ಬಿಜೆಪಿ ಸಚಿವ ಸೇರಿ ಇಬ್ಬರು ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ: ಕೆ.ಎನ್.ರಾಜಣ್ಣ

By Govindaraj S  |  First Published Aug 20, 2022, 9:28 PM IST

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಮಾತಗಳು ಕೂಡ ಜೋರಾಗಿಯೇ ಕೇಳಿಸತೊಡಗಿವೆ. ಈ ನಡುವೆ ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಈ ಪಕ್ಷಾಂತರದ ಮಾತುಗಳಿಗೆ ಪುಷ್ಠಿ ಕೊಡುವಂತಹ ಹೇಳಿಕೆಯೊಂದನ್ನ ನೀಡಿದ್ದಾರೆ.


ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಆ.20): ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಮಾತಗಳು ಕೂಡ ಜೋರಾಗಿಯೇ ಕೇಳಿಸತೊಡಗಿವೆ. ಈ ನಡುವೆ ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಈ ಪಕ್ಷಾಂತರದ ಮಾತುಗಳಿಗೆ ಪುಷ್ಠಿ ಕೊಡುವಂತಹ ಹೇಳಿಕೆಯೊಂದನ್ನ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹಾಲಿ ಸಚಿವ ಸೇರಿದಂತೆ ತುಮಕೂರಿನ ಇಬ್ಬರು ಪ್ರಮುಖ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ ಅನ್ನೋ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳುಗಳಷ್ಟೇ ಬಾಕಿಯಿದೆ. 

Tap to resize

Latest Videos

ಹೀಗಾಗಿ ನಿಧಾನವಾಗಿ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ. ಪಕ್ಷಾಂತರದ ಕಥೆಗಳು ಕೂಡ ದೊಡ್ಡ ಮಟ್ಟದಲ್ಲಿಯೇ ಕೇಳಿಬರ್ತಿವೆ. ಈ ನಡುವೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ಹೊಸದೊಂದು ಬಾಂಬ್ ಸಿಡಿಸಿದ್ದು, ಬಿಜೆಪಿ ಸರ್ಕಾರದ ಹಾಲಿ ಸಚಿವರೇ ಕಾಂಗ್ರೆಸ್‌ಗೆ ಸೇರಲಿದ್ದಾರೆ ಅನ್ನೋ ಸುಳಿವು ನೀಡಿದ್ದಾರೆ. ಈ ಹಾಲಿ ಸಚಿವ ಬೇರಾರೂ ಅಲ್ಲ. ಬಿಜೆಪಿ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ. ಹೌದು! ಇತ್ತೀಚೆಗಷ್ಟೇ ವೈರಲ್ ಆಗಿದ್ದ ಮಾಧುಸ್ವಾಮಿಯ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. 

ಪ್ರೀತಿಯಿಂದ ಸಾಕಿದ್ದ ಗಿಣಿಯನ್ನು ದಾನ ಮಾಡಿದ ತುಮಕೂರಿನ ದಂಪತಿ

ವಿರೋಧ ಪಕ್ಷಗಳಿಗೆ ಆಹಾರವೂ ಆಗಿತ್ತು. ಚನ್ನಪಟ್ಟಣದ ಭಾಸ್ಕರ್ ಎಂಬುವವರ ಜೊತೆ ಮಾತನಾಡಿದ್ದ ಈ ಆಡಿಯೋದಲ್ಲಿ, ಮಾಧುಸ್ವಾಮಿ ತಮ್ಮದೇ ಸರ್ಕಾರಕ್ಕೆ ಮುಜುಗರ ತರಿಸುವಂತಹ ಮಾತುಗಳನ್ನಾಡಿದ್ರು. ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್ ಮಾಡ್ತಿದ್ದೀವಿ ಎಂಬ ಅರ್ಥದಲ್ಲಿ ಮಾಧುಸ್ವಾಮಿ ಮಾತನಾಡಿದ್ರು. ಈ ಆಡಿಯೋ ಬಗ್ಗೆ ಸ್ವಪಕ್ಷದವರಿಂದಲೇ ವಿರೋಧಗಳು ಹೆಚ್ಚಾದ ಬೆನ್ನಲ್ಲಿಯೇ ಮಾತನಾಡಿದ್ದ ಮಾಧುಸ್ವಾಮಿ, ಸಿಎಂ ಕೇಳಿದರೆ ನಾನು ರಾಜೀನಾಮೆ ಕೊಡೋದಕ್ಕೂ ಸಿದ್ದ ಅನ್ನೋ ಮಾತುಗಳನ್ನಾಡಿದ್ರು. ಇದೀಗ ಇದೇ ಮಾಧುಸ್ವಾಮಿ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. 

