ದೇವೇಗೌಡರ ಬದುಕು‌ ಮುಖ್ಯ ನನಗೆ: ಮಾಜಿ ಸಿಎಂ ಕುಮಾರಸ್ವಾಮಿ ಭಾವನಾತ್ಮಕ ‌ಮಾತು

By Govindaraj SFirst Published Jan 28, 2023, 11:01 PM IST
Highlights

ಕಳೆದ ಒಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ‌ಹಾಸನ ವಿಧಾನ ಕ್ಷೇತ್ರದ ಟಿಕೆಟ್ ಗೊಂದಲ ಶುರುವಾಗಿದೆ. ಇತ್ತ ರಾಯಚೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ‌ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಶುರು ಮಾಡಿದ್ರೆ, ಅತ್ತ ಹಾಸನದಲ್ಲಿ ಟಿಕೆಟ್ ‌ವಿಚಾರವಾಗಿ ನಾನಾ ರೀತಿಯ ಹೇಳಿಕೆಗಳು ಕೇಳಿಬರುತ್ತಿವೆ. 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಜ.28): ಕಳೆದ ಒಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ‌ಹಾಸನ ವಿಧಾನ ಕ್ಷೇತ್ರದ ಟಿಕೆಟ್ ಗೊಂದಲ ಶುರುವಾಗಿದೆ. ಇತ್ತ ರಾಯಚೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ‌ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಶುರು ಮಾಡಿದ್ರೆ, ಅತ್ತ ಹಾಸನದಲ್ಲಿ ಟಿಕೆಟ್ ‌ವಿಚಾರವಾಗಿ ನಾನಾ ರೀತಿಯ ಹೇಳಿಕೆಗಳು ಕೇಳಿಬರುತ್ತಿವೆ. ಇದರಿಂದ ಭಾವನಾತ್ಮಕವಾಗಿ ಎಚ್.ಡಿ.ಕುಮಾರಸ್ವಾಮಿ ‌ರಾಯಚೂರಿನಲ್ಲಿ ಮಾತನಾಡಿದ್ರು. ಹಾಸನದಲ್ಲಿ ಕೆಲ ವರ್ಗಕ್ಕೆ ಹಾಸನದ ಟಿಕೆಟ್ ಚಿಂತನೆಯಾಗಿದೆ. ನನಗೆ ಹಾಸನದ ಟಿಕೆಟ್ ಚಿಂತೆ ‌ಇಲ್ಲ. ಇಲ್ಲಿ ಪ್ರಪಂಚ ಮುಳುಗಿ ಹೋಗುವ ವಿಷಯ ಏನು ನಡೆದಿಲ್ಲ.  ಇದು ಎಲ್ಲಾ ರಾಜಕಾರಣದಲ್ಲಿ ದೇಶದ ಇತಿಹಾಸ ತೆಗೆದಾಗ ಮಹಾಭಾರತ, ರಾಮಾಯಣ ಕಾಲದಲ್ಲಿಯೂ ಇತ್ತು. 

