ಮಾಜಿ ಸಚಿವ ಮಾಲಕರೆಡ್ಡಿ ಕಾಂಗ್ರೆಸ್‌ಗೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್!

By Gowthami K  |  First Published Apr 1, 2023, 1:11 PM IST

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಬಿಜೆಪಿ ಮತ್ತೊಂದು ವಿಕೆಟ್ ಪತನವಾಗೋದು ಪಕ್ಕಾ ಆಗಿದೆ.  ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್ ಸೇರೋದು ಖಚಿತವಾಗಿದೆ.


ಯಾದಗಿರಿ (ಏ.1): ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಬಿಜೆಪಿ ಮತ್ತೊಂದು ವಿಕೆಟ್ ಪತನವಾಗೋದು ಪಕ್ಕಾ ಆಗಿದೆ.  ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್ ಸೇರೋದು ಖಚಿತವಾಗಿದೆ. ಈ ಮೂಲಕ ಬಿಜೆಪಿ ಗುಡ್ ಬೈ ಹೇಳಲಿದ್ದಾರೆ. ಇವತ್ತು ಮಧ್ಯಾಹ್ನದ ನಂತರ ಮಾಲಕರೆಡ್ಡಿ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ತಮ್ಮ ಪುತ್ರಿಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಗಿಳಿಸಲು ಮುಂದಾಗಿರುವ ಮಾಲಕರೆಡ್ಡಿ.

ಮಾರ್ಚ್‌ 31 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿರುವ ಮಾಲಕರೆಡ್ಡಿ ಅವರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಖರ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ ಬಿಜೆಪಿಗೆ ರಾಜೀನಾಮೆ ನೀಡಲು ತಯಾರಾಗಿದ್ದಾರೆ. ಇವತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ.

Latest Videos

undefined

ಮಾಡಾಳು ವಿರೂಪಾಕ್ಷಪ್ಪ ಲೋಕಾಯುಕ್ತ ಕಸ್ಟಡಿ ಇಂದಿಗೆ ಅಂತ್ಯ, ತನಿಖಾಧಿಕಾರಿಗಳಿಂದ

ಕಾಂಗ್ರೆಸ್ ನಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಲಕರೆಡ್ಡಿ ಅವರು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನ ಸೋಲಿಸಿದ ರೂವಾರಿಗಳಲ್ಲಿ ಮಾಲಕರೆಡ್ಡಿ ಕೂಡ ಒಬ್ಬರು. ಆದ್ರೆ ಈಗ ಹಳೆ ದ್ವೇಷ ಮರೆತು ಮತ್ತೆ ಘರ್ ವಾಪ್ಸಿ ಆಗಲು ಮುಂದಾಗಿದ್ದಾರೆ.

Karnataka election 2023: ಕಾಂಗ್ರೆಸ್‌, ಬಿಜೆಪಿ ಕಾಲೆಳೆಯುವ ಆಟ ಜೋರು!

ಬಿಜೆಪಿಯಲ್ಲೇ ಇದ್ದು ತಮ್ಮ ಪುತ್ರಿ ಅನುರಾಗಗೆ ಯಾದಗಿರಿ ಮತಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅನುರಾಗ ಮಾಲಕರೆಡ್ಡಿ ಹೆಸರಲ್ಲಿ ಟಿಕೆಟ್ ಬಯಸಿ ಅರ್ಜಿ ಹಾಕಿದ್ರು. ಟಿಕೆಟ್ ಸಿಗುವ ಸಾಧ್ಯತೆ ಹಿನ್ನೆಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.

ಕ್ಷೇತ್ರದ ಹಿನ್ನೆಲೆ: 1957ರಿಂದ ಈವರೆಗೆ ಕಾಂಗ್ರೆಸ್‌ ಗೆದ್ದಿದ್ದೇ ಹೆಚ್ಚು. ದಿ.ಜಗನ್ನಾಥರಾವ್‌ ವೆಂಕಟರಾವ್‌, ದಿ.ಕೋನಪ್ಪ ರುದ್ರಪ್ಪ ನಾಡಗೌಡ, ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತ ದಿ.ಸದಾಶಿವರೆಡ್ಡಿ ಕಂದಕೂರರಂತಹ ರಾಜಕೀಯ ಮುತ್ಸದ್ದಿಗಳ ಸ್ಪರ್ಧೆ ಕಂಡ ನಾಡಿದು. ಪ್ರಸ್ತುತ ಬಿಜೆಪಿಗೆ ಕ್ಷೇತ್ರ ಮಣೆ ಹಾಕಿದೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಾಂತರದ ಪರ್ವ ಹೆಚ್ಚುತ್ತಿದ್ದು, ಟಿಕೆಟ್‌ ಹಂಚಿಕೆ ಕುತೂಹಲ ಮೂಡಿಸಿದೆ.

ಜಾತಿ ಲೆಕ್ಕಾಚಾರ: ಒಟ್ಟು 2,31,116 ಮತದಾರರ ಪೈಕಿ ರೆಡ್ಡಿ ಜನಾಂಗದ್ದೇ ಈ ಕ್ಷೇತ್ರದಲ್ಲಿ ಪಾರುಪತ್ಯ. ಉಳಿದಂತೆ, ಲಿಂಗಾಯತರು, ಅಲ್ಪಸಂಖ್ಯಾತರು, ದಲಿತರು, ಹಾಲುಮತಸ್ಥರು, ಕಬ್ಬಲಿಗರು, ಪರಿಶಿಷ್ಟಪಂಗಡದ ಮತಗಳು ಅಭ್ಯರ್ಥಿಯ ಗೆಲುವಲ್ಲಿ ಮಹತ್ತರ ಪಾತ್ರೆ ವಹಿಸಲಿವೆ. ಜೊತೆಗೆ, ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ಈ ಕ್ಷೇತ್ರದ ವಿಶೇಷ.

click me!