ಯತ್ನಾಳರೇ ಧಮ್‌ ಇದ್ರೆ ನನ್ನ ಮೇಲೆ ಗುಂಡು ಹಾಕಿ: ಅಸಾದುದ್ದಿನ್‌ ಒವೈಸಿ ಸವಾಲು

By Kannadaprabha NewsFirst Published May 5, 2023, 10:34 PM IST
Highlights

ವಿಜಯಪುರ ಬಿಜೆಪಿ ಶಾಸಕ ಸಮಾರಂಭದಲ್ಲಿ ಮುಸ್ಲಿಮರನ್ನು ಟಾಯ್‌ ಟಾಯ್‌ ಎಂದು ಗುಂಡು ಹಾರಿಸಬೇಕೆಂದು ಹೇಳಿಕೆಗೆ ನೀಡಿದ್ದಾರೆ. ಟಿಪ್ಪು ಸುಲ್ತಾನರು ಬಂದೂಕಿನ ಗುಂಡು ತಿಂದು ಪ್ರಾಣ ತ್ಯಾಗ ಮಾಡಿದ್ದಾರೆ. ಯತ್ನಾಳರೇ ಧಮ್‌ ಇದ್ರೆ ಟಾಯ್‌ ಟಾಯ್‌ ಅಂತ ನನ್ನ ಮೇಲೆ ಗುಂಡು ಹಾಕಿ ಎಂದು ಸವಾಲು ಹಾಕಿದ ಎಐಎಂಐಎಂ ಪಕ್ಷದ ರಾಷ್ಟ್ರಾಧ್ಯಕ್ಷ, ಸಂಸದ ಅಸಾದುದ್ದಿನ್‌ ಒವೈಸಿ 

ಜಮಖಂಡಿ(ಮೇ.05): ಪ್ರಧಾನಿ ಮೋದಿ ನನಗೆ ಜನರು ಬೈಯುತ್ತಿದ್ದಾರೆಂದು ನೋವು ತೋಡಿಕೊಳ್ಳುತ್ತಿರುವುದನ್ನು ಬಿಡಬೇಕು. ಜನ ಕಷ್ಟಗಳನ್ನು ನಿಮಗೆ ಹೇಳದೆ ಆಕಾಶದಲ್ಲಿರುವ ನಕ್ಷತ್ರಗಳಿಗೆ ಹೇಳಬೇಕೆ ಎಂದು ಎಐಎಂಐಎಂ ಪಕ್ಷದ ರಾಷ್ಟ್ರಾಧ್ಯಕ್ಷ, ಸಂಸದ ಅಸಾದುದ್ದಿನ್‌ ಒವೈಸಿ ಪ್ರಶ್ನಿಸಿದರು.

ಇಲ್ಲಿನ ಕುಂಚನೂರ ರಸ್ತೆ ಮೈದಾನದಲ್ಲಿ ಬುಧವಾರ ರಾತ್ರಿ ಜಮಖಂಡಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಶೀಲಕುಮಾರ ಬೆಳಗಲಿ ಅವರ ಚುನಾವಣೆ ಪ್ರಚಾರದ ಬೃಹತ್‌ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಮೋದಿ ನಾ ಖಾವುಂಗಾ ನಾ ಖಾನೆದುಂಗಾ ಹೇಳಿದರೆ ರಾಜ್ಯದ ಬಿಜೆಪಿ ಸರ್ಕಾರ ಹಮ್‌ ಕಾಯೆಂಗೆ ಕಿಸಿಕೋ ನಾ ದೆಂಗೆ ಎಂಬಂತೆ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದರು.

ಮುಧೋಳ ಕ್ಷೇತ್ರದಲ್ಲಿ ಕಾರಜೋಳ ಭರ್ಜರಿ ಪ್ರಚಾರ: ವಿಜಯೇಂದ್ರ ಸಾಥ್‌

ವಿಜಯಪುರ ಬಿಜೆಪಿ ಶಾಸಕ ಸಮಾರಂಭದಲ್ಲಿ ಮುಸ್ಲಿಮರನ್ನು ಟಾಯ್‌ ಟಾಯ್‌ ಎಂದು ಗುಂಡು ಹಾರಿಸಬೇಕೆಂದು ಹೇಳಿಕೆಗೆ ನೀಡಿದ್ದಾರೆ. ಟಿಪ್ಪು ಸುಲ್ತಾನರು ಬಂದೂಕಿನ ಗುಂಡು ತಿಂದು ಪ್ರಾಣ ತ್ಯಾಗ ಮಾಡಿದ್ದಾರೆ. ಯತ್ನಾಳರೇ ಧಮ್‌ ಇದ್ರೆ ಟಾಯ್‌ ಟಾಯ್‌ ಅಂತ ನನ್ನ ಮೇಲೆ ಗುಂಡು ಹಾಕಿ ಎಂದು ಸವಾಲು ಹಾಕಿದರು.

