ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೋದ್ರೂ ಪ್ರವಾಸಿ ಮಂದಿರ ಬೀಗ ತೆರೆಯದ ಅಧಿಕಾರಿಗಳು!

By Ravi Janekal  |  First Published Jul 28, 2024, 2:44 PM IST

ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಆದರೆ ನಾನು ಎಲ್ಲಿಗಾದರೂ ಭೇಟಿ ನೀಡಿದ್ರೆ, ಸಭೆ ಮಾಡಿದ್ರೆ ಅಧಿಕಾರಿಗಳಿಗೆ ಹೋಗಬೇಡಿ ಎಂದು ಹೇಳುತ್ತಾರೆ, ನಾನು ಮೈಸೂರಿಗೆ ಹೋದ್ರೂ ಪ್ರವಾಸಿ ಮಂದಿರಕ್ಕೆ ಬೀಗ ಹಾಕಿಸುತ್ತಾರೆ. ಇಂತವರಿಂದ ರಾಜ್ಯ ಅಭಿವೃದ್ಧಿ ಆಗುತ್ತಾ? ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹರಿಹಾಯ್ದರು.


ಮೈಸೂರು (ಜು.28): ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಆದರೆ ನಾನು ಎಲ್ಲಿಗಾದರೂ ಭೇಟಿ ನೀಡಿದ್ರೆ, ಸಭೆ ಮಾಡಿದ್ರೆ ಅಧಿಕಾರಿಗಳಿಗೆ ಹೋಗಬೇಡಿ ಎಂದು ಹೇಳುತ್ತಾರೆ, ನಾನು ಮೈಸೂರಿಗೆ ಹೋದ್ರೂ ಪ್ರವಾಸಿ ಮಂದಿರಕ್ಕೆ ಬೀಗ ಹಾಕಿಸುತ್ತಾರೆ. ಇಂತವರಿಂದ ರಾಜ್ಯ ಅಭಿವೃದ್ಧಿ ಆಗುತ್ತಾ? ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹರಿಹಾಯ್ದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇವಲ ಕಾಟಾಚಾರಕ್ಕೆ ಪ್ರಧಾನಿ ಭೇಟಿ ಆಗಿ ಬರೋದಲ್ಲ. ರಾಜ್ಯಕ್ಕೆ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ಪಟ್ಟಿ ಮಾಡಿ ಕೊಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರಕ್ಕೆ ಪ್ರೊಪಸಲ್ ಕೊಡಬೇಕು. ನಾನು ರಾಜ್ಯದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿವಹಿಸಿದ್ದೇೆ. ನಾನೀಗ ಕೇಂದ್ರ ಸಚಿವನಾಗಿ ಒಂದು ತಿಂಗಳಷ್ಟೇ ಕಳೆದಿದೆ. ಆಗಲೇ ಬಂದು ಕಾವೇರಿ ನೀರಿನ ಸಮಸ್ಯೆ ಬಗೆಹರಿಸಿ ಎನ್ನುತ್ತಾರೆ ಎಲ್ಲದಕ್ಕೂ ಕಾಲಾವಕಾಶ ಬೇಕು ಎಂದರು

Tap to resize

Latest Videos

undefined

'ಅವರಪ್ಪನಾಣೆ ಗೆಲ್ಲೊಲ್ಲ ಅಂದಿದ್ದ, ಗೆಲ್ಲಲಿಲ್ಲವಾ?' ಈ ಜನ್ಮದಲ್ಲಿ ಸಿಎಂ ಆಗೊಲ್ಲ ಎಂಬ ಡಿಕೆಶಿ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು!

ನಿಜ ಹೇಳಬೇಕೆಂದರೆ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿಲ್ಲ. ರಾಜ್ಯ ಸರ್ಕಾರವೇ ಅನ್ಯಾಯ ಮಾಡಿಕೊಳ್ಳುತ್ತಿದೆ. ಕೇವಲ ಬೈದಾಡಿಕೊಂಡು ತಿರುಗಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣವನ್ನೂ ಮೀಸಲಿಡಬೇಕು. ಆಗ ಮಾತ್ರ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತದೆ. ಆದರೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯದ ಪಾಲಿನ ಹಣ ಮೀಸಲಿಡದೇ ಕೇಂದ್ರದ ವಿರುದ್ಧ ವಿನಾಕಾರಣ ಆರೋಪ ಮಾಡೋದು ಸರಿಯಲ್ಲ ಎಂದರು.

