತು ರಾಮನಗರದ ಜನತೆ ನಾವಿದ್ದೇವೆ ಅನ್ನೋ ವಿಶ್ವಾಸ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಿಸುತ್ತೇವೆ ಎಂಬ ಧೈರ್ಯ ನೀಡ್ತಿದ್ದಾರೆ. ಮುದುಕ ಬಂದು ಮತ ಕೇಳ್ತಿದ್ದಾನೆ ಅಂತ ವ್ಯಂಗ್ಯ ಮಾಡಿದರು ಎಂದರು.
ಬಿಜೆಪಿ ಅವ್ರು ಹಿಂದಿನ ಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದಾರೆ. ಕಾಂಗ್ರೆಸ್ ಅವರ ಕೈಯಲ್ಲೂ ಅಭಿವೃದ್ಧಿ ಮಾಡಲು ಆಗಲಿಲ್ಲ. ಕುಮಾರಸ್ವಾಮಿ ಇವತ್ತು ಇಡೀ ರಾಜ್ಯ ಪಂಚರತ್ನ ರಥಯಾತ್ರೆ ಮಾಡಿ ಸುತ್ತುತ್ತಿದ್ದಾರೆ. ಸ್ತ್ರೀ ಶಕ್ತಿ ಸಾಲಮನ್ನಾ ಮಾಡೋ ಏಕೈಕ ವ್ಯಕ್ತಿ ಕುಮಾರಸ್ವಾಮಿ. ನೀವು ನಮ್ಮನ್ನ ಉಳಿಸಿದ್ರಿ, ಪ್ರಧಾನಿ ಮಂತ್ರಿ ಮಾಡಿದ್ರಿ. ಮಂಡ್ಯದಲ್ಲಿ ನಿಖಿಲ್ ಸೋಲಿಸಿ ನೋವು ಕೊಟ್ಟರು. ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ದಯಮಾಡಿ ನಿಖಿಲ್ ನನ್ನು ಗೆಲ್ಲಿಸಿ. ಈ 90ನೇ ವಯಸ್ಸಿನಲ್ಲಿ ನಿಮ್ಮನ್ನು ಕೈಚಾಚಿ ಕೇಳಿಕೊಳ್ಳುತ್ತೇನೆ. ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ರಾಮನಗರ ಜನ ಸಭ್ಯಸ್ಥರು. ನನ್ನನ್ನು ಹರಸಿ, ಗೆಲ್ಲಸಿ ನನ್ನನ್ನು ಪ್ರಧಾನಿ ಮಾಡಿದ್ರಿ. ಹಾಗೆಯೇ ನಿಖಿಲ್ ಅವರನ್ನೂ ಗೆಲ್ಲಿಸಿ ಎಂದು ನಿಖಿಲ್ ಅವರ ಕೈ ಎತ್ತಿ ಗೆಲ್ಲಿಸುವಂತೆ ದೇವೇಗೌಡ್ರು ಮನವಿ ಮಾಡಿದರು.
ನಿಖಿಲ್ ಮುಂದಿನ ದಿನಗಳಲ್ಲಿ ಶ್ರೇಷ್ಠ ನಾಯಕ ಆಗ್ತಾನೆ. ನೀವೆಲ್ಲರೂ ಕೈಜೋಡಿಸಿ ಅವರನ್ನ ಗೆಲ್ಲಿಸಿ. ಕ್ಷಮಾಯಾಚನೆ ಮಾಡುತ್ತೇನೆ. ನೀವು ನನ್ನನ್ನ ಗೆಲ್ಲಿಸಿದ ಪುಣ್ಯಾತ್ಮರು. ಕುಮಾರಸ್ವಾಮಿ ಸಿಎಂ ಆಗೋದನ್ನು ಯಾರ ಕೈಯಲ್ಲೂ ತಪ್ಪಿಸಲು ಸಾಧ್ಯವಿಲ್ಲ. ಅವರಿಗೆ ನಿಮ್ಮ ಆಶೀರ್ವಾದ ಇದೆ ಎಂದು ಸುಗ್ಗನಹಳ್ಳಿಯಲ್ಲಿ ಹೆಚ್ಡಿಡಿ ರೋಷಾವೇಷದ ಭಾಷಣದ ಜೊತೆಗೆ ಮೊಮ್ಮಗನ ಪರ ಭಾವನಾತ್ಮಕ ಪ್ರಚಾರ ಮಾಡಿದ್ದಾರೆ.
ಪ್ರಧಾನಿ ಮೋದಿ ರೋಡ್ ಶೋ ರಥದ ವೇಗದಲ್ಲಿ ಬದಲಾವಣೆ! ಯಾವೆಲ್ಲ ರಸ್ತೆಗಳು ಬಂದ್?
ಮೊಮ್ಮಗನ ಗೆಲ್ಲಿಸಲು ಮಾಜಿ ಪ್ರಧಾನಿ ಹೆಚ್ಡಿಡಿ ಪಣ ತೊಟ್ಟಿದ್ದು, ರಾಮನಗರದ ಸುಗ್ಗನಹಳ್ಳಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಕುಳಿತು ಹೆಚ್ಡಿಡಿ ರೋಡ್ ಶೋ ನಡೆಸಿದ್ದಾರೆ. ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೂಡ ಜತೆಯಲ್ಲಿದ್ದು ಸಾಥ್ ನೀಡಿದ್ದು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿ ಹರ್ಷೋದ್ಗಾರ ಕೂಗಿದರು.
ಕಾಂಗ್ರೆಸ್ ನಾಯಕರು ಬಿಜೆಪಿಗೆ ಬುಕ್ ಆಗಿರುವುದನ್ನು ಸಾಬೀತು ಪಡಿಸುತ್ತೇವೆ: ಜೆಡಿಎಸ್ ಅಭ್ಯರ್ಥಿಯ ಸವಾಲ್!
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.