Shivamogga: ಭಂಡರಿಗೆ ಭಂಡತನದ ಉತ್ತರವೇ ಸರಿ: ಈಶ್ವರಪ್ಪ

By Govindaraj SFirst Published Aug 21, 2022, 1:32 AM IST
Highlights

‘ಭದ್ರಾವತಿ ಶಿವಮೊಗ್ಗದಲ್ಲಿ ಗಲಾಟೆಗೆ ಈಶ್ವರಪ್ಪರೇ ಕಾರಣ’ ಎಂದರೆ ಹೌದು... ಭದ್ರಾವತಿ, ಶಿವಮೊಗ್ಗದಲ್ಲಿ ಗಲಾಟೆ ಮಾಡಿರೋದು ನಾನೇ, ಸಾವರ್ಕರ್‌ ಭಾವಚಿತ್ರ ಹರಿದಿದ್ದು ನಾನೇ, ಪ್ರೇಮ್‌ ಸಿಂಗ್‌ಗೆ ಚಾಕು ಹಾಕಿಸಿದ್ದು ನಾನೇ, ಈ ಗಲಭೆಗೆ ನಾನೇ ಕಾರಣ ಅಂತ ಒಪ್ಪೊಕ್ಕೊತಿನಿ. 

ಶಿವಮೊಗ್ಗ (ಆ.21): ನಗರದ ಸಿಟಿ ಸೆಂಟರ್‌ ಮಾಲ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅಳವಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ ವೇಳೆ ಪಾಲಿಕೆ ಸದಸ್ಯೆ ಪತಿಯೊಬ್ಬ ಸಾವರ್ಕರ್‌ ಭಾವಚಿತ್ರವನ್ನು ತೆಗೆಸಿದ್ದ ಇದು ಕಣ್ಣೆದುರಿಗೆ ಕಾಣುತ್ತದೆ. ಆದರೂ, ಕ್ಷೇಮೆ ಕೇಳುವ ಸೌಜನ್ಯ ಇಲ್ಲದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ‘ಭದ್ರಾವತಿ ಶಿವಮೊಗ್ಗದಲ್ಲಿ ಗಲಾಟೆಗೆ ಈಶ್ವರಪ್ಪರೇ ಕಾರಣ’ ಎಂದರೆ ಹೌದು... ಭದ್ರಾವತಿ, ಶಿವಮೊಗ್ಗದಲ್ಲಿ ಗಲಾಟೆ ಮಾಡಿರೋದು ನಾನೇ, ಸಾವರ್ಕರ್‌ ಭಾವಚಿತ್ರ ಹರಿದಿದ್ದು ನಾನೇ, ಪ್ರೇಮ್‌ ಸಿಂಗ್‌ಗೆ ಚಾಕು ಹಾಕಿಸಿದ್ದು ನಾನೇ, ಈ ಗಲಭೆಗೆ ನಾನೇ ಕಾರಣ ಅಂತ ಒಪ್ಪೊಕ್ಕೊತಿನಿ. 

ಭಂಡರಿಗೆ ಭಂಡತನದ ಉತ್ತರ ಕೊಡಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸ್ತವ ಸ್ಥಿತಿ ಕಣ್ಣ ಮುಂದೆ ಇದ್ದರೂ ಗಲಾಟೆ ಮಾಡಿದ್ದು ಯಾರು? ಚಾಕು ಹಾಕಿದ್ದು ಯಾರು? ಎಂದು ಗೊತ್ತಿದ್ದು ನಾನೇ ಅಂದ್ರೆ ನಾನೇ.. ಭಂಡರಿಗೆ ಏನು ಹೇಳೊಕೆ ಆಗುತ್ತೆ ಅದಕ್ಕೆ ನಾನೇ ಅಂತ ಹೇಳಬೇಕು ಎಂದು ಕುಟುಕಿದರು. ಕಾಂಗ್ರೆಸ್‌ ಪಕ್ಷ ಬದುಕಿದೆ ಎಂದು ತೋರಿಸಲು ಹೀಗೆ ಮಾಡುತ್ತಿದ್ದಾರೆ. ಡಿಕೆಶಿ , ಸಿದ್ದರಾಮಯ್ಯ ಸಿಎಂ ಆಗಲು ಬಡಿದಾಡುತ್ತಾ ಇದ್ದಾರೆ. ಚಿತ್ರದುರ್ಗದಲ್ಲಿ ಜಾತಿ ಸಭೆಯಲ್ಲೂ ಇಬ್ಬರು ಬಡಿದಾಡಿದ್ದಾರೆ. 