ಮಹಾಭಾರತ, ರಾಮಾಯಣ ‌ಅವು ಯಾವ ರೀತಿಯಲ್ಲಿ ‌ನಡೆದಿವೆ. ಇದು ಎಲ್ಲಾ ನಮ್ಮ ಕಣ್ಣು ‌ಮುಂದೆ ಇರುವಂತದ್ದು, ಇದು ‌ಕಲಿಯುಗದ ರಾಜಕಾರಣ ಇಲ್ಲಿ ನೂರಾರು ಜನ ಶಕುನಿಗಳು ಇರುತ್ತಾರೆ. ನಮ್ಮ ಕುಟುಂಬದ ಮಕ್ಕಳನ್ನು ದಾರಿ ತಪ್ಪಿಸಲು ನೂರಾರು ಶಕುನಿಗಳು ಇದ್ದಾಗ ಪಾದ ಏನೋ ಬಾಯಿ ತಪ್ಪಿ ಮಾತನಾಡಿ‌ ಇರುತ್ತಾರೆ. ಅದು ಏನೋ ಆಗಿ ಹೋಗಿದೆ ಎಂಬುವುದು ನಿಮ್ಮ ‌ವಿಶೇಷಣೆ ಇರಬಹುದು. ನನಗೆ ಅದು ಅಂತಹ ಮಹತ್ವ ಅನ್ನಿಸುವುದು ಇಲ್ಲ. ನಮ್ಮ ಕುಟುಂಬ ಮಕ್ಕಳು ನಮ್ಮ ‌ಮುಂದೆ ಬೆಳೆದಿರುವ ಮಕ್ಕಳು. ನಿಮಗೆ ಏಕೆ ಅದರ ಚಿಂತೆ. ನಾನು ಯಾರಿಗೂ ಹೆದರುವುದು ಇಲ್ಲ. ನಮ್ಮ ‌ಕುಟುಂಬದ ಮಕ್ಕಳು ಒಂದು ವಿಧಾನಸಭಾ ಕ್ಷೇತ್ರದ ಸ್ಥಾನದ ಬಗ್ಗೆ ‌ಮಾತನಾಡಿದ್ದಾರೆ. ನಿಮಗೆ ಅದರ ಬಗ್ಗೆ ‌ಬಹಳ ಮಹತ್ವ ಇರಬಹುದು..ನನಗೆ ಅದು ಸಣ್ಣ ವಿಷಯ. ನನ್ನ ‌ಮನೆ ಮಕ್ಕಳು ನನ್ನ ಬಗ್ಗೆ ಮಾತನಾಡದೇ ಇನ್ನಾರ ಬಗ್ಗೆ ಮಾತನಾಡುತ್ತಾರೆ. ಅದನ್ನು ‌ಸರಿಪಡಿಸಿಕೊಳ್ಳುವ ಶಕ್ತಿ ಇದೆ ನನಗೆ ಇದೆ. 

Pancharatna Rathayatra: ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಡಮಾರ್‌: ಎಚ್‌.ಡಿ.ಕುಮಾರಸ್ವಾಮಿ

ಯಾರೋ ಶಕುನಿಗಳು ದಾರಿ ತಪ್ಪಿಸಿರುತ್ತಾರೆ: ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ನಾನು ಪಂಚರತ್ನ ಯಾತ್ರೆ ಶುರು‌ ಮಾಡಿದ್ದೇನೆ. ಮುಂದಿನ ಬಾರಿ ಅಧಿಕಾರವೂ ನಮಗೆ ಈ ರಾಜ್ಯದ ಜನರು ಆರ್ಶಿವಾದ ‌ಮಾಡುತ್ತಾರೆ. ಹೀಗಾಗಿ ಇವೂ  ರಾಜಕಾರಣದಲ್ಲಿ ‌ಇಂತಹ ಶಕುನಿಗಳು ಇರುತ್ತಾರೆ. ತಲೆಕೆಡಿಸಿ ಏನೋ ಆಗಿ ಬಿಡುತ್ತೆ ಅಂತ ತಲೆಕೆಡಿಸುವರು ಇರುತ್ತಾರೆ. ಅದಕ್ಕೆ ‌ಎಲ್ಲಿಯೋ ಒಂದು‌ ಕಡೆ ದಾರಿ ತಪ್ಪಿ ಬಿಟ್ಟಿರುತ್ತಾರೆ. ಅದನ್ನ ಸರಿಪಡಿಸೋಣ.‌ ಪ್ರತಿಯೊಬ್ಬರಿಗೂ ರಾಜಕಾರಣದಲ್ಲಿ ನಿಲ್ಲಬೇಕು ಎಂಬ ಆಸೆ ಇರುತ್ತೆ. ರಾಜಕಾರಣ ಅಷ್ಟೇ ಅಲ್ಲದೆ ಜೀವನದಲ್ಲಿ ಸಾಧನೆ ಮಾಡಬೇಕು ‌ಎಂಬ ಆಸೆ ಇರುತ್ತೆ. 

