ಮಾಜಿ ಶಾಸಕ ಮೊಯಿದ್ದೀನ್ ಬಾವಾ ಬೈಕ್ ರ್ಯಾಲಿ ನಡೆಸಲು ಕೊಟ್ಟ ಉಚಿತ ಪೆಟ್ರೋಲ್ ಹಾಕಿ ಉಚಿತ ಪೆಟ್ರೋಲ್ ಇದೆ ಅಂತ ಬೇಕಾಬಿಟ್ಟಿ ತಿರುಗಾಡಿ ನಮ್ಮ ಹಿಂದೂ ಹೆಣ್ಮಕ್ಕಳನ್ನು ಲವ್ ಜಿಹಾದ್ ಮಾಡಲು ಮುಂದಾದರೆ ನಿಮ್ಮನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲೇ ಕಳುಹಿಸುತ್ತೇನೆ.
ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಜ.21): ಮಾಜಿ ಶಾಸಕ ಮೊಯಿದ್ದೀನ್ ಬಾವಾ ಬೈಕ್ ರ್ಯಾಲಿ ನಡೆಸಲು ಕೊಟ್ಟ ಉಚಿತ ಪೆಟ್ರೋಲ್ ಹಾಕಿ ಉಚಿತ ಪೆಟ್ರೋಲ್ ಇದೆ ಅಂತ ಬೇಕಾಬಿಟ್ಟಿ ತಿರುಗಾಡಿ ನಮ್ಮ ಹಿಂದೂ ಹೆಣ್ಮಕ್ಕಳನ್ನು ಲವ್ ಜಿಹಾದ್ ಮಾಡಲು ಮುಂದಾದರೆ ನಿಮ್ಮನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲೇ ಕಳುಹಿಸುತ್ತೇನೆ ಎಂದು ಮುಸ್ಲಿಂ ಯುವಕರ ವಿರುದ್ದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಗುಡುಗಿದ್ದಾರೆ.
ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ. ಗೋಹತ್ಯೆಯನ್ನು ಹಿಂದೆಯೂ ನಿಲ್ಲಿಸಿದ್ದೇವೆ, ಮುಂದೆಯೂ ನಿಲ್ಲಿಸುತ್ತೇವೆ. ಹಿಂದೆ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಯುವಕ ಪೊಲೀಸ್ ಗುಂಡೇಟಿಗೆ ಬಲಿಯಾದಾಗ ಆತನಿಗೆ 10 ಲಕ್ಷ ಕೊಟ್ಟಿದ್ದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಈಗ ಹಿಂದೂಗಳ ಮನೆಗೆ ಹೋಗಿ ಸಾಂತ್ವನ ನೀಡುತ್ತಿದ್ದಾರೆ ಎಂದು ಹೇಳಿದರು.
ಲವ್ ಜಿಹಾದ್ ವಿರುದ್ಧ VHP ಸಮರ: 20 ಜನರ ಟೀಂ ರಚನೆ
ಬೈಕ್ ರ್ಯಾಲಿಗೆ ಉಚಿತ ಪೆಟ್ರೋಲ್: ಸುರತ್ಕಲ್ ನಲ್ಲಿ ನಡೆದ ಬೈಕ್ ರ್ಯಾಲಿಗೆ ಬರಲು ಉಚಿತ ಪೆಟ್ರೋಲ್ ಹಾಕಲು ಚೀಟಿಯೊಂದನ್ನು ಜೋಕಟ್ಟೆಯ ಹುಡುಗರಿಗೆ ನೀಡಿದ್ದರು. ಅವರ ಭವಿಷ್ಯದಲ್ಲೇ ಬೌನ್ಸ್ ಆಗದೇ ಇರುವುದು ಈ ಚೀಟಿ ಮಾತ್ರ. ಉಚಿತ ಪೆಟ್ರೋಲ್ ನಿಂದ ನೂರಿನ್ನೂರು ಬೈಕ್ ಗಳು ಬಂದಿತ್ತು. ನೀವು ಪೆಟ್ರೋಲ್ ಹಾಕಿಸ್ಕೊಳ್ಳಿ, ರ್ಯಾಲಿ ಮಾಡಿ ಏನ್ ಬೇಕಾದರೂ ಮಾಡಿ. ಆದರೆ ಅದೇ ಉಚಿತ ಪೆಟ್ರೋಲ್ ಇದೆ ಅಂತ ಬೇಕಾಬಿಟ್ಟಿ ತಿರುಗಾಡಿ ನಮ್ಮ ಹಿಂದೂ ಹೆಣ್ಮಕ್ಕಳನ್ನು ಲವ್ ಜಿಹಾದ್ ಮಾಡ್ತೇವೆ ಅಂತ ಎಂದುಕೊಂಡರೆ ನಿಮ್ಮನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲೇ ಕಳಿಸ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲವ್ ಜಿಹಾದ್: ನಳಿನ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಕಿಡಿ
ಅನ್ಯಾಯವಾದರೆ ನಾನು ಕೈಕಟ್ಟಿ ಕೂರುವುದಿಲ್ಲ: ನನ್ನನ್ನು ಕೋಮುವಾದಿ ಎಂದು ಕರೆಯುತ್ತಾರೆ. ನಾನು ಶಾಸಕನಾಗಿ ಹಿಂದೂಗಳು ಮಾತ್ರವಲ್ಲ ಕ್ರೈಸ್ತ, ಮುಸ್ಲಿಂ ಎಲ್ಲರ ಕೆಲಸವನ್ನು ಮಾಡಿಕೊಡುತ್ತೇನೆ. ನಿಮ್ಮಷ್ಟಕ್ಕೆ ನೀವಿದ್ದರೆ ನಿಮ್ಮ ಜೊತೆ ನಾನಿದ್ದೇನೆ. ನನ್ನ ಸಮಾಜಕ್ಕೆ ಅನ್ಯಾಯವಾದರೆ ನಾನು ಕೈಕಟ್ಟಿ ಕೂರುವುದಿಲ್ಲ. ನನಗೆ ರಾಷ್ಟ್ರಭಕ್ತರ ವೋಟ್ ಸಾಕು, ದೇಶದ್ರೋಹಿಗಳ ವೋಟ್ ಬೇಡ. ದೇಶದ ಬಗ್ಗೆ ಪ್ರೀತಿ, ಕಾಳಜಿ ಇರುವವರು ನನಗೆ ವೋಟ್ ಮಾಡಿದರೆ ಸಾಕು. ದೇಶಕ್ಕೆ ದ್ರೋಹ ಎಸಗುವವರು ವೋಟ್ ಹಾಕುವುದು ಬೇಡ ಎಂದರು.