ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮತ್ತು ವಿನಯ್ ಕುಲಕರ್ಣಿ ಇಬ್ಬರೂ ರಾಷ್ಟ್ರೀಯ ದ್ರೋಹಿಗಳು ಆ ಇಬ್ಬರನ್ನು ತಾಕತ್ತಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದಿಂದ ಕಿತ್ತು ಹಾಕಲಿ ನೋಡೋಣ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸವಾಲು ಹಾಕಿದರು.
ದಾವಣಗೆರೆ (ಫೆ.8): ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮತ್ತು ವಿನಯ್ ಕುಲಕರ್ಣಿ ಇಬ್ಬರೂ ರಾಷ್ಟ್ರೀಯ ದ್ರೋಹಿಗಳು ಆ ಇಬ್ಬರನ್ನು ತಾಕತ್ತಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದಿಂದ ಕಿತ್ತು ಹಾಕಲಿ ನೋಡೋಣ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸವಾಲು ಹಾಕಿದರು.
ಇಂದು ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ದೇಶವನ್ನು ತುಂಡು ಮಾಡುವಂತೆ ಹೇಳುತ್ತಿರುವ ರಾಷ್ಟ್ರ ದ್ರೋಹಿಗಳನ್ನು ಗುಂಡಿಕ್ಕುವ ಕಾನೂನನ್ನು ಮೋದಿಯವರೇ ತರಬೇಕು. ಜಿನ್ನಾ ಸಂಸ್ಕೃತಿ ಡಿಕೆ ಸುರೇಶ್ ಹಾಗು ವಿನಯ್ ಕುಲಕರ್ಣಿ ಅವರಿಗೂ ಬಂದಿದೆ. ನಾವು ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ ಅಖಂಡ ಭಾರತ ನಿರ್ಮಿಸುತ್ತೇವೆ ಎಂದು ತಿರುಗೇಟು ನೀಡಿದರು.
undefined
ಕಾಂಗ್ರೆಸ್‌ಗೆ ಕೈ ಕೊಟ್ಟ ಶೆಟ್ಟರ್; ಬೆಳಗಾವಿ ಲೋಕಸಭಾ ಟಿಕೆಟ್ ಯಾರಿಗೆ? ಮೃಣಾಳ್? ಪ್ರಿಯಾಂಕಾ ಜಾರಕಿಹೊಳಿ?
ಸುಳ್ಳುರಾಮಯ್ಯ ಒಂದು ಸತ್ಯ ಹೇಳಿದ್ದಾರೆ. ದೇಶ ವಿಭಜನೆಗೆ ಒಪ್ಪೊಲ್ಲ ಅಂತಾ. ಜಾತಿಗಳ ನಡುವೆ ವಿಷಬೀಜ ಬಿತ್ತಿ ತುಂಡು ಮಾಡಿದ್ದವನನ್ನು ರಾಮ ಒಟ್ಟುಗೂಡಿಸಿದ. ಪ್ರಧಾನಿ ಮೋದಿಯವರ ಹೆಸರು ಹೇಳಿದ್ರೆ ರಾಷ್ಟ್ರ ಭಕ್ತಿ ಉಕ್ಕಿ ಕಾಂಗ್ರೆಸ್ ನವರೇ ವೋಟು ಕೊಡುತ್ತಿದ್ದಾರೆ. ಭಾರತೀಯ ಪಾರ್ಟಿ ಯಲ್ಲಿ ಕಾರ್ಯಕರ್ತರು ಸದೃಡವಾಗಿದ್ದಾರೆ. ನಾವೆಲ್ಲರು ದೇಶ ಮುಖ್ಯ ಎನ್ನುವವರು ಎಂದರು.
