ಬಜರಂಗದಳ ನಿಷೇಧಿಸಿದರೆ, ಪಿಎಫ್‌ಐ- ಐಎಸ್‌ಐ ಸ್ವಾಗತಿಸಿದಂತೆ: ಯೋಗಿ ಆದಿತ್ಯನಾಥ

By Sathish Kumar KH  |  First Published May 6, 2023, 11:52 PM IST

ಬಜರಂಗದಳವನ್ನು ಬ್ಯಾನ್‌ ಮಾಡಿದರೆ ಪಿಎಫ್‌ಐ, ಐಎಸ್‌ಐ ಸ್ವಾಗತಿದಂತೆ ಆಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.


ಉತ್ತರ ಕನ್ನಡ (ಮೇ 06):  ರಾಮನ ಊರು ಅಯೋಧ್ಯಾದಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದ್ದು, ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರನ್ನು ವಿರೋಧ ಮಾಡುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್‌ನವರು ಬಜರಂಗದಳ ನಿಷೇಧ ಮಾಡಲು ಹೊರಡ್ತಾರೆ. ಬಜರಂಗದಳ ಹಾಗೂ ಯಾವುದೇ ಹಿಂದೂಗಳು ಇದನ್ನು ಒಪ್ಪಲ್ಲ. ಭಜರಂಗದಳ ನಿಷೇಧ ಮಾಡಿದರೇ ಪಿಎಫ್ಐ, ಐಎಸ್ ಐಗಳನ್ನು ಆಹ್ವಾನ ಮಾಡಿದಂತೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಬುಲ್ಡೋಝರ್ ಸಿಎಂ ಎಂದೇ ಖ್ಯಾತಿ ಪಡೆದುಕೊಂಡಿರುವ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಇಂದು‌ ಉತ್ತರಕನ್ನಡ ಜಿಲ್ಲೆಯ ಹೊ‌ನ್ನಾವರಕ್ಕೆ ಭೇಟಿ ನೀಡಿದ್ದಾರೆ. ಹೊನ್ನಾವರದ ರಾಮತೀರ್ಥದಲ್ಲಿ ಹೆಲಿಕಾಪ್ಟರ್‌ನಲ್ಲಿಳಿದ ಯೋಗಿ ಆದಿತ್ಯನಾಥ್, ಪ್ರಭಾತ್ ನಗರದ ಮೈದಾನದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಭಾಗವಹಿಸಿ ಭಟ್ಕಳ‌ ಶಾಸಕ‌ ಸುನೀಲ್ ನಾಯ್ಕ್ ಹಾಗೂ ಕುಮಟಾ‌ ಶಾಸಕ‌ ದಿನಕರ ಶೆಟ್ಟಿ ಪರವಾಗಿ ಮತಪ್ರಚಾರ ನಡೆಸಿದರು.

Latest Videos

undefined

ಸಿದ್ದರಾಮಯ್ಯನನ್ನ ಜೈಲಿಗೆ ಹಾಕಿಸ್ತೇನೆ: ಶಾಸಕ ಸಿ.ಟಿ. ರವಿ ವಾರ್ನಿಂಗ್

ಜೈ ಶ್ರೀರಾಮ್, "ನಮಸ್ಕಾರ ಭಟ್ಕಳ" ಎಂದು ಕನ್ನಡದಲ್ಲಿ ಮಾತನ್ನು ಪ್ರಾರಂಭಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಮನ ಊರು ಅಯೋಧ್ಯಾದಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದ್ದು, ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರನ್ನು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಬಜರಂಗದಳ ನಿಷೇಧ ಮಾಡಲು ಹೊರಡ್ತಾರೆ. ಬಜರಂಗದಳ ಹಾಗೂ ಯಾವುದೇ ಹಿಂದೂಗಳು ಇದನ್ನು ಒಪ್ಪಲ್ಲ. ಭಜರಂಗದಳ ನಿಷೇಧ ಮಾಡಿದರೇ ಪಿಎಫ್ಐ, ಐಎಸ್ ಐಗಳನ್ನು ಆಹ್ವಾನ ಮಾಡಿದಂತೆ. ಉತ್ತರಪ್ರದೇಶದಲ್ಲಿ ಉಗ್ರರ ಸೊಂಟ ಮುರಿದಿದ್ದೇವೆ. ಕರ್ನಾಟಕದಲ್ಲೂ ನಾವು ಪಿ.ಎಫ್ .ಐ ,ಐ.ಎಸ್.ಐಗಳ ಸೊಂಟ ಮುರಿಯುತ್ತೇವೆ ಎಂದರು.

