ಡಿಸಿಎಂ ಡಿ.ಕೆ. ಶಿವಕುಮಾರ್ ಮಹಾನಾಯಕ ಅಲ್ಲ, ಆತನ ಹೆಸರು ಸಿಡಿ ಶಿವು; ರಮೇಶ್ ಜಾರಕಿಹೊಳಿ

By Sathish Kumar KH  |  First Published Jul 28, 2024, 12:23 PM IST

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಾನಾಯಕ ಅಲ್ಲ, ಅವರು ಸಿಡಿ ಶಿವು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೀಕೆ ಮಾಡಿದ್ದಾರೆ.


ಬೆಳಗಾವಿ (ಜು.28): ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಕೆಲವರು ಮಹಾನಾಯಕ ಎಂದು ಕರೆಯುತ್ತಾರೆ. ಆದರೆ, ಅವರು ಮಹಾನಾಯಕನಲ್ಲ, ಸಿಡಿ ಶಿವು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೀಕೆ ಮಾಡಿದ್ದಾರೆ.

ಈ ಕುರಿತು ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಕೇಂದ್ರ ಸಚಿಬ ಹೆಚ್.ಡಿ. ಕುಮಾರಸ್ವಾಮಿ ಅವರು ಸೇರಿಕೊಂಡು ಡಿ.ಕೆ. ಶಿವಕುಮಾರ್ ಅವರಿಗೆ ಹೊಹ ಹೆಸರನ್ನು ನಾಮಕರಣ ಮಾಡಿದ್ದೇವೆ. ಈ ಮೂಲಕ ಅವರಿಗೆ ಇರುವ ಹೆಸರನ್ನು ಬದಲಾಯಿಸಿದ್ದೇವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಾನಾಯಕ‌ ಅಲ್ಲ, ಸಿಡಿ ಶಿವು ಎಂದು ಹೆಸರಿಟ್ಟಿದ್ದೇವೆ ಎಂದು ವಾಗ್ದಾಳಿ ಮಾಡಿದ್ದಾರೆ.

Latest Videos

undefined

ಕಾಂಗ್ರೆಸ್ ಗ್ಯಾರಂಟಿಗಳಿಗೆ ಹಣ ಒದಗಿಸಲು ಹಿಂದುಳಿದ ವರ್ಗಗಳ ಇಲಾಖೆ ಹಣಕ್ಕೂ ಕೈ ಹಾಕಿದ ಸರ್ಕಾರ?

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು, ಹೋಗುವುದು ಅವರ ಆಂತರಿಕ ವಿಷಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ ಪ್ರಮುಖ ಕಾರಣವಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬರಲು ಸಿದ್ದರಾಮಯ್ಯ ಕಾರಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ರಮೇಶ್ ಜಾರಕಿಹೊಳಿ ಕೌಂಟರ್ ಕೊಟ್ಟಿದ್ದಾರೆ. ಇನ್ನು ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ನನ್ನ ಪಾತ್ರವೂ ಇದೆ ಎನ್ನುತ್ತಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್‌ಗೆಮಹಾನಾಯಕ ಅಂದ್ರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರಿಗೆ ಅವಮಾನ ಆಗುತ್ತದೆ. ಹೀಗಾಗಿ ನಾನು ಮತ್ತು ಎಚ್‌ಡಿಕೆ ಸೇರಿ ಡಿಕೆಶಿಗೆ ಸಿಡಿ ಶಿವು ಎಂದು ನಾಮಕರಣ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿಯಲ್ಲೇ ಶುರುವಾಯಿತಾ ಪಾದಯಾತ್ರೆ ಪೊಲಿಟಿಕ್ಸ್?: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿಯೇ ಎರಡು ದೊಡ್ಡ ಹಗರಣಗಳು ನಡೆದಿವೆ. ಅದರಲ್ಲಿ ಮುಡಾ ಹಗರಣ ವಿರುದ್ಧ ಬೆಂಗಳೂರಿಂದ ಮೈಸೂರುವರೆಗೆ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರು ಬಿಜೆಪಿ ಪಾದಯಾತ್ರೆಗೆ ಪಕ್ಷದಲ್ಲಿಯೇ ಅಪಸ್ವರ ಎದ್ದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೇ ಆತಂತರಿಕವಾಗಿ ಪಾದಯಾತ್ರೆ ಪಾಲಿಟಿಕ್ಸ್ ಶುರುವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮುಡಾ ಹಗರಣ ಮುಂದಿಟ್ಟುಕೊಂಡು ಮೈಸೂರು ಪಾದಯಾತ್ರೆ ಮಾಡಲಿ ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ ತಯಾರಿ ಮಾಡಿಕೊಂಡಿದ್ದಾರೆ.

ವಿಜಯೇಂದ್ರ ಒಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಹಗರಣ ಶೀಘ್ರ ಬಹಿರಂಗ: ಡಿಕೆಶಿ ಘೋಷಣೆ

ಇದರ ಬೆನ್ನಲ್ಲಿಯೇ ಮತ್ತೊಂದೆಡೆ ವಾಲ್ಮೀಕಿ ನಿಗಮದ ಅಕ್ರಮ ವಿರೋಧಿಸಿ ರಮೇಶ್ ಜಾರಕಿಹೋಳಿ ಹಾಗೂ ವಿಜಯಪುರದ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಂದ ಮತ್ತೊಂದು ಪಾದಯಾತ್ರೆಗೆ ತಯಾರಿ ನಡೆಸಲಾಗುತ್ತಿದೆ. ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ಬಿಜೆಪಿ ಹಿರಿಯ ಶಾಸಕರ ತಯಾರಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಮತಿಗಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿ ಇಬ್ಬರೂ ಬಿಜೆಪಿ ಹೈಕಮಾಂಡ್ ಮೊರೆ ಹೋಗಿದ್ದಾರೆ.

click me!