ಟಿ ನರಸೀಪುರದಲ್ಲಿ ಹೆಚ್.ಸಿ. ಮಹದೇವಪ್ಪ ಭರ್ಜರಿ ಪ್ರಚಾರ! ಜನರಿಂದ ಭಾರಿ ಬೆಂಬಲ

By Sathish Kumar KH  |  First Published May 7, 2023, 12:12 AM IST

ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹೆಚ್.ಸಿ. ಮಹದೇವಪ್ಪ ಶನಿವಾರ ತಲಕಾಡು ಹೋಬಳಿಯ ಮಡವಾಡಿ ಗ್ರಾಮದಲ್ಲಿ ಭರ್ಜರಿ ಬಹಿರಂಗ ಪ್ರಚಾರ ಮಾಡಿದರು.


ಮೈಸೂರು (ಮೇ 06): ಮೈಸೂರು ಜಿಲ್ಲೆ ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹೆಚ್.ಸಿ. ಮಹದೇವಪ್ಪ ಶನಿವಾರ ತಲಕಾಡು ಹೋಬಳಿಯ ಮಡವಾಡಿ ಗ್ರಾಮದಲ್ಲಿ ಭರ್ಜರಿ ಬಹಿರಂಗ ಪ್ರಚಾರ ಮಾಡಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದು, ಮಹದೇವಪ್ಪರನ್ನು ಎತ್ತಿಕೊಂಡು ಕುಣಿದು ಸಂತಸಪಟ್ಟರು.

ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರಿದ್ದು, ಬಹಿರಂಗ ಪ್ರಚಾರಕ್ಕೆ ಇನ್ನು ಒಂದೇ ದಿನ ಬಾಕಿಯಿದೆ. ರಾಜ್ಯದೆಲ್ಲೆಡೆ ಎಲ್ಲ ರಾಜಕೀಯ ಪಕ್ಷಗಳಿಂದ ತಮ್ಮ ಅಭ್ಯರ್ಥಿಗಳ ಪರವಾಗಿ ಹೈಕಮಾಂಡ್‌ ನಾಯಕರು ಹಾಗೂ ಸ್ಥಳೀಯ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದೇ ರೀತಿ ಕಾಂಗ್ರೆಸ್‌ ಮುಖಂಡ ಹೆಚ್.ಸಿ. ಮಹದೇವಪ್ಪ ಅವರು ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಇಂದು ಪ್ರಚಾರದ ಭಾಗವಾಗಿ ಕ್ಷೇತ್ರದ ತಲಕಾಡು ಹೋಬಳಿಯ ಮಡವಾಡಿ ಗ್ರಾಮದಲ್ಲಿ ಬಹಿರಂಗ ಪ್ರಚಾರ ಮಾಡಿದರು. ಈ ಪ್ರಚಾರದ ವೇಳೆ ಮಹಾದೇವಪ್ಪರನ್ನು ಎತ್ತಿ ಕುಣಿದ ಕಾರ್ಯಕರ್ತರು ಹರ್ಷೋದ್ಘಾರ ವ್ಯಕ್ತಪಡಿಸಿದರು.

Latest Videos

undefined

ಸಿದ್ದರಾಮಯ್ಯನನ್ನ ಜೈಲಿಗೆ ಹಾಕಿಸ್ತೇನೆ: ಶಾಸಕ ಸಿ.ಟಿ. ರವಿ ವಾರ್ನಿಂಗ್

ಕರ್ತವ್ಯ ಪ್ರಜ್ಞೆ ಜಾಗೃತ:  ಈ ಕುರಿತು ಮಾತನಾಡಿದ ಕಾಂಗ್ರೆಸ್‌ ಅಭ್ಯರ್ಥಿ ಹೆಚ್.ಸಿ. ಮಹದೇವಪ್ಪ ಅವರು, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು  ತೋರಿದ ಪ್ರೀತಿಯಿಂದಾಗಿ ನನ್ನ ಕರ್ತವ್ಯ ಪ್ರಜ್ಞೆ ಜಾಗೃತಗೊಂಡಂತಾಗಿದೆ. ಅವರ ಪ್ರೀತಿಗೆ ನಾಉ ಚಿರಋಣಿ ಆಗಿದ್ದೇನೆ ಎಂದರು. ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ ಹೆಚ್ ಸಿ‌ ಮಹದೇವಪ್ಪ ಕಳೆದ ಎರಡು ದಿನಗಳ ಹಿಂದೆ ಮೂಗೂರು ಹಾಗೂ ಕೊತ್ತೇಗಾಲ, ಕುರುಬೂರು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದೇನೆ. ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಆರಂಭಿಸಿದ್ದು, ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಮದು ಹೇಳಿದರು.

ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ:  ಇನ್ನು ಎರಡು ದಿನಗಳ ಹಿಂದೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕುರುಬೂರು ಗ್ರಾಮ, ಹೊಸಹಳ್ಳಿ ಮೋಳೆ ಗ್ರಾಮ ಸೇರಿ ಹಲವು ಕಡೆ ಪ್ರಚಾರ ಮಾಡಲಾಗಿದ್ದು, ಡಾ ಹೆಚ್ ಸಿ ಮಹಾದೇವಪ್ಪಗೆ ಗ್ರಾಮಸ್ಥರು ಆರತಿ ಬೆಳಗಿ ಸ್ವಾಗತ ಮಾಡಿದರು. ಇನ್ನು ಜೆಡಿಎಸ್‌ಗೆ ಮತ ಕೊಟ್ಟರೆ, ಬಿಜೆಪಿಗೆ ಮತ ಹಾಕಿದಂತೆ ಎಂದು ಚುನಾವಣೆ ಪ್ರಚಾರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಹೆಚ್‌.ಸಿ.ಮಹಾದೇವಪ್ಪ ಹೇಳಿಕೆ ನೀಡಿದ್ದರು. ಬಿಜೆಪಿಯವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಸಂವಿಧಾನ ಉಳಿಯಬೇಕು. ಪ್ರಜಾ ಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‌ಗೆ ಮತ ಹಾಕಿ. ನನ್ನನ್ನ ಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಜರಂಗದಳ ನಿಷೇಧಿಸಿದರೆ, ಪಿಎಫ್‌ಐ- ಐಎಸ್‌ಐ ಸ್ವಾಗತಿಸಿದಂತೆ: ಯೋಗಿ ಆದಿತ್ಯನಾಥ

click me!