ಇಡಿ ವಿರುದ್ಧ ಕಾಂಗ್ರೆಸ್ ಸರ್ಕಾರ ಎಫ್‌ಐಆರ್ ದಾಖಲು ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವರು, ವಾಲ್ಮೀಕಿ ನಿಗಮದ ವಿಚಾರವಾಗಿ ಆ ಕಲ್ಲೇಶ ಅನ್ನುವವನ ಕೈಯಲ್ಲಿ ಕಂಪ್ಲೆಂಟ್ ಕೊಡಿಸಿದ್ದೀರಿ. ಆತನ ಹಿನ್ನೆಲೆ ಏನು? ಸಿದ್ದರಾಮಯ್ಯ ಅವರೇ ನೀವೇ ಕಲ್ಲೇಶ್‌ನನ್ನು ಜೂನ್ ತಿಂಗಳಲ್ಲಿ ಸಸ್ಪೆಂಡ್ ಮಾಡಿದ್ದೀರಿ. ಸಸ್ಪೆಂಡ್ ಮಾಡಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಕೇಂದ್ರ ಸರ್ಕಾರದ 40 ಕೋಟಿ ರೂ. ಅನುದಾನ ಬಳಕೆ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಅಂಥವನಿಂದ ಕಂಪ್ಲೆಂಟ್ ಕೊಡಿಸಿದ್ದೀರಿ. ಬೇರೆ ಯಾರೂ ಸಿಗಲಿಲ್ಲವ? ನಿಮ್ಮ ಪೊನ್ನಣ್ಣ ಸರಿಯಾಗಿ ಹೇಳಿಕೊಡಲಿಲ್ವ? ಇಂಥ ಸಲಹೆ ಕೊಡುವವನಿಗೆ ಎಸ್ಕಾರ್ಟ್ ಬೇರೆ ಕೊಡ್ತೀರಿ.‌ ಇದೆನಾ ನಿಮ್ಮ ಆಡಳಿತ ವೈಖರಿ? ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿದ್ರೆ ಯಾಕೆ ಸುಮ್ನಿದ್ರಿ? 14 ತಿಂಗಳು ಕತ್ತೆ ಕಾಯ್ತಾ ಇದ್ರಾ?: ಯತ್ನಾಳ್ ಗರಂ

ಸುದ್ದಿಗೋಷ್ಠಿಯಲ್ಲಿ ಜಿಟಿ ದೇವೇಗೌಡ ಗೈರು!

ಮೈಸೂರಿನ ಪತ್ರಕರ್ತರ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ವಿಧಾನಸಭೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಜಿ ಡಿ ಹರೀಶ್ ಗೌಡ, ಎಂ ಎಲ್ಸಿ ಗಳಾದ ಸಿ ಎನ್ ಮಂಜೇಗೌಡ, ವಿವೇಕಾನಂದ, ಮಾಜಿ ಸಚಿವ ಸಾ ರಾ ಮಹೇಶ್, ಮಾಜಿ ಶಾಸಕರಾದ ಕೆ ಮಹದೇವ್, ಅಶ್ವಿನ್ ಕುಮಾರ್ ಉಪಸ್ಥಿತಿ ಇದ್ದರು. ಆದರೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರೇ ಗೈರಾಗಿರುವುದು ಎಲ್ಲವೂ ಸರಿಯಿಲ್ಲ ಎಂಬುದನ್ನ ತೋರಿಸಿದಂತಾಗಿತ್ತು. ಮೈಸೂರಿಗೆ ಕುಮಾರಸ್ವಾಮಿ ಆಗಮಿಸಿದರೂ ಭೇಟಿ ಮಾಡದೆ ಅಂತರ ಕಾಯ್ದುಕೊಂಡ ಜಿಟಿಡಿ. ಆ ಮೂಲಕ ಸ್ವಪಕ್ಷದ ವಿರುದ್ಧವೇ ಮುನಿಸು ಮುಂದುವರಿಸಿದ್ದಾರಾ ಜಿಟಿ ದೇವೇಗೌಡ?

click me!