ಕಾಂಗ್ರೆಸಿನ ಯಾವೆಲ್ಲಾ ನಾಯಕರು ಎಷ್ಟೆಷ್ಟು ದುಡ್ಡು ಪಡೆದಿದ್ದಾರೆಂದು ತೋರಿಸ್ತೇನೆ. ಬಿಜೆಪಿಗೆ ಬುಕ್ ಆಗಿರುವುದನ್ನು ಸಾಬೀತು ಪಡಿಸುತ್ತೇವೆ ಎಂದು ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಸವಾಲು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.5): ಕಾಂಗ್ರೆಸ್ ನ ಶೇ.90 ರಷ್ಟು ನಾಯಕರು ಬಿಜೆಪಿಯೊಂದಿಗೆ ಬುಕ್ ಆಗಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿಗರೇ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲಿದ್ದಾರೆ ಎನ್ನುವ ಜನವಲಯದ ಮಾತಿಗೆ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಎನ್ ಮುತ್ತಪ್ಪ ಗಂಭೀರ ಆರೋಪ ಮಾಡಿದ್ದಾರೆ. ಯಾರೆಲ್ಲ ಬುಕ್ ಆಗಿದ್ದಾರೆ ಎನ್ನುವುದನ್ನು ಹೆಸರು ಸಹಿತ ಸಾಬೀತು ಮಾಡ್ತೇನೆ. ಯಾರೆಲ್ಲ ಎಲ್ಲೆಲ್ಲಿ ಎಷ್ಟು ದುಡ್ಡು ತಗೊಂಡಿದ್ದಾರೆ ಫ್ರೂವ್ ಮಾಡ್ತೇನೆ. ಕಾಂಗ್ರೆಸ್ ನವರಿಗೆ ತಾಕತ್ತು ಇದೆಯಾ ಎಂದು ಮುತ್ತಪ್ಪ ಸವಾಲು ಹಾಕಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ, ಮುತ್ತಪ್ಪ ಬಿಜೆಪಿಗೆ ಬುಕ್ ಆಗಿದ್ದಾನೆ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಿದ್ದಾರೆ. ಆದರೆ ನಿಜವಾಗಿಯೂ ಬುಕ್ ಆಗಿರುವುದು ಕಾಂಗ್ರೆಸ್ನವರೇ ವಿನಃ ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನಾನು ಆಸ್ತಿ ಘೋಷಿಸಿರುವುದು 132 ಕೋಟಿ ರೂಪಾಯಿ. ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಘೋಷಿಸಿರುವುದು ನಾಲ್ಕುವರೆ ಕೋಟಿ. ಹಾಗೆಯೇ ಬಿಜೆಪಿ ಅಭ್ಯರ್ಥಿಯಾಗಿರುವ ಅಪ್ಪಚ್ಚು ರಂಜನ್ ಅವರು ಘೋಷಿಸಿರುವುದು ಆರುವರೆ ಕೋಟಿ ರೂಪಾಯಿ. ಸ್ಥಿತಿ ಹೀಗಿರುವಾಗ ಯಾರನ್ನು ಯಾರು ಕೊಂಡುಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಮುತ್ತಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆಯೂ ಜಿವಿಜಯ ಅವರು ಜೆಡಿಎಸ್ ನಿಂದ ಸ್ಪರ್ಧಿಸಿದ್ದಾಗ ಅವರ ವಿರುದ್ಧವೂ ಇದೇ ರೀತಿ ಆರೋಪ ಮಾಡಿ ಅವರನ್ನು ಸೋಲಿಸಿದ್ದಾರೆ. ಹೀಗೆ ಸೋಲಿಸಿದವರು ಬೇರೆ ಯಾರೂ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿರುವ ಬಿಜೆಪಿ ಬೆಂಬಲಿಗರು ಅಪಪ್ರಚಾರ ಮಾಡಿ ಸೋಲಿಸಿದ್ದಾರೆ. ಈಗಲೂ ಕೂಡ ಕಾಂಗ್ರೆಸ್ ನಲ್ಲಿರುವ ಬಿಜೆಪಿ ಬೆಂಬಲಿಗರೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಇದ್ದು ಕೊಂಡೇ ಕೆಲವು ಮುಖಂಡರು ನಿನ್ನೆಯಿಂದ ಎಸ್ಡಿಪಿಐಗೆ ವೋಟ್ ಹಾಕಿ ಎಂದು ಕೇಳುತ್ತಿದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ನಟ ಶಿವಣ್ಣ ದಂಪತಿ ಪ್ರಚಾರ!
