ಕಾಂಗ್ರೆಸ್‌ ವೈಫಲ್ಯ ಮುಚ್ಚಿಡ್ಡಲು ದಿಲ್ಲಿಯಲ್ಲಿ ಪ್ರತಿಭಟನೆ: ಸಚಿವ ಪ್ರಲ್ಹಾದ್‌ ಜೋಶಿ

By Govindaraj SFirst Published Feb 8, 2024, 10:02 AM IST
Highlights

ರಾಜ್ಯದ ಕಾಂಗ್ರೆಸ್‌ ನಾಯಕರು ತಮ್ಮ ವೈಫಲ್ಯ ಮುಚ್ಚಿಹಾಕಲು ಕೇಂದ್ರದಿಂದ ತಾರತಮ್ಯ ಆಗುತ್ತಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಬುಧವಾರ ಪ್ರತಿಭಟನೆ ಮಾಡುತ್ತಿದ್ದಾರೆ. ಸೂಕ್ತ ಯೋಜನೆ ಇಲ್ಲದೆ ಮನಬಂದಂತೆ ಗ್ಯಾರಂಟಿ ಘೋಷಣೆಯಿಂದಾಗಿ ರಾಜ್ಯಕ್ಕೆ ಇದೀಗ ಆರ್ಥಿಕ ಸಂಕಷ್ಟ ಬಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.
 

ನವದೆಹಲಿ (ಫೆ.08): ರಾಜ್ಯದ ಕಾಂಗ್ರೆಸ್‌ ನಾಯಕರು ತಮ್ಮ ವೈಫಲ್ಯ ಮುಚ್ಚಿಹಾಕಲು ಕೇಂದ್ರದಿಂದ ತಾರತಮ್ಯ ಆಗುತ್ತಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಬುಧವಾರ ಪ್ರತಿಭಟನೆ ಮಾಡುತ್ತಿದ್ದಾರೆ. ಸೂಕ್ತ ಯೋಜನೆ ಇಲ್ಲದೆ ಮನಬಂದಂತೆ ಗ್ಯಾರಂಟಿ ಘೋಷಣೆಯಿಂದಾಗಿ ರಾಜ್ಯಕ್ಕೆ ಇದೀಗ ಆರ್ಥಿಕ ಸಂಕಷ್ಟ ಬಂದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಮುಖ್ಯಮಂತ್ರಿ ಹಣಕಾಸು ಕಾರ್ಯದರ್ಶಿ ಬಸವರಾಜ್ ರಾಯರೆಡ್ಡಿ, ಅನೇಕ ಶಾಸಕರೂ ಈ ಮಾತು ಹೇಳಿದ್ದಾರೆ.

ಇದೀಗ ಮುಖ್ಯಮಂತ್ರಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಯೋಜನೆ ಇಲ್ಲದೆ ಮನಬಂದಂತೆ ಗ್ಯಾರಂಟಿ ಘೋಷಣೆಯಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಿಡಿಕಾರಿದರು. ಬೀದರ್‌ ಸ್ಥಿತಿ ಏನಾಗಬೇಕು?: ತೆರಿಗೆ ಸಂಗ್ರಹ ಪ್ರಮಾಣ ಮತ್ತು ಅನುಮದಾನ ಹಂಚಿಕೆಗೆ ಸಂಬಂಧಿಸಿ ಇವರ ವಾದವನ್ನು ಬೆಂಗಳೂರಿಗೆ ಅನ್ವಯಿಸಿದರೆ ಬೀದರ್‌, ಕೋಲಾರದ ಕಥೆ ಏನಾಗಬೇಡ? ಕಲ್ಲಿದ್ದಲು ವಿಚಾರದಲ್ಲಿ ಹೀಗೆ ಮಾಡಿದರೆ ಇಡೀ ದೇಶ ಕತ್ತಲಲ್ಲಿ ಮುಳುಗಬೇಕಾದೀತು. ಅನುದಾನ ಹಂಚಿಕೆಯಲ್ಲಿ ಹಣಕಾಸು ಆಯೋಗದ ಶಿಫಾರಸ್ಸೇ ಅಂತಿಮ ಎಂದರು. 

ರಾಜ್ಯದಲ್ಲಿ ಸಂಗ್ರಹಿಸಿದ ಜಿಎಸ್ಟಿಯಲ್ಲಿ ರಾಜ್ಯದ ಪಾಲು ಅವರ ಬಳಿಯೇ ಇದೆ. ಅಂತಾರಾಜ್ಯ ಜಿಎಸ್ಟಿ50% ರಾಜ್ಯಕ್ಕೆ ಹೋಗುತ್ತಿದೆ. ಈ ತೆರಿಗೆ ಪದ್ಧತಿ ನೆಹರೂ ಕಾಲದಿಂದಲೂ ಇದೆ. ನಾವು ನಯಾಪೈಸೆ ಜಿಎಸ್ಟಿ ಬಾಕಿ ಉಳಿಸಿಕೊಂಡಿಲ್ಲ. ಕರ್ನಾಟಕಕ್ಕೆ 6280 ಕೋಟಿ ರು. ಬಡ್ಡಿ ರಹಿತ ಸಾಲ ನೀಡಲಾಗಿದೆ. 18,000 ಕೋಟಿ ರು. ಅನುದಾನ ರಾಜ್ಯಕ್ಕೆ ನೀಡಲಿದ್ದೇವೆ. 2.36 ಲಕ್ಷ ಕೋಟಿ ರಾಜ್ಯಕ್ಕೆ ನೀಡುತ್ತಿದ್ದೇವೆ ಎಂದರು. ಯುಪಿಎಗಿಂತ ರಾಜ್ಯದ ರೈಲ್ವೆ ಯೋಜನೆಗಳಿಗೆ ಹತ್ತುಪಟ್ಟು ಹೆಚ್ಚು ಅನುದಾನ ನೀಡಲಾಗಿದೆ. 

ಮಹೇಶ ಕುಮಟಳ್ಳಿ ಹಕ್ಕು ಚ್ಯುತಿ ಮಂಡಿಸಲಿ: ಶಾಸಕ ಲಕ್ಷ್ಮಣ ಸವದಿ ಸವಾಲು

ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಕೆಲ ಮಾಹಿತಿ ಕೇಳಿದ್ದೆವು. ಆದರೆ ರಾಜ್ಯ ಸರ್ಕಾರ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅನುದಾನ ನೀಡಿಲ್ಲ. ಈಗಾಗಲೇ ಎಸ್‌ಡಿಆರ್‌ಎಫ್ ನಡಿ ರಾಜ್ಯಕ್ಕೆ ಶೇ.70ರಷ್ಟು ಹಣ ನೀಡಿದೆ. ಆ ಅನುದಾನ ಬಳಸಿಕೊಂಡು ಕೆಲಸ ಮಾಡಬಹುದು ಎಂದರು. ಇದೇ ವೇಳೆ ಗಂಡಸ್ತನದ ಕುರಿತ ಮಾತುಗಳಿಗೆ ನಾನು ಉತ್ತರಿಸಲ್ಲ ಎಂದ ಜೋಶಿ, ಇದು ಕೀಳು ಮಟ್ಟದ ರಾಜಕೀಯ. ಸಂಸದರಿಗೆ ಮುಖ್ಯಮಂತ್ರಿಗಳು ಪತ್ರಬರೆದಿದ್ದು ದುರ್ಬುದ್ದಿಯ ರಾಜಕಾರಣ ಎಂದು ಆರೋಪಿಸಿದರು.

click me!