ಬಿಜೆಪಿ ಶಾಸಕರ ಅಮಾನತು ಕೋಮು ದ್ವೇಷದಿಂದ ಎಂದು ಹರೀಶ್ ಪೂಂಜಾ ಆರೋಪಿಸಿದ್ದಾರೆ. ಸ್ಪೀಕರ್ ಖಾದರ್ ಮುಸ್ಲಿಂ ಭಾವನೆ ತೋರ್ಪಡಿಸಿದ್ದಾರೆ ಎಂದಿದ್ದಾರೆ. ಆರ್.ವಿ ದೇಶಪಾಂಡೆ ಪೂಂಜಾ ಹೇಳಿಕೆ ಖಂಡಿಸಿದ್ದಾರೆ.
ಬೆಂಗಳೂರು (ಎ.2): ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿದ್ದು ಕೋಮು ದ್ವೇಷದ ಕಾರಣಕ್ಕೆ ಎಂದು ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ. ನಮ್ಮ ಧರ್ಮದವರಿಗೆ ಎಲ್ಲರೂ ಸಲಾಂ ಹೊಡಿಬೇಕು ಅಂತ ಖಾದರ್ ಸ್ಪೀಕರ್ ಆದಾಗಲೇ ಎಲ್ಲಾ ಮುಸಲ್ಮಾನರು ಸಂತೋಷಪಟ್ಟಿದ್ದರು. ಈಗ ಸ್ಪೀಕರ್ ಸ್ಥಾನದಲ್ಲಿ ಕೂತು ಖಾದರ್ ಅದನ್ನು ಸಾಧಿಸಿದ್ದಾರೆ. ಒಬ್ಬ ಮುಸಲ್ಮಾನನಿಗೆ ಕಾಫೀರರ ಬಗ್ಗೆ ಯಾವ ಭಾವನೆ ಇರುತ್ತೆ ಅದನ್ನು ಖಾದರ್ ಈ ಮೂಲಕ ತೋರ್ಪಡಿಸಿದ್ದಾರೆ. ಹೆಸರಿಗಷ್ಟೇ ಇಲ್ಲಿ ಅಂಬೇಡ್ಕರ್ ಸಂವಿಧಾನ ಎಲ್ಲವೂ ಹಿಂದೂಗಳ ಮೇಲೆ ದ್ವೇಷ ಅನ್ನೋದು ಸಾಬೀತಾಗಿದೆ ಎಂದು ಕಿಡಿ ಕಾರಿದ್ದಾರೆ.
18 ಶಾಸಕರ ಸಸ್ಪೆಂಡ್ ವಾಪಸ್ ಕೋರಿ ಸ್ಪೀಕರ್‌ಗೆ ಅಶೋಕ್ ಪತ್ರ! ಬಿಜೆಪಿಯಲ್ಲಿ ಅಸಮಾಧಾನ!
ಆರ್.ವಿ ದೇಶಪಾಂಡೆ ಖಂಡನೆ:
ಹರೀಶ್ ಪೂಂಜಾ ಅವರ ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಸ್ಪೀಕರ್ ಸ್ಥಾನದಲ್ಲಿ ಯಾರೇ ಇರಲಿ ಜಾತಿ, ಧರ್ಮದ ಪ್ರಕಾರ ನಡೆಯಲ್ಲ. ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ತಾರೆ. ಯು.ಟಿ ಖಾದರ್ ಆದರ್ಶ ವ್ಯಕ್ತಿ. ಹರೀಶ್ ಪೂಂಜಾ ಅವರ ಹೇಳಿಕೆ ಖಂಡಿಸ್ತೇನೆ. ಅವರು ಸ್ಟೇಜ್ ಯಾಕೆ ಹತ್ತಬೇಕು? ಎಲ್ಲರೂ ಯಾಕೆ ಸ್ಪೀಕರ್ ಸುತ್ತುವರಿಯಬೇಕು? ಅಶೋಕ್ ವಿಪಕ್ಷ ನಾಯಕರಿದ್ದಾರೆ. ಅವರು ನನಗೆ ಒಳ್ಳೆಯ ಸ್ನೇಹಿತ. ಸ್ಪೀಕರ್ ಕರೆದ್ರು ಅಂತ ಅಶೋಕ್ ಯಾಕೆ ಹೇಳಬೇಕು. ಸ್ಪೀಕರ್ ಯಾಕೆ ಮೇಲೆ ಬನ್ನಿ ಅಂತ ಕರೀತಾರೆ ಎಂದು ಪ್ರಶ್ನಿಸಿದ್ದಾರೆ.
ಶಾಸಕರ ಅಮಾನತು ನನ್ನೊಬ್ಬನ ನಿರ್ಧಾರವಲ್ಲ: ಸ್ಪೀಕರ್ ಯು.ಟಿ.ಖಾದರ್ ಸಂದರ್ಶನ
ಅಮಾನತಿಗೆ ಕಾರಣವೇನು?
ಹನಿಟ್ರ್ಯಾಪ್ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಹಾಗೂ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಜೆಟ್ ಘೋಷಣೆ ಕೈಬಿಡಬೇಕು ಎಂದು ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಭಾರಿ ಗದ್ದಲ ಸೃಷ್ಟಿಸಿದ್ದಲ್ಲದೆ, ಸ್ಪೀಕರ್ ಅವರ ಪೋಡಿಯಂ ಮೇಲೇರಿ ಕಾಗದಗಳನ್ನು ಸ್ಪೀಕರ್ ಮುಖಕ್ಕೆ ತೂರಿ ಕೋಲಾಹಲಕರ ಸನ್ನಿವೇಶ ಸೃಷ್ಟಿ ಮಾಡಿ
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸದನದಲ್ಲಿ ದುರ್ವರ್ತನೆ ಆರೋಪದಡಿ ಬಿಜೆಪಿಯ 18 ಸದಸ್ಯರನ್ನು ಆರು ತಿಂಗಳ ಸುದೀರ್ಘ ಅವಧಿವರೆಗೆ ಅಮಾನತು ಮಾಡಿ ಸಭಾಧ್ಯಕ್ಷ ಯು.ಟಿ. ಖಾದರ್ ರೂಲಿಂಗ್ ನೀಡಿದರು. ರೂಲಿಂಗ್ ನಂತರವೂ ಶಾಸಕರು ಸದನದಲ್ಲೇ ಉಳಿದ ಕಾರಣ ಮಾರ್ಷಲ್‌ಗಳು ಎಲ್ಲ 18 ಶಾಸಕರನ್ನು ಸದನದಿಂದ ಹೊರಗೆ ಹೊತ್ತೊಯ್ದ ಈ ಘಟನೆಗೆ ವಿಧಾನಸಭೆ ಸಾಕ್ಷಿಯಾಗಿತ್ತು.