900 ವರ್ಷ ಈ ದೇಶ ಮುಸಲ್ಮಾನರು ಆಳಿದರು. ಕಾಶಿ ಮಥುರಾ, ಅಯೋಧ್ಯೆ ಹೀಗೆ ಎಲ್ಲ ಕಡೆಯೂ ಅವರ ಆಳ್ವಿಕೆಯಲ್ಲಿ ಮಸೀದಿ ಕೂತಿದ್ದವು. ಭಾರತೀಯರು ಗುಲಾಮರು ಎಂದು ಬಾಬರಿ ಮಸೀದಿ ಹೇಳುತ್ತಿತ್ತು. ಆಯೋಧ್ಯಾ ರಾಮಮಂದಿರ ಇದೀಗ ದೇಶ ಒಂದುಗೂಡಿಸಿತು. ಅಷ್ಟೇ ಅಲ್ಲ ನಮಗೆ ಕಾಶಿಯೂ ಪವಿತ್ರ ಸ್ಥಳ ಇದೀಗ ಅಲ್ಲಿಯೂ ಕಾಶಿ ವಿಶ್ವನಾಥನ ದೇವಾಲಯದಲ್ಲಿ ಯೋಗಿ ಪೂಜೆ ಆರಂಭಿಸಿದ್ದಾರೆ. ಅನೇಕ ಮುಸಲ್ಮಾನರು ಅಯೋಧ್ಯೆಗೆ ಹೋಗಿ ಪೂಜೆ ಮಾಡುತ್ತಿದ್ದಾರೆ. ಇಷ್ಟು ವರ್ಷ ಜೈಶ್ರೀರಾಮ್ ಘೋಷಣೆ ಆಯಿತು. ಇದೀಗ ಹರ ಹರ ಮಹಾದೇವ್ ಘೋಷಣೆ ಮೊಳಗುತ್ತಿದೆ ಎನ್ನುವ ಮೂಲಕ ಕಾನೂನಿನ ಮೂಲಕ ಜ್ಞಾನವಾಪಿ ಮಸೀದಿಯನ್ನೂ ತೆರವುಗೊಳಿಸಲಿದ್ದೇವೆ ಎಂಬುದರ ಸುಳಿವು ನೀಡಿದರು.
ಸಿದ್ದರಾಮಯ್ಯ ಸರ್ಕಾರ ಯಾವಾಗ ಬಿದ್ದೋಗುತ್ತೋ ಗೊತ್ತಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಆದರೆ ಭಾರತವನ್ನು ತುಂಡು ಮಾಡುವ ಡಿಕೆ ಸುರೇಶ್, ವಿನಯ್ ಕುಲಕರ್ಣಿಯವರನ್ನು ಕಿತ್ತುಹಾಕಿದರೆ ಭಾರತ್ ಜೋಡೋ ಯಾತ್ರೆಗೆ ಅರ್ಥ ಬರುತ್ತದೆ. ಮೊದಲು ಆ ದೇಶದ್ರೋಹಿಗಳನ್ನು ಪಕ್ಷದಿಂದ ಕಿತ್ತುಹಾಕಿ ಎಂದು ರಾಹುಲ್ ಗಾಂಧಿಗೆ ಆಗ್ರಹಿಸಿದರು.
ನಿನ್ನೆ ತೆರಿಗೆ ತಾರತಮ್ಯ ಬಗ್ಗೆ ಸಿದ್ದರಾಮಯ್ಯ ಸುಳ್ಳು ಭಾಷಣ ಮಾಡಿದ್ರು. ಅವರಿಗೆ ನಮ್ಮ ಸಹೋದರಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೆ ಕೇಂದ್ರದಲ್ಲಿ ಬರುವ ಅಷ್ಟು ಹಣ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು 13 ಬಾರಿ ಬಜೆಟ್ ಮಾಡಿದ್ದೀರಿ ಯುಪಿಎ ಎನ್ ಡಿ ಎ ಅವಧಿಯಲ್ಲಿ ಕೇಂದ್ರ ಸರ್ಕಾರ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಿ. ನುಡಿದಂತೆ ನಡೆದ ಸರ್ಕಾರ ಒಬ್ಬ ನಿರುದ್ಯೋಗಿಗೆ ಒಂದು ರೂಪಾಯಿನೂ ಕೊಟ್ಟಿಲ್ಲ. ನಿಮ್ಮ ಹತ್ರ ದುಡ್ಡಿರೋದನ್ನ ರೈತರಿಗೆ ಕೊಡಿ ಎಂದ ಈಶ್ವರಪ್ಪ.
'ಜ್ಞಾನವಾಪಿ ಮಸೀದಿ ನಮ್ಮದಾಗಿಯೇ ಉಳಿಯುತ್ತೆ' ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಎಸ್‌ಡಿಪಿಐ ವಿರೋಧ
ಮಾಗಡಿ ಬಾಲಕೃಷ್ಣ ಕಾಂಗ್ರೆಸ್ಸಿನ ಮುತ್ತು. ಬಿಜೆಪಿಯವರು ಗಂಡಸರು ಅಲ್ಲ ಅಂತಾರೆ. ಬಿಜೆಪಿಯವರು ಗಂಡಸರು ಅನ್ನೋದನ್ನು ಎಲ್ಲಿ ತೋರಿಸಬೇಕು ಹೇಳಿ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಮುಂದೆ ಈ ರೀತಿ ಪ್ರತಿಭಟನೆ ನಡೆದಿದೆ. ರಾಜ್ಯದ ಜನ ಕಾಂಗ್ರೆಸ್ ದೊಂಬರಾಟ ನೋಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.