ಅಂಜನಾದ್ರಿಯಲ್ಲಿ ಶ್ರೀ ಹನುಮಾನ್ ಮಂದಿರವನ್ನು ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ,  ಕಾಂಗ್ರೆಸ್ ಹನುಮಾನನ್ನು ಏಕೆ ವಿರೋಧ ಮಾಡುತ್ತಿದೆ..?ಹನುಮಾನ್ ಇರುವಲ್ಲಿ ಭೂತ ಪ್ರೇತಗಳು ನಾಶವಾಗುತ್ತವೆ. ಹೀಗಾಗಿ ಭೂತ ಪ್ರೇತಗಳು ಹನುಮಾನ್‌ನನ್ನು ವಿರೋಧ ಮಾಡುತ್ತಿದೆ. ಭಜರಂಗದಳ ನಿಷೇಧ ಮಾಡೋ ಮೂಲಕ ಕಾಂಗ್ರೆಸ್‌ನವರು ಐಎಸ್‌ಐ, ಪಿಎಫ್‌ಐ ಅಡ್ಡಾ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಭಜರಂಗದಳ‌ ಹಾಗೂ ಬಿಜೆಪಿ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ ಎಂದು ಹೇಳಿದರು.

ಡಿಕೆಶಿಗೆ ಮತ್ತೊಂದು ಸಂಕಷ್ಟ: ಬಿಜೆಪಿ ಭ್ರಷ್ಟಾಚಾರ ರೇಟ್‌ ಕಾರ್ಡ್‌ಗೆ ಸಾಕ್ಷಿ ಕೇಳಿದ ಆಯೋಗ

ಉತ್ತರಪ್ರದೇಶ ಹಾಗೂ ಕರ್ನಾಟಕದ ಸಂಬಂಧ ಸಾವಿರ ವರ್ಷಗಳಿಂದಿದೆ. ಶ್ರೀರಾಮ‌ ವನವಾಸ ಮಾಡಿದಾಗ ಕರ್ನಾಟಕದಲ್ಲಿ ಹೆಚ್ಚು ಬೆಂಬಲ ಸಿಕ್ಕಿದ್ದು ಹನುಮಂತನಿಂದ. ಉತ್ತರ ಪ್ರದೇಶದ ರಾಮಮಂದಿರದ ಉದ್ಘಾಟನೆಯಲ್ಲಿ ಕರ್ನಾಟಕದವರೂ ಭಾಗಿಯಾಗಬೇಕು. ಜನವರಿ 24ರಂದು ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ಹೀಗಾಗಿ ರಾಮಮಂದಿರದ ಉದ್ಘಾಟನೆಗೆ ನಿಮ್ಮನ್ನು ಆಹ್ವಾನಿಸಲು ಬಂದಿದ್ದೇನೆ. ನಿಮ್ಮ ಈ ಸೇವಕ ಅಯೋಧ್ಯೆಯಲ್ಲಿ ನಿಮ್ಮ ಸ್ವಾಗತಕ್ಕೆ ಸಿದ್ಧತೆ ಮಾಡುತ್ತಿದ್ದಾನೆ. ಜಿಲ್ಲೆಯಲ್ಲಿ ಭಟ್ಕಳ ಅಭ್ಯರ್ಥಿ ಸುನೀಲ್ ನಾಯ್ಕ್ ಹಾಗೂ ಕುಮಟಾ ಅಭ್ಯರ್ಥಿ ದಿನಕರ ಶೆಟ್ಟಿ ಅವರನ್ನು ಗೆಲ್ಲಿಸಿ ಎಂದ ಯೋಗಿ, ಜೈ ಶ್ರೀರಾಮ್ ಎಂದು ಹೇಳಿ ಮಾತು ಮುಗಿಸಿ ತೆರಳಿದರು. 

ಯೋಗಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್ ನಾಯ್ಕ್, ದಿನಕರ ಶೆಟ್ಟಿ ಭಾಗಿಯಾಗಿದ್ದರು. 

click me!