ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು: ಸಚಿವ ಕೋಟಾ

By Kannadaprabha News  |  First Published Apr 1, 2023, 12:45 PM IST

ರಾಜ್ಯದಲ್ಲಿ ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು ಎಂದು  ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಉದ್ಘಾಟಿಸಿದರು.


ಜೋಯಿಡಾ (ಏ.1) : ಜೋಯಿಡಾ ತಾಲೂಕಿನ ಜಗಲಬೇಟದಲ್ಲಿ ಬಿಜೆಪಿಯಿಂದ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ(Narendra Modi) ದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಬಿಜೆಪಿ(BJP)ಯಲ್ಲಿ ಯಾರು ಮಂತ್ರಿಗಳಾಬೇಕು ಎಂಬುದು ಮುಖ್ಯವಲ್ಲ, ನಮ್ಮ ದೇಶ ಸಮೃದ್ಧವಾಗಬೇಕು. ನಮ್ಮ ಸರ್ಕಾರದ ಎಲ್ಲ ಜನರ ಪರವಾಗಿದೆ. ನಾವು ಎಂದಿಗೂ ಕಾಂಗ್ರೆಸ್‌ನವರಂತೆ ಗ್ಯಾರಂಟಿ ಕಾರ್ಡ್‌(caCongress guaranteerd) ನೀಡಿಲ್ಲ. ಜನರಿಗೆ ನಮ್ಮ ಪಕ್ಷದ ಬಗ್ಗೆ ವಿಶ್ವಾಸವಿದೆ. ನಮ್ಮ ಪಕ್ಷಕ್ಕೆ ಯಾವುದೇ ಗ್ಯಾರಂಟಿ ಕಾರ್ಡ್‌ ಬೇಡ. ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ. ತನ್ನ ಸಂಪೂರ್ಣ ಬದುಕು ದೇಶಕ್ಕಾಗಿ ಎಂಬ ಮನಸ್ಸು ನರೇಂದ್ರ ಮೋದಿ ಅವರದ್ದು. ಕಾಶ್ಮೀರದಲ್ಲಿ 370 ಆ್ಯಕ್ಟ್ ರದ್ದು ಮಾಡಿ, ಅಲ್ಲಿ ಜನರಿಗೆ ನ್ಯಾಯ ಒದಗಿಸಿದ್ದಾರೆ. ದೇಶಕ್ಕೆ ಭದ್ರತೆ, ಶಕ್ತಿ, ನ್ಯಾಯ, ಕೊಡುವುದೇ ನಮ್ಮ ಪಕ್ಷದ ಗುರಿ ಎಂದರು.

Latest Videos

undefined

KARNATAKA ELECTION 2023: ಕಾಂಗ್ರೆಸ್‌, ಬಿಜೆಪಿ ಕಾಲೆಳೆಯುವ ಆಟ ಜೋರು!

ಮಾಜಿ ಶಾಸಕ ಸುನೀಲ್‌ ಹೆಗಡೆ ಮಾತನಾಡಿ, ಬಿಜೆಪಿ ಕುಟುಂಬ ಆಧರಿತ ಪಕ್ಷವಲ್ಲ. ಇದು ದೇಶಪ್ರೇಮ ಹೊಂದಿದವರ ಪಕ್ಷ. ದೇಶದ ಹಿತಕ್ಕಾಗಿ ದೇಶದ ರಕ್ಷಣೆಗಾಗಿ ಬಿಜೆಪಿ ಆಡಳಿತಕ್ಕೆ ಬರುವುದು ಅವಶ್ಯವಾಗಿದೆ ಎಂದರು.

ಜಗಲಬೇಟ ಗ್ರಾಪಂ ಅಧ್ಯಕ್ಷ ಗಿರೀಶ್‌ ನಾಯ್ಕ ಹಾಗೂ ಅವರ ಜತೆ 225 ಜನರನ್ನು ಬಿಜೆಪಿಗೆ ಸೇರ್ಪಡೆ ಮಾಡಲಾಯಿತು.

ಜೋಯಿಡಾ ಬಿಜೆಪಿ ಅಧ್ಯಕ್ಷ ಸಂತೋಷ ರೇಡ್ಕರ್‌, ತುಕಾರಾಂ ಮಾಂಜ್ರೇಕರ್‌, ಶಿವಾಜಿ ಗೋಸಾವಿ, ದೀಪಕ ದೇಸಾಯಿ, ಹಳಿಯಾಳ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೇಕರ, ಇತರರು ಉಪಸ್ಥಿತರಿದ್ದರು.

click me!