ನಾನು ಕೂಡಾ ಛತ್ರಪತಿ ಶಿವಾಜಿ ಮಹಾರಾಜರನ್ನು ಗೌರವಿಸುತ್ತೇನೆ. ಮರಾಠಿಗರು ಮುಸ್ಲಿಮರ ವಿರೋಧಿಗಳಲ್ಲ. ಆಗ್ರಾ ಕೋಟೆಯಿಂದ ತಪ್ಪಿಸಿಕೊಂಡು ಹೋದಾಗ ಶಿವಾಜಿ ಹಿಂದೆ ಇದ್ದವರು ಮುಸ್ಲಿಮರು. ಶಿವಾಜಿ ಯುದ್ದ ಸೇನೆ ಮುಖ್ಯಸ್ಥ ಮುಸ್ಲಿಮರು, ಆಡಳಿತ ನಿಯೋಜನೆಯಲ್ಲಿ ಮುಸ್ಲಿಮರು ಪ್ರಮುಖರಾಗಿದ್ದರು ಎಂದು ತಿಳಿಸಿದರು.

ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನ ಎಲ್ಲರಿಗೂ ಒಂದೆ ಆಗಿದೆ. ಹೀಗಿರುವಾಗ ಮುಸ್ಲಿಂ ಮತ್ತು ದಲಿತರನ್ನು ಬಿಜೆಪಿ ಯಾಕೆ ಪರಿಗಣಿಸುವುದಿಲ್ಲ? ಬಿಜೆಪಿ ಬಗ್ಗೆ ಎಷ್ಟುಮಾತನಾಡಿದರೂ ಕಡಿಮೆ. ಕಾಂಗ್ರೆಸ್‌ ಬಗ್ಗೆ ಹೇಳಿದರೆ ಒಂದು ದಿನವೂ ಸಾಲೋದಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರು, ಮುಸ್ಲಿಮರು, ದಲಿತರು ತೊಂದರೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ನೀರಿನ ವ್ಯವಸ್ಥೆ, ಶೌಚಾಲಯ, ಚರಂಡಿ, ಸರ್ಕಾರಿ ಪದವಿ ಕಾಲೇಜು ಇಲ್ಲ, ಉರ್ದು ಪದವಿ ಕಾಲೇಜಗಳಿಲ್ಲದೇ ಸಂಪೂರ್ಣ ಅಭಿವೃದ್ಧಿ ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡದವರಿಗೆ ಏಕೆ ಅಧಿಕಾರ ಕೋಡತ್ತಿರಾ? ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತುಪಡಿಸಿ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ತಮ್ಮ ಮತ ನೀಡಬೇಕು ಎಂದರು.

ಕರ್ನಾಟಕದಿಂದ ಕಾಂಗ್ರೆಸ್‌ ಬ್ಯಾನ್‌ ಆಗಲಿದೆ: ಬಿ.ವೈ. ವಿಜಯೇಂದ್ರ ಟೀಕೆ

ಅಭ್ಯರ್ಥಿ ಸುಶೀಲಕುಮಾರ ಬೆಳಗಲಿ ಮಾತನಾಡಿ, ಎಐಎಂಐಎಂ ಪಕ್ಷದ ರಾಷ್ಟಾ್ರದ್ಯಕ್ಷ ಅಸಾದುದ್ದಿನ ಒವೈಸಿ ಸಮ್ಮುಖದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇನೆ. ನಾನು ಜಾತ್ಯತೀತವಾಗಿ ಗುರ್ತಿಸಿಕೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ನನ್ನ ಜೊತೆಗೆ ಬೆರೆತು ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಪ್ರತಿಯೊಬ್ಬರ ಸಹಾಯ ಸಹಕಾರ ಲಭಿಸುತ್ತಿದೆ ಎಂದರು.

ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫಖಾನ್‌ ಪಠಾಣ, ದಲಿತರ ಮುಖಂಡ ಪ್ರಮೋದ ಹಿರೇಮನಿ, ಜಿಲ್ಲಾಧ್ಯಕ್ಷ ಅಬ್ದುಲ್‌ ಜಮಾದಾರ, ರೈತ ಸಂಘ ಮುಖ್ಯಸ್ಥ ರಾಜು ನದಾಫ, ತಾಪಂ ಮಾಜಿ ಅಧ್ಯಕ್ಷ ಶಾಂತೂ ಖಿದ್ರಾಪೂರ, ಶ್ರೀಕಾಂತ ಗಣಿ, ನಜೀಬ ಆಲಗೂರ, ಹೈದ್ರಾಬಾದ ಮಹತರಂ ಸಾಹೇಬಾ,ಜಾಖರ ಮೈಹಬೂಬ, ಅಕ್ತರ್‌ ಫಾರುಖಾನ, ಸಾಜೂರ ಸಾಬ ಸೇರಿದಂತೆ ಇಬ್ಬರೂ ಸಾಸಕರು,ಏಳು ಜನ ಹೈದರಾಬಾದ್‌ ನಗರ ಪಾಲಿಕೆ ಸದಸ್ಯರು ಇದ್ದರು.

click me!