ಅವರ ಆಸೆಗೆ ಎಲ್ಲಿಯೋ ಒಂದು‌ ಕಡೆ ಅಡಚಣೆ ‌ಆಗಿದಕ್ಕೆ ಮಾತನಾಡಿರಬಹುದು. ನಮ್ಮ ಸಂವಿಧಾನದಲ್ಲಿ ಯಾರ ಬೇಕಾದರೂ ಚುನಾವಣೆ ನಿಲ್ಲುವ ಅಧಿಕಾರವಿದೆ. ಕೆಲವರು ಅವರ ಜೀವನದಲ್ಲಿ ಸಾಧನೆ ಮಾಡಬೇಕು ಅಂತ ಹೊರಟ್ಟಾಗ ಇಂತಹವೂ ಸರ್ವೇ ಸಾಮಾನ್ಯವಾಗಿ ಬರುವುದು.  ನಮ್ಮ ‌ಈಗಿನ‌ ಪರಿಸ್ಥಿತಿಯಲ್ಲಿ ಸರಿಪಡಿಸಿಕೊಳ್ಳುವ ಶಕ್ತಿ ನಮ್ಮ  ಕುಟುಂಬದಲ್ಲಿ ಇದೆ. ಪಾಪ ಏನೋ ದೇವೇಗೌಡರ ಕುಟುಂಬದಲ್ಲಿ ಆಗಿಯೇ ಹೋಯ್ತು ದೊಡ್ಡ ಡ್ಯಾಮೇಜು.ಕುಮಾರಸ್ವಾಮಿ ‌100ಸೀಟು, 120 ಸೀಟು ಗೆಲ್ಲಲು ಹೊರಟ್ಟಿದ್ದಾರೆ. ಕುಮಾರಸ್ವಾಮಿಗೆ ಕಾಲು ಹಿಡಿದು ಎಳೆಯುತ್ತಾರೆ. ಇದ್ದಲ್ಲೇ ಯಾವ ಕಾರಣಕ್ಕೂ ಯಾರು ಸಕ್ಸಸ್ ಆಗಲ್ಲ. ಈ ಬಾರಿ ರಾಜ್ಯದಲ್ಲಿ ‌ಜನತಾದಳ ಪಕ್ಷ ಅಧಿಕಾರಕ್ಕೆ ತರಲು ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ. ನಮ್ಮ ಕುಟುಂಬದ ನಮ್ಮ ‌ಮಕ್ಕಳು ಏನು ಪ್ರತಿಕ್ರಿಯೆ ‌ಕೊಟ್ಟಿದ್ದಾರೆ ಅದನ್ನ ಸರಿಪಡಿಸಿಕೊಳ್ಳುವುದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ರು. 

ಹಾಸನ ನಾಡಿಮಿಡಿತ ರೇವಣ್ಣ ಗೊತ್ತು: ರಾಯಚೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎಚ್ ಡಿ ಕುಮಾರಸ್ವಾಮಿ. ಎಂಎಲ್‌ಸಿ ಸೂರಜ್ ರೇವಣ್ಣ ಹೇಳಿಕೆಯಲ್ಲಿ ತಪ್ಪಿಲ್ಲ. ನಾನು ಇಡೀ‌ ರಾಜ್ಯ ನೋಡುತ್ತಿರುವೆ. ಹಾಸನ ರಾಜಕಾರಣ ಮೊದಲಿನಿಂದಲೂ ‌ರೇವಣ್ಣನೇ ಮಾಡಿದ್ದು, ಹಾಸನದಲ್ಲಿ ರೇವಣ್ಣ ಅವರು ಅಭಿವೃದ್ಧಿ ನನ್ನಿಂದ ಆಗಿರಬಹುದು. ದೇವೇಗೌಡರಿಂದ ಆಗಬಹುದು. ರೇವಣ್ಣ ಹಾಸನ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ನಮಗೆ ಕಮಿಟ್ ಮೆಂಟ್ ಇದೆ. ಹಾಸನದ ಮಣ್ಣಿನಲ್ಲಿ ಪ್ರತಿಯೊಂದು ಜವಾಬ್ದಾರಿ ಅವರೇ ತೆಗೆದುಕೊಂಡಿದ್ದಾರೆ. ಅದನ್ನು ‌ಸೂರಜ್ ರೇವಣ್ಣ ಹೇಳಿದ್ದಾರೆ ತಪ್ಪೇನು ಇದೆ. ಹಾಸನದ ರಾಜಕೀಯದಲ್ಲಿ ನಿರ್ಧಾರ ಯಾರ್ ತೆಗೆದುಕೊಳ್ಳಬೇಕು. ಯಾರ್ ತೆಗೆದುಕೊಳ್ಳಬಾರದು ಎಂಬುವುದು ನಾವು ಮನೆಯಲ್ಲಿ ‌ಮಾತನಾಡುತ್ತೇವೆ. ಬೀದಿಯಲ್ಲಿ ‌ನಿಂತು ಅದಕ್ಕೆ ಎಲ್ಲಾ ಉತ್ತರ ಕೊಡಲ್ಲ. ನಮ್ಮ ‌ಮನೆಯ ಮಕ್ಕಳು ನಮ್ಮನ್ನು ಪ್ರಶ್ನೆ ‌ಮಾಡುವುದು ಅದು ಏನು ದೊಡ್ಡ ವಿಷಯವಲ್ಲ. ಮಹಾಭಾರತದ ಸನ್ನಿವೇಶ ತೆಗೆದುಕೊಂಡು ಹೋದಾಗ ಏನೇ ಏನೇ ನಡೆದಿದೆ.ಇವತ್ತು‌ ಮಹಾಭಾರತ ಇರುವುದು ಯಾತಕ್ಕೆ, ರಾಮಾಯಣ ‌ನಡೆದಿದ್ದು ಏನು? ಅದೇ ತರಹ ಇಲ್ಲಿಯೂ‌ ನಡೆಯುತ್ತಿರುತ್ತದೆ.ಅದನ್ನು ಸರಿಪಡಿಸುವ ಶಕ್ತಿಯಿದೆ.ಅವರು ಹೇಳಿರುವುದು ಸತ್ಯವಿದೆ ಅವರು ಹೇಳಿದ್ದಾರೆ.

