
ಬಳ್ಳಾರಿ(ಜ.24): ನಾನು ಹಾದಿ ಬೀದಿಯಿಂದ ಬಂದ ವ್ಯಕ್ತಿಯಲ್ಲ. ರಾಜಕೀಯ ಹಿನ್ನೆಲೆ ಇರುವ ಕುಟುಂಬ ನಮ್ಮದು. ಜನಾರ್ದನ ರೆಡ್ಡಿಯಿಂದ ನನಗೆ ಯಾವುದೇ ರೀತಿಯ ಲಾಭ ಆಗಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒಂದು ಕಾಲದ ತಮ್ಮ ಆತ್ಮೀಯ ಮಿತ್ರ ಜನಾರ್ದನ ರೆಡ್ಡಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಡೂರು ಉಪಚು ನಾವಣೆಯಲ್ಲಿ ಸೋಲಿನ ಗದ್ದಲ, ಆ ಬಗ್ಗೆ ತಾವು ಮಾಡಿದ ಆರೋಪಗಳಿಗೆ ಜನಾರ್ದನ ರೆಡ್ಡಿ ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಬಳ್ಳಾರಿಯಲ್ಲಿ ರಾಮುಲು ತಮ್ಮ ಮೇಲಿನ ಆರೋಪಗಳಿಗೆ ಫಟಾಫಟ್ ತಿರುಗೇಟು ನೀಡುವ ಯತ್ನ ಮಾಡಿದರು.
ರೌಡಿ ರಾಮುಲುನ ರಕ್ಷಣೆ ಮಾಡಿದ್ದೇ ನಾನು ಎಸಗಿದ ದ್ರೋಹ: ರೆಡ್ಡಿ ಸಿಡಿಲು
ಸೋಮವಾರ ನಡೆದ ಕೋರ್‌ಕಮಿಟಿ ಸಭೆ ಯಲ್ಲಿ ತಮಗಾದ ಅವಮಾನದಿಂದ ಇನ್ನೂ ಹೊರಬದಂತೆ ಕಾಣದ ಶ್ರೀರಾಮುಲು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ 'ಜನಾರ್ದನ ರೆಡ್ಡಿ ಜತೆ ನನ್ನ ಮನಸ್ಸು ಮುರಿದಿದೆ. ಮತ್ತೆ ಕೊಡೋದು ಕಷ್ಟ. ಆತ ನನ್ನ ರಾಜಕೀಯ ಜೀವನಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಆತನ ಎಲ್ಲ ಕುಕೃತ್ಯವನ್ನು ದಾಖಲೆ ಸಮೇತ ಬಿಚ್ಚಿಡುವೆ ಎಂದ ಆರೋಪಗಳ ಸುರಿಮಳೆಗೈದರು.
ಒಂದು ಕಾಲದ ಆಪ್ತಮಿತ್ರ, ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶ್ರೀರಾಮುಲು, ನಾನು ಬೀದಿಯಿಂದ ಮೇಲೆ ಬಂದಿದ್ದೇನೆಯೇ ಹೊರತು ಹೆಲಿಕಾಪ್ಟರ್‌ನಿಂದ ಬಂದಿಲ್ಲ. ನನ್ನ ಸ್ವಾಭಿಮಾನಕ್ಕೆ ಚ್ಯುತಿಯಾದರೆ ರೆಬೆಲ್ ಆಗುತ್ತೇನೆ. ಯಾವ ಅನುಮಾನವೂ ಬೇಡ. ಜನಾರ್ದನ ರೆಡ್ಡಿ ಕೃಪಾಕಟಾಕ್ಷ ನನಗೆ ಅಗತ್ಯವಿಲ್ಲ ಎಂದು ಹೇಳಿದರು.
ಕೂಡ್ಲಿಗಿಯಿಂದಲೇ ಸ್ಪರ್ಧಿಸುವೆ:
'ಬರುವ ಚುನಾವಣೆಯಲಿ ಕೂಡಿಗಿ ಯಿಂದಲೇ ಸ್ಪರ್ಧೆ ಮಾಡುವೆ. ರಾಜ್ಯದ ನಾನಾ ಕಡೆಗಳಿಂದ ನನಗೆ ಸ್ಪರ್ಧಿಸಲು ಆಹ್ವಾನವಿದೆ. ಹನುಮಂತ ಬೇಡ ಎನ್ನುತ್ತಿದ್ದಾನೆ. ರೆಡ್ಡಿ ಜತೆ ಸೇರಿಹನುಮಂತ ಹೀಗಾಗಿದ್ದಾನೆ. ಹನುಮಂತ ಬೆಳೀ ಬೇಕು,ಬಹಳ ಸ್ಪೀಡ್ ಇದ್ದಾನೆ. ಸ್ಪೀಡ್ ಇದಾಗ ಅಪಘಾತಗಳು ಸಂಭವಿಸುತ್ತವೆ' ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌ಗೆ ಹೋಗಲ್ಲ:
ಬಿಜೆಪಿಯಲ್ಲಿ ನಾನು ಶಕ್ತಿವಂತನಾಗಿದ್ದೇನೆ. ಕಾಂಗ್ರೆಸ್‌ಗೆ ಹೋದರೆ ಶೂನ್ಯವಾಗುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಸತೀಶ್ ಜಾರಕಿಹೊಳಿಗೆ ಪರ್ಯಾಯವಾಗಿ ಬೆಳೆಸಲು ಡಿ.ಕೆ. ಶಿವಕುಮಾರ್ ನನ್ನನ್ನು ಕರೆದಿದ್ದಾರೆ ಎಂಬುದು ಸುಳ್ಳು. ನಾನು ಅಶಕ್ತ ನಾಯಕನಲ್ಲ. ಪರಿಶಿಷ್ಟ ಜಾತಿ ಪ್ರಬಲ ನಾಯಕನಾಗಿದ್ದೇನೆ. ಇದನ್ನು ಜನಾರ್ದನ ರೆಡ್ಡಿ ಮರೆಯಬಾರದು. ರಮೇಶ ಜಾರಕಿಹೊಳಿ, ಯತ್ನಾಳ ನನ್ನ ಸ್ನೇಹಿತರು. ಆದರೆ, ನಾನು ಅವರು ಕರೆದ ಸಭೆಗೆ ಹೋಗಿಲ್ಲ ಎಂದು ಶ್ರೀರಾಮುಲು ವಿವರಿಸಿದರು.
