ಮೋದಿ ಹಕ್ಕುಪತ್ರ ನೀಡಿರೋದು ಚುನಾವಣೆ ಗಿಮಿಕ್‌: ಬೆಳಮಗಿ

By Kannadaprabha NewsFirst Published Jan 21, 2023, 10:00 PM IST
Highlights

ಈಗಾಗಲೇ ನೂರಾರು ವರ್ಷಗಳಿಂದ ತಾಂಡಾಗಳಲ್ಲಿ ನಮ್ಮ ಪೂರ್ವಜರು ವಾಸ ಮಾಡುತ್ತಿರುವ ಮನೆಗಳು ಆಯಾ ಗ್ರಾಮ ಪಂಚಾಯ್ತಿಯಲ್ಲಿ ದಾಖಲೆ ಪತ್ರ ಹೊಂದಿದ್ದಾರೆ. ಅಂತಹ ಮನೆಗಳಿಗೂ ಹಕ್ಕುಪತ್ರ ನೀಡುವುದು ಚುನಾವಣೆ ಗಿಮಿಕ್‌: ಮಾಜಿ ಸಚಿವ ರೇವು ನಾಯಕ್‌ ಬೆಳಮಗಿ

ಕಮಲಾಪುರ(ಜ.21): ಪ್ರಧಾನಮಂತ್ರಿ ನರೇಂದ್ರ ಮೋದಿ ಕಲಬುರಗಿ ಜಿಲ್ಲೆಗೆ ಆಗಮಿಸುವುದಕ್ಕೆ ಸ್ವಾಗತ. ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗಿದೆ ಎನ್ನುವ ಮೂಲಕ ಬಂಜಾರ ಜನರಿಗೆ ನಿವೇಶನದ ಹಕ್ಕುಪತ್ರ ನೀಡಿ ನೂರಾರು ವರ್ಷಗಳಿಂದ ಇದ್ದ ಹಕ್ಕನ್ನು ಸರ್ಕಾರ ಕಸಿಯುತ್ತಿದೆ ಎಂದು ಮಾಜಿ ಸಚಿವ ರೇವು ನಾಯಕ್‌ ಬೆಳಮಗಿ ಆರೂಪಿಸಿದ್ದಾರೆ. ಪಟ್ಟಣದಲ್ಲಿ ಮಾತನಾಡಿದ ಅವರು, ಈಗಾಗಲೇ ನೂರಾರು ವರ್ಷಗಳಿಂದ ತಾಂಡಾಗಳಲ್ಲಿ ನಮ್ಮ ಪೂರ್ವಜರು ವಾಸ ಮಾಡುತ್ತಿರುವ ಮನೆಗಳು ಆಯಾ ಗ್ರಾಮ ಪಂಚಾಯ್ತಿಯಲ್ಲಿ ದಾಖಲೆ ಪತ್ರ ಹೊಂದಿದ್ದಾರೆ. ಅಂತಹ ಮನೆಗಳಿಗೂ ಹಕ್ಕುಪತ್ರ ನೀಡುವುದು ಚುನಾವಣೆ ಗಿಮಿಕ್‌ ಎಂದರು.

ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ತಾಂಡಗಳಲ್ಲಿ ದಾಖಲೆ ಪತ್ರ ಇರುವ ಮನೆಗಳಿಗೆ ಹಕ್ಕು ಪತ್ರ ನೀಡಬೇಡಿ. ಅಧಿಕೃತ ಮನೆ ದಾಖಲೆ ಪತ್ರ ಇರುವವರನ್ನು ಹೊರತುಪಡಿಸಿ ಸರ್ಕಾರಿ ಗೈರಾಣ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವವರಿಗೆ ನಿವೇಶನ ಹಕ್ಕುಪತ್ರ ವಿತರಣೆ ಮಾಡಿ, ಮನೆ ಕಟ್ಟಿಸಿ ಕೊಡಲಿ ಎಂದರು.

PSI Recruitment Scam: ಪೊಲೀಸರ ತಳ್ಳಿ ಪಿಎಸ್‌ಐ ಹಗರಣ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಎಸ್ಕೇಪ್‌

ಅನೇಕ ಷರತ್ತುಗಳನ್ನು ವಿಧಿಸಿ ಹಕ್ಕು ಪತ್ರ ನೀಡಿ ಸಂತೋಷವಾಗಿ ಮನೆಯಲ್ಲಿ ವಾಸ ಮಾಡುತ್ತಿರುವವರ ಹಕ್ಕಿಗೆ ಮತ್ತು ನೆಮ್ಮದಿಗೆ ಸರಕಾರ ಧಕ್ಕೆ ಉಂಟು ಮಾಡುತ್ತಿದೆ. ಹಕ್ಕುಪತ್ರ ನೀಡಿ 15 ವರ್ಷಗಳ ಕಾಲ ಮನೆ ಮಾರಾಟ ಅಥವಾ ಬಾಡಿಗೆ ಕೊಡಬಾರದು ಎಂಬ ಶರತು ವಿಧಿಸಿದ್ದು ಅಪ್ಪಟ ಅನ್ಯಾಯ. ಜನರು ತಮಗೆ ಕಷ್ಟ ಒದಗಿದ್ದರೆ ಮನೆ ಅಡಮಾನ ಇಡುವುದು, ಬಾಡಿಗೆ ಕೊಡುವುದು, ಮಾರಾಟ ಮಾಡುವುದು ಸಾಮಾನ್ಯ. ಈ ಹಕ್ಕನ್ನೇ ಕಿತ್ತುಕೊಳ್ಳುತ್ತಿರುವುದು ಸರ್ಕಾರ ಬಂಜಾರ ಮುಗ್ಧ ಜನರಿಗೆ ವಂಚಿಸಿದೆ ಎಂದರು.

ಜಿಲ್ಲೆಯಲ್ಲಿ ತೊಗರಿ ಸೇರಿ ಇನ್ನುಳಿದ ಎಲ್ಲ ಬೆಳೆಗಳು ಸಂಪೂರ್ಣ ಹಾಳಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಟಿರೋಗದಿಂದ ಹಾಳಾಗಿರುವ ತೊಗರಿ ಬೆಳೆಗೆ ಬಿಡುಗಾಸು ಪರಿಹಾರ ಬಿಡಿಗಾಸು ಪರಿಹಾರ ನೀಡಿಲ್ಲ. ಇನ್ನು ಸಹಾಯಕ್ಕೆ ಬರಬೇಕಾದ ರಾಜ್ಯ ಸರ್ಕಾರ ಇದ್ದು ಸುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಹಾಕುತ್ತಿದ್ದ ಸಿಎಂ ಬಸವರಾಜ್‌ ಬಮ್ಮಾಯಿಗೆ ನಿಜವಾಗಲೂ ದಮ್ಮ ತಾಕತ್ತು ಇದ್ದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರತಿ ಎಕ್ಕರಿಗೆ ಕನಿಷ್ಠ 25,000 ರು. ಬೆಳೆ ಪರಿಹಾರ ಘೋಷಿಸಲು ಒತ್ತಾಯ ಮಾಡಬೇಕು. ಆಗ ಅವರ ದಮ್ಮು ತಾಕತ್ತು ಎಷ್ಟಿದೆ ಎಂಬುದು ರಾಜ್ಯದ ಜನರಿಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.

click me!