ಮಹಾಭಾರತದಲ್ಲಿ ನಾನು ಒಬ್ಬ ‌ಸಾಮಾನ್ಯ ಪ್ರಜೆ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ಕಳೆದ ಒಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅದಕ್ಕೆ ಮಾಜಿ ಸಿಎಂ ‌ಕುಮಾರಸ್ವಾಮಿ ಅವರು ಮಾತನಾಡುವಾಗ ಮಹಾಭಾರತ, ರಾಮಾಯಣದ ಸನ್ನಿವೇಶವನ್ನ  ನೆನಪಿಸಿದ್ರು. ಇದೇ ವೇಳೆ ಮಹಾಭಾರತ ಕಥೆಯಲ್ಲಿ ಕುಮಾರಸ್ವಾಮಿಯವರ ‌ಪಾತ್ರವೇನು ಎಂದಾಗ ಮಹಾಭಾರತದಲ್ಲಿ ಯಾರು ಪ್ರಜೆಗಳು ‌ಇದ್ರೂ,  ಹಾಗೇ ಈಗಿನ ಕಲಿಯುಗದಲ್ಲಿ ನಾನು ಒಬ್ಬ ‌ಪ್ರಜೆ ಅಷ್ಟೇ ಎಂದ್ರು. ಇನ್ನೂ  ಹಾಸನದಲ್ಲಿ ಈ ಸಲ ವಿಧಾನಸಭಾ ‌ಚುನಾವಣೆಯಲ್ಲಿ ಕುಮಾರಸ್ವಾಮಿ ವರ್ಸಸ್ ಬಿಜೆಪಿ ಇರುತ್ತೆ..ಹಾಸನದ ಪರಿಚಯ ‌ನನಗೆ ಇಲ್ಲ.ಆದ್ರೆ ಈ ವರ್ಷ ಹಾಸನದ ರಾಜಕಾರಣದಲ್ಲಿ ಕುಮಾರಸ್ವಾಮಿ ವರ್ಸಸ್ ಬಿಜೆಪಿ ಪೈಪೋಟಿ ಇರಲಿದೆ.  ಹಾಸನದ ವಿಧಾನಸಭಾ ಟಿಕೆಟ್ ಸ್ಚರೂಪಗೆ‌ ನೀಡುವ ವಿಚಾರದ ಬಗ್ಗೆ  ನಾನು ಮನೆಯವರ ಜೊತೆಗೆ ಕುಳಿತು ಚರ್ಚೆ ಮಾಡುತ್ತೇನೆ. ಸ್ವರೂಪನೇ ಆಗಬಹುದು, ಭವಾನಿನೇ ಆಗಬಹುದು. ಆ ಮೇಲೆ ಹೇಳುತ್ತೇನೆ ತಲೆ ಈಗ ಏಕೆ ಕೆಡಿಸಿಕೊಳ್ಳುತ್ತೀರಿ. ನಿಮಗೆ ಏಕೆ ಇಷ್ಟು ಆತುರ ಎಂದ್ರು. 

