ಭ್ರಷ್ಟಾಚಾರ ರಕ್ಷಣೆಗೆ ಕಾಂಗ್ರೆಸ್ ಎಸಿಬಿ ಸಂಸ್ಥೆ ಜಾರಿಗೆ ತಂದಿತ್ತೆಂಬ ಪ್ರತಾಪಸಿಂಹ ಹೇಳಿಕೆಗೆ ಎಂ.ಬಿ.ಪಾಟೀಲ ಟಾಂಗ್
ವಿಜಯಪುರ(ಮಾ.05): ಮೈಸೂರು ಸಂಸದ ಪ್ರತಾಪ ಸಿಂಹ ಅವರು ಎಸಿಬಿ ಕುರಿತು ಸರಿಯಾಗಿ ಅಭ್ಯಾಸ ಮಾಡಿ ಮಾತನಾಡಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಶನಿವಾರ ಭ್ರಷ್ಟಾಚಾರ ರಕ್ಷಣೆಗೆ ಕಾಂಗ್ರೆಸ್ ಎಸಿಬಿ ಸಂಸ್ಥೆ ಜಾರಿಗೆ ತಂದಿತ್ತು ಎಂಬ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಎಸಿಬಿ ರಚನೆಯಾದಾಗಲೂ ಲೋಕಾಯುಕ್ತ ಇತ್ತು. ಎಸಿಬಿ ರಚನೆಯಾಗಬೇಕು ಎಂದು ಕೋರ್ಟ್ ಹೇಳಿತ್ತು. ಹಾಗಾಗಿ ಎಸಿಬಿ ರಚನೆ ಮಾಡಲಾಗಿತ್ತು. ವಿನಃ ಭ್ರಷ್ಟಾಚಾರ ರಕ್ಷಣೆಗೆ ಎಸಿಬಿ ಜಾರಿಗೆ ತಂದಿರಲಿಲ್ಲ. ಎಸಿಬಿ ಬಗ್ಗೆ ಪ್ರತಾಪಸಿಂಹ ಸರಿಯಾಗಿ ಅಭ್ಯಾಸ ಮಾಡಬೇಕು ಎಂದರು.
ಇಂಡಿ ರೇಣಸಿದ್ದೇಶ್ವರ ಏತ ನೀರಾವರಿ ಯೋಜನೆ ನಾವು ಮಾಡಿದ್ದೇವೆ ಎಂದ ಪ್ರತಾಪಸಿಂಹ ಅವರ ಮಾತಿಗೆ ಪ್ರತಿಕ್ರಿಯಿಸಿದ ಎಂಬಿಪಿ ಅವರು, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ನಾಲ್ಕು ವಷÜರ್ ಮಲಗಿದ್ದರು. ಈಗ ಬಂದು ಭೂಮಿ ಪೂಜೆ ಮಾಡುತ್ತಿದ್ದಾರೆ. ಈ ಏತ ನೀರಾವರಿ ಯೋಜನೆ ಇನ್ನು ಬೋರ್ಡ್ ಮೀಟಿಂಗ್‌ನಲ್ಲಿ ಕ್ಲಿಯರ್ ಆಗಿಲ್ಲ. ಕೆಲ ದಿನಗಳಲ್ಲಿಯೇ ಚುನಾವಣೆ ನೀತಿ ಸಂಹಿತೆ ಅಡ್ಡ ಬರುತ್ತದೆ. 25 ದಿನಗಳಲ್ಲಿ ಮ್ಯಾಜಿಕ್ ಮಾಡುತ್ತಾರಾ? ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದರು.
undefined
ಭ್ರಷ್ಟಾಚಾರ ಕಡಿವಾಣಕ್ಕೆ ಬಿಜೆಪಿ ಬದ್ಧ: ಪ್ರತಾಪ ಸಿಂಹ
ರೇಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕ್ರೆಡಿಟ್ ಸಮ್ಮಿಶ್ರ ಸರ್ಕಾರಕ್ಕೆ ಹೋಗಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ .250 ಕೋಟಿ ತೆಗೆದಿಟ್ಟಿದ್ದರು. ಸಮ್ಮಿಶ್ರ ಸರ್ಕಾರ ಹೋದ ಮೇಲೆ ಯಾವುದೇ ಕೆಲಸ ಆಗಲಿಲ್ಲ ಎಂದು ದೂರಿದರು.
