ನೀರಿನ ಸಮಸ್ಯೆ ಹೇಳಲು ಬಂದ ಮಹಿಳೆ ಜೊತೆ ಸಚಿವರ ಪತ್ನಿಯ ಉದ್ಧಟತನ

Published : Apr 28, 2024, 08:35 AM IST
ನೀರಿನ ಸಮಸ್ಯೆ ಹೇಳಲು ಬಂದ ಮಹಿಳೆ ಜೊತೆ ಸಚಿವರ ಪತ್ನಿಯ ಉದ್ಧಟತನ

ಸಾರಾಂಶ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಪತ್ನಿ ತನ್ನ ಪತಿಯ ಪರವಾಗಿ ಮಧ್ಯಪ್ರದೇಶದ ಗುಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಜನರ ಬಳಿ ತೆರಳಿ ಪತಿಗೆ ಮತ ನೀಡುವಂತೆ ಯಾಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಅಲ್ಲಿನ ನೀರಿನ ಸಮಸ್ಯೆಯನ್ನು  ಸಚಿವೆ ಪತ್ನಿ ಪ್ರಿಯದರ್ಶಿನಿ ಸಿಂಧ್ಯಾ ಅವರ ಗಮನಕ್ಕೆ ತಂದಿದ್ದಾರೆ. 

ಭೋಪಾಲ್‌: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗಿದ್ದು, ಇದರ ಜೊತೆಗೆ ಬಿಸಿಲಿನ ತಾಪವೂ ಹೆಚ್ಚಾಗಿದ್ದು, ಹಲವೆಡೆ ನೀರಿನ ಸಮಸ್ಯೆ ಬಾಧಿಸುತ್ತಿದೆ.  ಅತ್ತ ಜನಪ್ರತಿನಿಧಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ ಇತ್ತ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಹೀಗಿರುವಾಗ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕೇಂದ್ರ ಸಚಿವರ ಪತ್ನಿ ನೀರಿಲ್ಲ ಎಂದ ಮಹಿಳೆಯ ಜೊತೆ ಉದ್ಧಟತನದಿಂದ ವರ್ತಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಪತ್ನಿ ತನ್ನ ಪತಿಯ ಪರವಾಗಿ ಮಧ್ಯಪ್ರದೇಶದ ಗುಣದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಜನರ ಬಳಿ ತೆರಳಿ ಪತಿಗೆ ಮತ ನೀಡುವಂತೆ ಯಾಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಅಲ್ಲಿನ ನೀರಿನ ಸಮಸ್ಯೆಯನ್ನು  ಸಚಿವೆ ಪತ್ನಿ ಪ್ರಿಯದರ್ಶಿನಿ ಸಿಂಧ್ಯಾ ಅವರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಕೋಪಗೊಂಡ ಆಕೆ ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ಉದ್ಧಟತನದಿಂದ ವರ್ತಿಸಿದ್ದಾರೆ. ಈ  ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ಪತ್ನಿ ಪ್ರಿಯದರ್ಶಿನಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಮಧ್ಯಪ್ರದೇಶದಲ್ಲಿ ಬಿಜೆಪಿ ಪಾರುಪತ್ಯ: 'ಶಿವರಾಜ'ನ ಜತೆ 'ಮಹಾರಾಜ'ನ ನೆರವಿಗೆ ಕಾಂಗ್ರೆಸ್‌ ಧೂಳೀಪಟ!

ಜ್ಯೋತಿರಾದಿತ್ಯ ಸಿಂದ್ಯಾ ಅವರ ಗೆಲುವಿಗಾಗಿ ಅವರ ಕುಟುಂಬ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಜ್ಯೋತಿರಾದಿತ್ಯ ಅವರ ಪತ್ನಿ ಪ್ರಿಯದರ್ಶಿನಿ ಹಾಗೂ ಮಗ  ತಮ್ಮ ತಂದೆಯ ವಿರುದ್ಧ ಇನ್ನಿಲ್ಲದ ಪ್ರಚಾರ ಮಾಡುತ್ತಿದ್ದು,  ಪ್ರತಿ ಗ್ರಾಮದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ಪ್ರಚಾರ ಮಾಡುತ್ತಿದ್ದ ವೇಳೆಯೇ ಗುಣ ಗ್ರಾಮದಲ್ಲಿ ಪ್ರಿಯದರ್ಶಿನಿ ನೀರು ಕೇಳಿದ ಮಹಿಳೆಯ ಮೇಲೆ ರೇಗಾಡಿದ್ದಾರೆ. ಕಾರಿನಲ್ಲಿ ಕುಳಿತುಕೊಂಡೆ ಅವರು ನೀರು ಕೇಳಿದ ಮಹಿಳೆ ಮೇಲೆ ರೇಗಾಡಿದ್ದು, ಸಚಿವ ಪತ್ನಿಯ ಈ ದುಂಡಾವರ್ತನೆಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಗುಣದ ಖುಜ್ರಿ ಗ್ರಾಮದದಲ್ಲಿ ಈ ಘಟನೆ ನಡೆದಿದೆ. ಗ್ರಾಮವನ್ನು ತೀವ್ರವಾಗಿ ಭಾದಿಸುತ್ತಿರುವ ನೀರಿನ ಸಮಸ್ಯೆ ಬಗ್ಗೆ ಅಲ್ಲಿನ ಒಬ್ಬರು ಮಹಿಳೆ ಸೇರಿದಂತೆ ಗ್ರಾಮಸ್ಥರು ಪ್ರಿಯದರ್ಶಿನಿ ಅವರಿಗೆ ಹೇಳಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಭಾರಿ ನೀರಿನ ಸಮಸ್ಯೆ ಇದ್ದು, ಈ ಕಾರಣದಿಂದ ಗ್ರಾಮದ ಯುವಕರಿಗೆ ಮದ್ವೆಯೂ ಆಗ್ತಿಲ್ಲ, ಮೇಡಂ, ನೀವು ಏನಾದರೂ ಆದಾಗ ದಯವಿಟ್ಟು ಒಮ್ಮೆ ಇಲ್ಲಿಗೆ ಬನ್ನಿ, ಇಲ್ಲಿ ನೀರಿಗಾಗಿ ಒಂದು ಟ್ಯಾಂಕ್ ಇದೆ, ಆದರೆ ಅದರಲ್ಲಿ ನೀರಿಲ್ಲ ಎಂದು ನೀರಿನ ಕಷ್ಟದ ಬಗ್ಗೆ ಮಹಿಳೆಯರು ದನಿ ಎತ್ತಿದ್ದಾರೆ. ಆದರೆ ಅಷ್ಟಕ್ಕೆ ಸಿಟ್ಟುಗೊಂಡ ಪ್ರಿಯದರ್ಶಿನಿ ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಕಾರು ಹತ್ತಿ ಹೋಗಿದ್ದಾರೆ. ಸಚಿವರ ಪತ್ನಿಯಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಾದ ಇವರು ಈ ರೀತಿ ಬೇಜಾವಾಬ್ದಾರಿಯಿಂದ ವರ್ತಿಸಿದ್ದಕ್ಕೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಸಚಿವರ ಪತ್ನಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

4000 ಕೋಟಿ ಮೌಲ್ಯದ ಅರಮನೆಯಲ್ಲಿದ್ದರೂ ಸ್ವಂತ ದುಡಿಮೆಗೆ ತರಕಾರಿ ಮಂಡಿ ತೆರೆದ ರಾಜವಂಶಸ್ಥ ಸಿಂಧಿಯಾ ಮಗ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್