ಮುಡಾ ಹಗರಣ ಮಾಜಿ ಅಧ್ಯಕ್ಷ ರಾಜು ನಡೆದ ಹಗರಣ ಇದು. ಈಗ ಅವನು ಕಾಂಗ್ರೆಸ್ ಸೇರಿದ್ದಾನೆ. ಇದೆಲ್ಲ ಮುಚ್ಚಿ ಹಾಕಲು ಕಾಂಗ್ರೆಸ್ ಸೇರಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಜಯಪುರ (ಜು.28): ಮುಡಾ ಹಗರಣ ಮಾಜಿ ಅಧ್ಯಕ್ಷ ರಾಜು ನಡೆದ ಹಗರಣ ಇದು. ಈಗ ಅವನು ಕಾಂಗ್ರೆಸ್ ಸೇರಿದ್ದಾನೆ. ಇದೆಲ್ಲ ಮುಚ್ಚಿ ಹಾಕಲು ಕಾಂಗ್ರೆಸ್ ಸೇರಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಮುಡಾ ಹಗರಣ ಬಿಜೆಪಿ ಅಧಿಕಾರದಲ್ಲೆ ನಡೆದ ಹಗರಣ ಎಂಬ ಕಾಂಗ್ರೆಸ್ ಮುಖಂಡ ಆರೋಪ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಮುಡಾ ಹಗರಣ ಬಳಿಕ ಬಿಜೆಪಿ ಸರ್ಕಾರ ಕೆಡವಲು ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಸೇರಿದ್ದಾನೆ. ರಾಜು ಅವನ್ನ ಅಲ್ಲಿಗೆ ಯಾರು ಕೊಟ್ಟು ಕಳಿಸಿದ್ರು? ಯಾರ ನಿರ್ದೇಶನದ ಮೇಲೆ ಕಾಂಗ್ರೆಸ್ ಸೇರಿದ? ಅವ ಯಾರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ರಾಜು ಯಡಿಯೂರಪ್ಪ ಶಿಷ್ಯ ಎಂದ ಯತ್ನಾಳ್.
undefined
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಇದ್ದಾನೋ, ರಾಜು ಇದ್ದಾನೋ, ಯಡಿಯೂರಪ್ಪ, ಮಗ ವಿಜಯೇಂದ್ರ, ಆತನ ಮಕ್ಕಳಿದ್ದಾರೋ ಯಾರೇ ಇರಲಿ ಎಲ್ಲರೂ ಸಿಕ್ಕಿಬಿಳ್ತಾರೆ. ಇದರಿಂದ ಅವರು ದಲಿತ ವಿರೋಧಿಗಳು ಅನ್ನೋದು ಜನಕ್ಕೆ ಗೊತ್ತಾಗುತ್ತೆ. ಸಿದ್ದರಾಮಯ್ಯ ಕಾಂಗ್ರೆಸ್ ವಿರೋಧಿ ಅನ್ನೋದು ಗೊತ್ತಾಗುತ್ತೆ.
ನಾನು ವಿಧಾನಸೌಧದಲ್ಲೇ ಹೇಳಿದ್ದೇನೆ. ಕೇವಲ ಸಿದ್ದರಾಮಯ್ಯರನ್ನ ಮಾತ್ರ ಟಾರ್ಗೆಟ್ ಮಾಡಬೇಡಿ. ಇವತ್ತು ನಮ್ಮ ವಿಜಯೇಂದ್ರ ಹೇಳ್ತಾರೆ, ಇದು ಕೇವಲ ಸಿದ್ದರಾಮಯ್ಯ ವಿರುದ್ಧ ಹೋರಾಟ ಅಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಅಂತಾ. ಹಾಗಾದ್ರೆ ಸಿದ್ದರಾಮಯ್ಯ ಯಾರು? ಬೇರೆನಾ? ಎಲ್ಲ ಸುಮ್ಮನೆ ಹಗರಣ ಬಗ್ಗೆ ಎಲ್ಲೂ ಮಾತಾಡಿಯೇ ಇಲ್ಲ. ವಾಲ್ಮೀಕಿ ನಿಗಮ ಹಗರಣದಲ್ಲಿ ಮೊದಲು ನಡೆದೇ ಇಲ್ಲ ಅಂದ್ರು. ಆಮೇಲೆ ಅದು ಬಯಲಾಗುತ್ತಿದ್ದಂತೆ ನಾಗೇಂದ್ರರನ್ನ ಸಮರ್ಥಿಸಿಕೊಂಡಿದ್ದ ಅಷ್ಟು ಸಚಿವರು ಗಪ್ಪಾದ್ರು. ಆ ಬಳಿಕ ಸಿದ್ದರಾಮಯ್ಯ ರಾಜೀನಾಮೆ ತಗೊಂಡ್ರು. ಆದರೆ ಭ್ರಷ್ಟಾಚಾರ ನಡೆದಿದೆ ಎಂದಾಗ ವಾಲ್ಮೀಕಿ ನಿಗಮ ಅಧ್ಯಕ್ಷರನ್ನ ಸಚಿವ ಸಂಪುಟದಿಂದ ತಕ್ಷಣ ಕಿತ್ತುಹಾಕಬೇಕಿತ್ತು. ಆಗ ನಿಜವಾದ ಸಿದ್ದರಾಮಯ್ಯ ಅಂತಾ ಗೊತ್ತಾಗ್ತಿತ್ತು. ಇದರಲ್ಲಿ ಸರ್ಕಾರದ ಕೈವಾಡ ಇರುವುದು ಬಯಲಾಗಿದೆ. ಈ ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಸಿಬಿಐನಿಂದ ಮಾತ್ರ ಸಮಗ್ರ ತನಿಖೆ ನಡೆಸಲು ಸಾಧ್ಯ ಎಂದರು.
ಲೋಕಸಭಾ ಚುನಾವಣೆ ಬಂದಾಗ ಯಾಕೆ ರಾಜು ಕಾಂಗ್ರೆಸ್ ಸೇರಿದ ಅಂದ್ರೆ ಮೈಸೂರು, ಚಾಮರಾಜನಗರ ಗೆಲ್ಲಲು ಕಾಂಗ್ರೆಸ್ ಗೆ ಇನ್ ಡೈರೆಕ್ಟ್ ಆಗಿ ಸಪೋ್ಟ್ ಮಾಡಲು. ಹೊಂದಾಣಿಕೆ ಅಂತಾ ಹೇಳಿದ್ನಲ್ಲ ಅದಕ್ಕೆ ಇದೇ ಸಾಕ್ಷಿ. ಇವರೆಲ್ಲ ಕೂಡಿ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆಟ ಆಡಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅಹ್ಮದ್ ಖಾನ್ ಎಲ್ಲರೂ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿದ್ದಾರೆ. ರಾಜ್ಯದಲ್ಲಿ ಅನೇಕ ಜನರು ಸೋಲು ಇವರೇ ಕಾರಣ. ಇದು ಎಲ್ಲ ಜನರಿಗೆ ಗೊತ್ತಾಗಿದೆ ಸುಮ್ಮನೆ ಎಲ್ಲ ಒಪ್ಪಿಕೊಂಡು ಹಿಂದೆ ಸರಿದ್ರೆ ಒಳ್ಳೇದು ಎಂದು ಸಲಹೆ ನೀಡಿದರು.
ರಾಮನಗರ ಇನ್ಮುಂದೆ 'ಬೆಂಗಳೂರು ದಕ್ಷಿಣ; 17 ವರ್ಷಗಳಲ್ಲೇ ಹೆಸರು ಬದಲು!
ಕುಮಾರಸ್ವಾಮಿ ಹಗರಣ ಮಾಡಿದ್ರೆ ಅವರದೂ ತನಿಖೆ ಆಗಲಿ. ಯಾರಾರು ಕಳ್ಳತನ ಮಾಡಿದ್ದಾರೆ ಅವರೆಲ್ಲರದು ತನಿಖೆ ಮಾಡಬೇಕು. ಸರಕಾರ ನಿಮ್ಮದೇ ಇದೆ. 14 ತಿಂಗಳು ನೀವು ಕತ್ತೆ ಕಾಯ್ತಾ ಇದ್ದರಾ? ಈಗ ಭೋವಿ ನಿಗಮ, ತಾಂಡಾ ಅಭಿವೃದ್ಧಿಯಲ್ಲಿ ಹಗರಣ ಆಗಿದೆ ಅಂತಾ ಹೇಳ್ತಾ ಇದ್ದೀರಿ. ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಈಗ ಹೇಳ್ತಾ ಇದ್ದೀರಿ. ಇಷ್ಟ ದಿನ ಯಾಕೆ ಸುಮ್ಮನೆ ಕುಳಿತಿದ್ರಿ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.