Latest Videos

ಗೃಹ ಸಚಿವ, ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಇಬ್ಬರ ಬಂಧನ

ಡಿ.ಕೆ.ಶಿವಕುಮಾರ್‌, ಎಚ್‌.ಡಿ.ಕುಮಾರಸ್ವಾಮಿ ಅವರು ‘ನಾನೇ ಸಿಎಂ’ ಎಂದು ಬಡಿದಾಡಿದ್ದಾರೆ. ಅವರ ಸ್ವಾಮಿಗಳು ಇಬ್ಬರಲ್ಲಿ ಒಬ್ಬರು ಸಿಎಂ ಆಗಿ ಅಂತ ಹೇಳ್ತಾರೆ. ಸಿದ್ದರಾಮಯ್ಯ ನನ್ನ ಬಿಟ್ಟರೆ ಪ್ರಪಂಚದಲ್ಲಿ ಸಿಎಂ ಆಗೋರು ಬೇರೆ ಇಲ್ಲ ಅಂತಾರೆ. ಅಧಿಕಾರದ ಅಸೆಗೆ ಈ ದೇಶ ತುಂಡಾಯ್ತು, ಅಧಿಕಾರದ ಪಾಕಿಸ್ತಾನ ಹಿಂದೂಸ್ತಾನ ಆಯ್ತು, ಹಿಂದಿನ ಕೆಲ ಕಾಂಗ್ರೆಸ್‌ ನಾಯಕರು ತುಂಡು ಮಾಡಿದರು. ಮತ್ತೆ ಕೆಲ ಕಾಂಗ್ರೆಸ್‌ ನಾಯಕರು ಆಖಂಡ ಭಾರತದ ಕನಸು ಕಂಡಿದ್ದರು. ಅದೇ ದಿಕ್ಕಿನಲ್ಲಿ ಅಧಿಕಾರದ ಅಸೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಮುಂದುವರಿದಿದ್ದಾರೆ ಎಂದು ಈಶ್ವರಪ್ಪ ಹರಿಹಾಯ್ದರು.

ಪರಸ್ಪರ ಹೊಗಳುವುದಕ್ಕೆ ರಾಜಕಾರಣ ಇರುವುದಲ್ಲ: ಕೊಡಗಿನಲ್ಲಿ ಸಿದ್ದರಾಮಯ್ಯ ಮೇಲೆ ಮೊಟ್ಟೆಎಸೆತ ಪ್ರಕರಣ ಸಂಬಂಧ ಸಿಎಂ ಬಸವರಾಜ್‌ ಬೊಮ್ಮಾಯಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಅವರು ಈ ರೀತಿ ಮಾಡಬಾರದು ಎಂದಿದ್ದಾರೆ. ಅದಕ್ಕೆ ನಾನೂ ಬದ್ಧ. ನಾನೇನೂ ಹೊಸದಾಗಿ ಹೇಳೊಲ್ಲ. ರಾಜಕಾರಣದಲ್ಲಿ ಒಬ್ಬರಿಗೊಬ್ಬರು ಹೊಗಳುವುದಕ್ಕೆ ಇರೊದು ಅಲ್ಲ. ಅವರು ಬೈಯೋದು ರಾಜಕಾರಣ, ನಾವು ತಪ್ಪು ಮಾಡಿದ್ದನ್ನು ತಿದ್ದುವುದು. ನಾವು ಮಾಡಿದ್ದನ್ನು ಅವರು ಹೊಗೊಳಲ್ಲ, ಅವರು ಮಾಡಿದ್ದನ್ನು ನಾವು ಹೊಗೊಳೊಲ್ಲ. ಆಡಳಿತ ದೃಷ್ಟಿಯಿಂದ ಮಾಡೋ ಟೀಕೆ ಸ್ವೀಕರಿಸುತ್ತೇನೆ ಎಂದು ಕೆ.ಎಸ್‌.ಈಶ್ವರಪ್ಪ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಎ​ಸ್‌ವೈ ನೆತ್ತರು ಜಿಲ್ಲೆಗೆ ನೀರಾ​ವ​ರಿ ರೂಪ​ದಲ್ಲಿ ಪರಿ​ವ​ರ್ತ​ನೆ: ಸಂಸದ ರಾಘ​ವೇಂದ್ರ

ಸಿದ್ದರಾಮಯ್ಯ ಎಂಬ ಕೆಟ್ಟ ಪದ ಕೇಳಿ ಸಾಕಾಗಿ ಹೋಗಿದೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದು ಒಂದು ಕೆಟ್ಟ ಹೆಸರು. ಇಂಥ ರಾಷ್ಟ್ರದ್ರೋಹಿಯನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದರು. ‘ಸಿದ್ದರಾಮಯ್ಯ’ ಎನ್ನುವ ಕೆಟ್ಟ ಪದ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿದೆ. ಅವರ ಹೆಸರು ಹೇಳಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ ಅನಿಸುತ್ತದೆ. ಅವರ ಬಗ್ಗೆ ಈ ಹಿಂದೆ ಅಲ್ಪಸ್ವಲ್ಪ ಗೌರವ ಇತ್ತು. ಮುಸಲ್ಮಾನರ ಏರಿಯಾದಲ್ಲೇಕೆ ವೀರ ಸಾವರ್ಕರ್‌ ಭಾವಚಿತ್ರ ಹಾಕಬೇಕಿತ್ತು ಎಂದು ಯಾವಾಗ ಹೇಳಿಕೆ ನೀಡಿದರೋ ನಿಜಕ್ಕೂ ಅವರ ಮೇಲೆ ಬೇಸರವಾಗಿದೆ ಎಂದರು.

click me!