ಬಿಜೆಪಿ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದು ಯಾವ ಕ್ಷೇತ್ರವನ್ನು ಬಿಟ್ಟಿಲ್ಲ. ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅವರೂ ರಾಜೀನಾಮೆ ನೀಡಬೇಕು. ವಿರೂಪಾಕ್ಷಪ್ಪ ಮಾಡಾಳ ಬಂಧಿಸಬೇಕು. ಸಿಟ್ಟಿಂಗ್ ಹೈಕೋರ್ಟ್ ನ್ಯಾಯಾಧೀಶರಿಂದ ಮಾಡಾಳ ವಿರೂಪಾಕ್ಷಪ್ಪನವರ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರು ರಾಜ್ಯ ಸರ್ಕಾರ ವಜಾ ಮಾಡಬೇಕು ಎಂದು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬೇಕು. ರಾಜ್ಯವನ್ನು ಲೂಟಿ ಹೊಡೆಯುವುದನ್ನು ತಪ್ಪಿಸಲು ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು. ಇಲ್ಲದಿದ್ದರೇ 25-30 ದಿನಗಳಲ್ಲಿ ಚುನಾವಣೆ ಬರುತ್ತದೆ. ಅಷ್ಟರಲ್ಲಿಯೇ ಬಿಜೆಪಿಯವರು ರಾಜ್ಯವನ್ನು ಮತ್ತಷ್ಟುಲೂಟಿ ಮಾಡುತ್ತಾರೆ ಎಂದು ಆರೋಪಿಸಿದರು.
ಮಾರ್ಚ್ ಕೊನೆಯವರೆಗೆ ಟಿಕೆಟ್ ಫೈನಲ್
ಬರುವ ವಿಧಾನಸಭೆ ಚುನಾವಣೆಯ ಟಿಕೆಟ್ ಮಾರ್ಚ್ ಕೊನೆಯವರೆಗೆ ಫೈನಲ್ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ಎಲ್ಲಿ ಹೆಚ್ಚು ಡಿಮ್ಯಾಂಡ್ ಇದೆಯೋ ಅಲ್ಲಿ ಟಿಕೆಟ್‌ಗಾಗಿ ಫೈಟ್ ಇದೆ. ಬಿಜೆಪಿಯಲ್ಲಿ ಟಿಕೆಟ್ ಕೇಳುವವರೇ ದಿಕ್ಕಿಲ್ಲ. ಬಿಜೆಪಿ ಸೋಲುವ ಕುದುರೆ ಎಂಬುವುದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಯಾರೂ ಬಿಜೆಪಿ ಬೆನ್ನು ಹತ್ತುತ್ತಿಲ್ಲ. ಈ ಕಾರಣಕ್ಕಾಗಿಯೇ ಬಿಜೆಪಿಯರು ಆಕಾಂಕ್ಷಿಗಳಿಂದ ಅರ್ಜಿ ಕರೆದಿಲ್ಲ. ಅರ್ಜಿ ಕರೆದರೆ ಯಾರೂ ಅರ್ಜಿ ಹಾಕಲ್ಲ ಎಂದು ಗೊತ್ತಾಗಿಯೇ ಬಿಜೆಪಿಯವರು ಅರ್ಜಿ ಕರೆದಿಲ್ಲ ಎಂದು ಲೇವಡಿ ಮಾಡಿದರು.
ಸ್ವಾಮೀಜಿಗಳಿಗೆ ರಾಜಕೀಯ ಪ್ರವೇಶಕ್ಕೆ ಆಫರ್ ಕೊಟ್ಟ ನಡ್ಡಾ ನಡೆಗೆ ಕಾಂಗ್ರೆಸ್ ಶಾಸಕರ ವಿರೋಧ
ರಾಜ್ಯದಲ್ಲಿ ಈ ಚುನಾವಣೆಯಲ್ಲಿ 130 ರಿಂದ 140 ಸ್ಥಾನಗಳನ್ನು ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ವೀರೇಂದ್ರ ಪಾಟೀಲರ ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸಿಬಿ ಬರೀ ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಇದೆ. ಮೊದಲು ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಬಂಧನವಾಗಲಿ. ಮಾಡಾಳ ಪಕ್ಕಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನುಷ್ಟ. ಯಡಿಯೂರಪ್ಪ ಬಾಯಿ ಮುಚ್ಚಿಸಲು ಈ ದಾಳಿ ನಡೆದಿರಬೇಕು ಅಂತ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿಳಿಸಿದ್ದಾರೆ.