Kolar: ಪತಿಯನ್ನು MLA ಮಾಡುವಂತೆ ದೇವರ ರಥಕ್ಕೆ ಬಾಳೆಹಣ್ಣು ಎಸೆದ ಪತ್ನಿ!

ಟಿಕೆಟ್ ವಿಚಾರದಲ್ಲಿ ದೇವೇಗೌಡರ ಹೆಸರು ತರಬೇಡಿ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಚರ್ಚೆ ಇಡೀ ರಾಜ್ಯ ರಾಜಕೀಯದಲ್ಲಿ ‌ಭಾರೀ ಚರ್ಚೆಗೆ ಗ್ರಾಸ್ ವಾಗಿದೆ. ಸಂಸದ ಪ್ರಜಲ್ವ ರೇವಣ್ಣ ಟಿಕೆಟ್ ನೀಡುವುದು ರೇವಣ್ಣನೂ ಅಲ್ಲ..ಕುಮಾರಸ್ವಾಮಿವೂ ಅಲ್ಲ..ಟಿಕೆಟ್ ನೀಡುವುದು ದೇವೇಗೌಡರು ಎಂದು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ‌ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಹಾಸನದ ಟಿಕೆಟ್ ವಿಚಾರದಲ್ಲಿ ದೇವೇಗೌಡರ ಹೆಸರು ತರಬೇಡಿ ಎಂದು ಭಾವನಾತ್ಮಕವಾಗಿ ಮಾತನಾಡಲು ಶುರು‌ ಮಾಡಿದ್ರು. ಏಕೆ ಅಂದರೆ ದೇವೇಗೌಡರು ಇವತ್ತು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ. ಅವರ ಹೆಸರು ಇಲ್ಲಿ ತರಬೇಡಿ. ಅವರು ಇರುವ ಪರಿಸ್ಥಿತಿ ಅವರ ಜೀವನದ ಆಯಸ್ಸು ಕಡಿಮೆ ಮಾಡಲು ತಯಾರು ನಾನು ಇಲ್ಲ. ಅವರ ಹೆಸರು ‌ಯಾರು‌ ಮಧ್ಯೆದಲ್ಲಿ ‌ತರಬೇಡಿ. 

ಇದನ್ನ ಸರಿಪಡಿಸುವುದು ಹೇಗೆ ಎಂಬುವುದು ‌ನನಗೆ ಗೊತ್ತಿದೆ. ದೇವೇಗೌಡರ ಹೆಸರು ನಮ್ಮ ಮಕ್ಕಳು ಹೇಳಿರಬಹುದು. ದೇವೇಗೌಡರು ಅಂತಿಮ ಮಾಡುವ ಪರಿಸ್ಥಿತಿಯಲ್ಲಿ ಇದ್ದಾರಾ? ನಿಮಗೆ ಯಾರಿಗೂ ಗೊತ್ತಿಲ್ಲ. ನಾವು ಅದನ್ನು ಬಿಟ್ಟು ಕೊಟ್ಟಿಲ್ಲ. ದೇವೇಗೌಡರ ಬದುಕು‌ ಮುಖ್ಯ ನನಗೆ, ಅವರ ಕಟ್ಟಿರುವ ಜನತಾದಳಕ್ಕೆ 120 ಸೀಟು ತರಲು ನಾನು ಹೊರಟ್ಟಿದ್ದೇನೆ. ಅವರಿಗೆ ಕಾಣಿಕೆ ನೀಡಲು ನಾನು ‌ಪಂಚರತ್ನ ಯಾತ್ರೆ ಹೊರಟ್ಟಿದ್ದೇನೆ. ಅವರು ಸಾಯಿಯುವ ಮುನ್ನ ಅವರ ಪಕ್ಷ ಉಳಿತ್ತು ಅಂತ ಸಾಬೀತು ‌ಮಾಡಲು ನಾನು ಹೊರಟ್ಟಿದ್ದೇನೆ. ದೇವೇಗೌಡರ ಹೆಸರು ಮಧ್ಯೆದಲ್ಲಿ ತರಬೇಡಿ ಎಂದ ಮನನೊಂದು‌ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ತಿಳಿಸಿದರು.

click me!