ಆಗಲೇ ಮಾಧ್ಯಮದ ಮುಂದೆ ಹೇಳಲು ಹೋದಾಗ ಸಿ.ಟಿ.ರವಿ ಕೋರ್ ಕಮಿಟಿ ವಿಷಯ ಮಾಧ್ಯಮದ ಮುಂದೆ ಹೇಳಬಾರದು ಎಂದರು. ಏನೂ ಮಾತ ನಾಡದೇ ಇದ್ದರೆ ನಾನೇ ತಪ್ಪಿತಸ್ಥ ನಾಗುತ್ತೇನೆ ಎಂದು ಇಂದು ಸ್ಪಷ್ಟನೆ ಕೊ ಡುತ್ತಿದ್ದೇನೆ ಎಂದರು. ಪಕ್ಷ ಬಿಡುವ ಸಂದರ್ಭ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಪಕ್ಷದ ವರಿಷ್ಠರು, ಸಂಘದ ಪ್ರಮುಖರನ್ನೂ ಭೇಟಿಯಾಗಿ ಎಲ್ಲವನ್ನೂ ವಿವರಿಸುವುದಾಗಿ ಅವರು ತಿಳಿಸಿದರು.
ಬಿಜೆಪಿ ಸಭೇಲಿ 80% ನಾಯಕರ ಬೆಂಬಲ ನನಗೆ ಸಿಕ್ಕಿದೆ: ವಿಜಯೇಂದ್ರ
ಬಿವೈವಿ ರಕ್ಷಣೆಗೆ ಬರಲಿಲ್ಲ:
ರಾಮುಲು ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ ದಾಸ್ ನನ್ನನ್ನು ಅಸಹ್ಯವಾಗಿ ನೋಡಿದರು. ಸಂಡೂರು ಸೋಲಿಗೆ ನೀನೇ ಕಾರಣ ಎಂದು ನೇರವಾಗಿ ಆರೋಪ ಮಾಡಿದರು. ಡಬಲ್ ಗೇಮ್ ಮಾಡ್ತೀರ ಎಂದ್ರು. ಆರಂಭದಿಂದಲೂ ಚುನಾವಣಾ ಪ್ರಚಾರ ಮಾಡಿದ್ದೇನೆ. ಪಕ್ಷದ ಪರ ಪ್ರಾಮಾಣಿಕವಾಗಿ ಇದ್ದೇನೆ ಎಂದು ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ಆಗ ನೀವು ಅವಮಾನ ಮಾಡಿ ನೋವು ಕೊಡ್ತಿದ್ದೀರಾ, ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಹೇಳಿ ಎದ್ದು ಬಂದೆ. ಪಕ್ಷದ ಅಧ್ಯಕ್ಷರು ನನ್ನ ರಕ್ಷಣೆಗೆ ಬರಲಿಲ್ಲ, ವಿಜಯೇಂದ್ರ ಬಳಿಯೇ ನೇರವಾಗಿ ಹೇಳಿದೆ, ನಾನೇನೂ ಮಾಡೋಕೆ ಆಗೋಲ್ಲ ಎಂದರು ಎಂದು ತಿಳಿಸಿದರು.
ರಾಮುಲು ತಿರುಗೇಟು
* ನಾನು ಬೀದಿಯಿಂದ ಬಂದವನಲ್ಲ, ಬಳ್ಳಾರಿಯ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನು
*ಆದರೆ ಸ್ವಸಾಮರ್ಥ್ಯದಿಂದ ಮೇಲೆ ಬಂದಿದ್ದೇನೆಯೇ ಹೊರತು ಹೆಲಿಕಾಪ್ಟರ್‌ನಿಂದ ಬಂದವನಲ್ಲ
* ನನ್ನ ಸ್ವಾಭಿಮಾನಕ್ಕೆ ಚ್ಯುತಿಯಾದರೆ ರೆಬೆಲ್ ಆಗುತ್ತೇನೆ. ಇದರಲ್ಲಿ ಅನುಮಾನವೇ ಬೇಡ
*ನಾನು ಬಿಜೆಪಿಯಲ್ಲಿ ಶಕ್ತಿವಂತನಾಗಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ
* ಕೋರ್ ಕಮಿಟಿ ಸಭೇಲಿ ರಾಜ್ಯ ಉಸ್ತುವಾರಿ ರಾಧಾಮೋಹನ ನನ್ನ ಅಸಹ್ಯವಾಗಿ ನೋಡಿದ್ರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.