ಇದನ್ನು ಸಾಬೀತು ಪಡಿಸುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲ ಸಾರಾಸಗಟಾಗಿ ಬಿಜೆಪಿಗೆ ಸಪೋರ್ಟ್ ಮಾಡುತ್ತಿರುವ ಕಾಂಗ್ರೆಸ್ ಲೀಡರ್ ಇದ್ದಾರೆ. ಹೀಗಾಗಿ ನಿಜವಾಗಿಯೂ ಬಿಜೆಪಿಗೆ ಯಾರು ಬುಕ್ ಆಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮಡಿಕೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಎನ್ ಮುತ್ತಪ್ಪ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಹೀಗೆ ಆರೋಪ ಮಾಡುವುದಕ್ಕೂ ಬಲವಾದ ಕಾರಣವಿದೆ. ಮುತ್ತಪ್ಪ ಅವರು ಸುಂಟಿಕೊಪ್ಪದಲ್ಲಿ ಪ್ರಚಾರ ಭಾಷಣ ಮಾಡುತ್ತಾ ಶಾಸಕರಾಗಿ, ಸಚಿವರಾಗಿದ್ದ ಎ. ಮಂಜು ಅವರು ಅರಕಲಗೂಡು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹೀಗಿರುವಾಗ ಅವರ ಮಗ ಬಂದು ಕೊಡಗಿನಲ್ಲಿ ಏನು ಅಭಿವೃದ್ಧಿ ಮಾಡುತ್ತಾರೆ. ಇಂತಹ ವ್ಯಕ್ತಿಗೆ ವೋಟ್ ಹಾಕುವುದಕ್ಕೆ ಬದಲಾಗಿ ನಮ್ಮ ಕ್ಷೇತ್ರದ ಶಾಸಕರೇ ಬೆಸ್ಟ್ ಎಂದು ಹೇಳಿದ್ದರು.
Kodagu: ಅಮೆರಿಕದಲ್ಲಿರುವ ಮೂವರು ಮಕ್ಕಳಿಂದ ತಂದೆ ಅಪ್ಪಚ್ಚು ರಂಜನ್ ಪರ ನಿರಂತರ
ಮುತ್ತಪ್ಪ ಅವರ ಇದೇ ಭಾಷಣದ ತುಣುಕು ಇಟ್ಟುಕೊಂಡಿರುವ ಕಾಂಗ್ರೆಸ್ ಮುಖಂಡರು ಜೆಡಿಎಸ್ ಬಿಜೆಪಿಗೆ ಪರವಾಗಿ ಕೆಲಸ ಮಾಡುತ್ತಿದೆ ಎಂದು ಎಲ್ಲೆಡೆ ಪ್ರಚಾರ ಮಾಡುತ್ತಿದ್ದರು. ಹೀಗಾಗಿ ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಮುತ್ತಪ್ಪ ಕಾಂಗ್ರೆಸ್ಗೆ ಸವಾಲು ಹಾಕಿದ್ದಾರೆ. ಬೇಕಾದರೆ ರಾಜಕಾರಣ ಬಿಟ್ಟುಬಿಡುತ್ತೇನೆ, ಆದರೆ ಯಾವುದೇ ಕಾರಣಕ್ಕೂ ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.