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎನ್.ರಾಜಣ್ಣ, ಹಾಲಿ ಸಚಿವ ಮಾಧುಸ್ವಾಮಿ ಕಾಂಗ್ರೆಸ್ ಸೇರುವ ಇಚ್ಛೆಯನ್ನ ತಮ್ಮ ಬಳಿ ಹೇಳಿಕೊಂಡಿದ್ರು ಎಂದಿದ್ದಾರೆ. ಮಾಧುಸ್ವಾಮಿ ಅವರೇ ನನ್ನನ್ನ ಕೇಳಿದ್ರು. ತಿಪಟೂರಲ್ಲಿ ಸೀಟ್ ಕೊಡ್ಸಿ. ನಾನು ಕಾಂಗ್ರೆಸ್‌ಗೆ ಬರ್ತಿನಿ ಅಂದಿದ್ರು. ಅವ್ರು ಮಂತ್ರಿಯಾಗಿದ್ದಾಗಲೇ ನನ್ನ ಬಳಿ ಈ ಇಚ್ಛೆಯನ್ನ ತೋಡಿಕೊಂಡಿದ್ರು. ಅವ್ರು ಕಾಂಗ್ರೆಸ್‌ಗೆ ಬಂದ್ರೆ ನಾನು ಸ್ವಾಗತ ಮಾಡ್ತೀನಿ ಅಂತಾ ರಾಜಣ್ಣ ಹೇಳಿದ್ದಾರೆ. ಮಾಧುಸ್ವಾಮಿ ಮಾತ್ರವಲ್ಲ, ಜಿಲ್ಲೆಯ ಇನ್ನೊಬ್ಬ ಪ್ರಮುಖ ಬಿಜೆಪಿ ನಾಯಕ, ಮಾಜಿ ಶಾಸಕ ಸುರೇಶ್ ಗೌಡ ಕೂಡ ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ ಅಂತಾ ರಾಜಣ್ಣ ಹೇಳಿದ್ದಾರೆ. 

ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾಗಿರೋ ಸುರೇಶ್ ಗೌಡ, ನನ್ನದೊಂದು ಕೇಸ್ ಇದೆ. ಆ ಕೇಸ್ ಇತ್ಯರ್ಥವಾದ ಮೇಲೆ ನಾನು ಕಾಂಗ್ರೆಸ್‌ಗೆ ಬರ್ತೀನಿ ಅಂತಾ ಹೇಳಿದ್ದಾಗಿ ರಾಜಣ್ಣ ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರ ಅಂದ್ರೆ ಸುರೇಶ್ ಗೌಡ ಕೂಡ ಇತ್ತೀಚೆಗೆ ಸಿಎಂ ಬದಲಾವಣೆಯ ಮಾತುಗಳನ್ನಾಡಿ ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸಿದ್ರು. ಹೀಗಾಗಿ ಸ್ವತಃ ಸಿಎಂ ಬೊಮ್ಮಾಯಿ ಕೂಡ ಸುರೇಶ್ ಗೌಡ ಅವರ ಮೇಲೆ ಅಸಮಾಧಾನ ಹೊಂದಿದ್ದಾರೆ. 

ತುಮಕೂರಲ್ಲೂ ಸಾವರ್ಕರ್‌ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳು

ಇನ್ನು ಈ ಪಕ್ಷಾಂತರದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಮಾಧುಸ್ವಾಮಿ ಅವರ ಸಂಪುಟ ಸಹೋದ್ಯೋಗಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ಮಾಧುಸ್ವಾಮಿ ಬಗ್ಗೆ ಅಪಪ್ರಚಾರ ಮಾಡುವ ಗ್ಯಾಂಗ್ ಹುಟ್ಟಿಕೊಂಡಿದೆ. ಮಾಧುಸ್ವಾಮಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಅವರು ಯಾವತ್ತೂ ಬಿಜೆಪಿಯನ್ನ ಬಿಡಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಿನಲ್ಲಿ ಪಕ್ಷಾಂತರದ ಮಾತುಗಳು ಜೋರಾಗಿಯೇ ಸದ್ದುಮಾಡತಿವೆ. ರಾಜಣ್ಣ ಹೇಳಿದ್ದು ಸತ್ಯನಾ? ಇವರಿಬ್ಬರು ನಾಯಕರು ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆಗಳಿಗೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಉತ್ತರ ಸಿಗಲಿದೆ.

click me!