ಆಳಂದ: ಚುನಾವಣೆ ಸಿದ್ಧತೆ ಗುಟ್ಟು ಬಿಟ್ಟುಕೊಡಲಾರೆ, ಹರ್ಷಾನಂದ ಗುತ್ತೇದಾರ್‌

By Kannadaprabha News  |  First Published Mar 5, 2023, 2:45 PM IST

ಮಾರ್ಚ್‌ 6 ರಂದು ನಡೆಯಲಿರುವ ಪಕ್ಷದ ವಿಜಯ ಸಂಕಲ್ಪ ಯಾತ್ರೆ, ಆಡಳಿತ ಸೌಧನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು: ಹರ್ಷಾನಂದ ಗುತ್ತೇದಾರ್‌


ಆಳಂದ(ಮಾ.05): ಬರುವ ವಿಧಾನ ಸಭೆ ಚುನಾವಣೆಗೆ ತಮ್ಮ ತಂದೆ ಸುಭಾಷ ಗುತ್ತೇದಾರ್‌ ಅವರೇ ಅಖಾಡದಲ್ಲಿರುತ್ತಾರಂದು ಹೇಳುವ ಮೂಲಕ ಮಾಜಿ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ್‌ ಒಗಟಿನ ಮಾತನ್ನಾಡಿದ್ದಾರೆ. ಚುನಾವಣೆಯ ಸಿದ್ಧತೆಯ ಗುಟ್ಟು ಬಿಟ್ಟು ಕೊಡೋದಿಲ್ಲ. ಈ ಬಾರಿಯಂತೂ ನಾನಿರೋದಿಲ್ಲ, ಅಪ್ಪೌರೆ (ತಮ್ಮ ತಂದೆ ಸುಭಾಸ ಗುತ್ತೇದಾರ್‌) ಇರ್ತಾರೆ ಎಂದು ಹೇಳಿದರು.

ಈ ಹೇಳಿಕೆಯ ಮೂಲಕ ಕಣಕ್ಕೆ ಈ ಬಾರಿ ತಂದೆಯೋ, ಅಪ್ಪ ನಿಲ್ಲುವರೋ ಎಂಬ ಸಾರ್ವಜನಿಕ ವಲಯದಲ್ಲಿನ ಕುತೂಹಲಕ್ಕೆ ಗುತ್ತೇದಾರ್‌ ಕುಟುಂಬ ತೆರೆ ಎಳೆದಂತಾಗಿದೆ. ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬರುವ ಚುನಾವಣೆಯಲ್ಲಿ ಶಾಸಕ ಗುತ್ತೇದಾರ ಪುತ್ರ ಹರ್ಷಾನಂದ ಅವರೇ ಮುಂದಿನ ನಾಯಕರು ಎಂಬೆಯಲ್ಲ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಭಾರಿ ಸದ್ದುನಡೆಸಿ ಗಮನವೂ ಸೆಳೆದಿದ್ದರಾದರೂ ಈ ನಡುವೆ ಸ್ವತಃ ಶಾಸಕ ಸುಭಾಷ ಗುತ್ತೇದಾರ ಅವರೇ ಕಾರ್ಯಕರ್ತರ ಸಭೆಯೊಂದರಲ್ಲಿ ಅವರು ನಿಂತರೇ (ಬಿ.ಆರ್‌. ಪಾಟೀಲ) ನಾನೇ ನಿಲ್ಲುತ್ತೇನೆ. ಹರ್ಷಾನಂದಿಲ್ಲ ಎದುರಾಳಿಗೆ ನಾನೇ ಸೂಕ್ತ ಅಭ್ಯರ್ಥಿ ಎಂಬುವ ಸಂದೇಶವೂ ರವಾನಿಸುವ ಮೂಲಕ ಕಾರ್ಯಕರ್ತ ವಲಯದಲ್ಲಿನ ಗೊಂದಲ ಶಮನಗೊಳಿಸಲು ಯತ್ನಿಸಿದ್ದರು. ಸಾರ್ವಜನಿಕ ವಲಯದಲ್ಲಿನ ಚರ್ಚೆ ಮಾತ್ರ ನಿಂತಿರಲಿಲ್ಲ.

Tap to resize

Latest Videos

undefined

ಕಲಬುರಗಿ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ

ಈಗ ಹರ್ಷಾನಂದ ಅವರ ತಂದೆಯವರೇ ನಿಲ್ಲುತ್ತಾರೆ ನಾನಲ್ಲ. ತಂದೆಯವರ ಗೆಲುವಿಗೆ ಕಾರ್ಯಕರ್ತರೊಂದಿಗೆ ಶ್ರಮಿಸಲಾಗುವುದು. ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಆಡಳಿತ ಹಾಗೂ ಕ್ಷೇತ್ರದಲ್ಲಿ ಶಾಸಕರು ಕೈಗೊಂಡ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚಿ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡು ಬೆಂಬಲಿಸತೊಡಗಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರು ಸೇರಿ ತಂದೆಯವರ ಗೆಲುವಿಗೆ ಒಗ್ಗಟ್ಟಿನಿಂದ ನಿತ್ಯ ಬಲಪ್ರದರ್ಶನ ಮಾಡುತ್ತಿರುವುದು ಈಗಲೇ ಬಲತಂದುಕೊಟ್ಟಿದೆ ಎಂದು ಹರ್ಷಾನಂದ ಹೇಳಿದರು.

ಚುನಾವಣೆಯ ಸಿದ್ಧತೆ ಯಾವ ರೀತಿ ನೆಡದಿದೆ ಎಂಬುದಕ್ಕೆ ಪ್ರತಿಕೆಯೆ ನೀಡಲು ನಿರಾಕರಿಸಿದ ಅವರು ಈ ಕುರಿತು ಮಾಧ್ಯಮದ ಮುಂದೆ ಹೇಳಿದರೆ ಹೇಗೆ, ಮಾರ್ಚ್‌ 6 ರಂದು ನಡೆಯಲಿರುವ ಪಕ್ಷದ ವಿಜಯ ಸಂಕಲ್ಪ ಯಾತ್ರೆ, ಆಡಳಿತ ಸೌಧನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣ ಸಮಾರಂಭಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಇದೇ ವೇಳೆ ಮನವಿಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಸಂತೋಷ ಹಾದಿಮನಿ, ಮಲ್ಲಿಕಾರ್ಜುನ ಕಂದಗುಳೆ ಮತ್ತಿತರು ಇದ್ದರು.

click me!